Home » BSNL Recharge Plans: ಬಿಎಸ್​ಎನ್​ಎಲ್​ನಿಂದ 2 ಹೊಸ ರೀಚಾರ್ಜ್ ಪ್ಲಾನ್​ಗಳು;269 ರೂ, 769 ರೂ

BSNL Recharge Plans: ಬಿಎಸ್​ಎನ್​ಎಲ್​ನಿಂದ 2 ಹೊಸ ರೀಚಾರ್ಜ್ ಪ್ಲಾನ್​ಗಳು;269 ರೂ, 769 ರೂ

0 comments
BSNL Recharge Plans

BSNL Recharge Plans: ಬಿಎಸ್ ಎನ್ ಎಲ್(BSNL) ತನ್ನ ಬಳಕೆದಾರರಿಗಾಗಿ ನೂತನ ಆಫರ್ ಗಳನ್ನು ನೀಡುತ್ತಲೇ ಬಂದಿದೆ. ಹಾಗೆಯೇ ಇದೀಗ ಸರ್ಕಾರಿ ಟೆಲಿಕಾಂ ಕಂಪನಿ ಬಿಎಸ್ಎನ್ಎಲ್ 2 ಹೊಸ ರೀಚಾರ್ಜ್ ಪ್ಲಾನ್​ (BSNL Recharge Plans) ಗಳನ್ನು ಪರಿಚಯಿಸಿದೆ. ಆದರೆ ಈ ಹಿಂದೆ ಇದ್ದ ನಾಲ್ಕು ಹೊಸ ರೀಚಾರ್ಜ್ ಪ್ಯಾಕ್​ಗಳನ್ನು ಹಿಂಪಡೆದಿದೆ.

ಹೌದು, BSNL 269 ಮತ್ತು 769 ರೂ.ಗಳ 2 ಹೊಸ ರೀಚಾರ್ಜ್ ಪ್ಲಾನ್​ಗಳನ್ನು ಬಿಡುಗಡೆ ಮಾಡಿದೆ. ಆದರೆ ಕಂಪನಿಯು ಇತ್ತೀಚೆಗೆ ಪರಿಚಯಿಸಿದ್ದ 71 ರೂ, 104 ರೂ, 135 ರೂ ಮತ್ತು 395 ರೂಗಳ ರೀಚಾರ್ಜ್ ಪ್ಯಾಕುಗಳನ್ನು ಹಿಂಪಡೆದುಕೊಂಡಿದೆ ಎಂದು ಹೇಳಲಾಗಿದೆ. ಹೊಸ ರೀಚಾರ್ಜ್ ಯೋಜನೆಯ ಬಗ್ಗೆ ಮಾಹಿತಿ ತಿಳಿಯೋಣ.

269 ರೂ. ರಿಚಾರ್ಜ್ ಪ್ಲ್ಯಾನ್ :
BSNL STV 269 ರೂ. ರೀಚಾರ್ಜ್ ಪ್ಲಾನ್​ ಪರಿಚಯಿಸಿದ್ದು, 269 ರೂ. ರಿಚಾರ್ಜ್ ಪ್ಲ್ಯಾನ್ ವ್ಯಾಲಿಡಿಟಿ 30 ದಿನಗಳು ಆಗಿದೆ. ಈ ರೀಚಾರ್ಜ್ ಯೋಜನೆಯಲ್ಲಿ ಬಳಕೆದಾರರು ದಿನಕ್ಕೆ 2ಜಿಬಿ ಡಾಟಾ ಸೌಲಭ್ಯ ಪಡೆಯಲಿದ್ದಾರೆ. ಹಾಗೆಯೇ ದಿನಕ್ಕೆ 100 SMS ಲಭ್ಯವಾಗಲಿದೆ. ಇದಿಷ್ಟೇ ಅಲ್ಲದೆ, ಬಿಎಸ್​ಎನ್​ಎಲ್ ಟ್ಯೂನ್, ಜಿಂಗ್ ಆ್ಯಪ್(jing app), ಎರೋಸ್ ನೌ ಆ್ಯಪ್ (Eros Now) ಮುಂತಾದ ಸೌಲಭ್ಯಗಳೂ ಇದರಲ್ಲಿವೆ.

769 ರೂ. ರಿಚಾರ್ಜ್ ಪ್ಲ್ಯಾನ್ :
BSNL STV 769 ರೂ ರೀಚಾರ್ಜ್ ಯೋಜನೆಯ ಅವಧಿಯು 90 ದಿನಗಳಾಗಿದ್ದು, ಈ ಯೋಜನೆಯಲ್ಲಿ ಗ್ರಾಹಕದು ದಿನಕ್ಕೆ 2ಜಿಬಿ ಡಾಟಾ ಹಾಗೂ 100 SMS ಗಳನ್ನು ಪಡೆಯಲಿದ್ದಾರೆ. ಅಲ್ಲದೆ, ಬಿಎಸ್​ಎನ್​ಎಲ್ ಟ್ಯೂನ್, ಲೋಕ್​ಧನ್ ಅಪ್ಲಿಕೇಶನ್, ಜಿಂಗ್ ಆ್ಯಪ್, ಎರೋಸ್ ನೌ ಮುಂತಾದ ಸೌಲಭ್ಯಗಳೂ ಲಭ್ಯವಿದೆ.

You may also like

Leave a Comment