Home » BSY-Jagadish Shettar : ಬಿಎಸ್‌ವೈ ಬಿಜೆಪಿ ಪಕ್ಷ ಬಿಟ್ಟು ಕೆಜೆಪಿ ಪಕ್ಷ ಯಾಕೆ ಕಟ್ಟಿದ್ರು: ಬಿಎಸ್‌ವೈಗೆ ಶೆಟ್ಟರ್‌ ಟಾಂಗ್‌

BSY-Jagadish Shettar : ಬಿಎಸ್‌ವೈ ಬಿಜೆಪಿ ಪಕ್ಷ ಬಿಟ್ಟು ಕೆಜೆಪಿ ಪಕ್ಷ ಯಾಕೆ ಕಟ್ಟಿದ್ರು: ಬಿಎಸ್‌ವೈಗೆ ಶೆಟ್ಟರ್‌ ಟಾಂಗ್‌

0 comments
BSY-Jagadish Shettar

BSY-Jagadish Shettar : ಬೆಂಗಳೂರು : ಬಿಜೆಪಿಗೆ ಜಗದೀಶ್ ಶೆಟ್ಟರ್ ದೋಹ್ರ ಮಾಡಿದ್ದಾರೆ ಎಂಬ ಬಿಎಸ್‌ವೈ ಹೇಳಿಕೆಗೆ ಜಗದೀಶ್‌ ಶೆಟ್ಟರ್‌(BSY-Jagadish Shettar) ಕಿಡಿಕಾರಿದ್ದು, ಬಿಎಸ್‌ವೈ ಬಿಜೆಪಿ ಪಕ್ಷ ಬಿಟ್ಟು ಕೆಜೆಪಿ ಪಕ್ಷ ಯಾಕೆ ಕಟ್ಟಿದ್ರು ಎಂದು ತಿರುಗೇಟು ನೀಡಿದ್ದಾರೆ.

ವಿಧಾನ ಸಭೆ ಚುನಾವಣಾ ಹೊಸ್ತಿಲಿನಲ್ಲೇ ಹಲವು ಬಿಜೆಪಿ ಪ್ರಬಲ ನಾಯಕರು ರಾಜೀನಾಮೆ ನೀಡಿದ ಬೆನ್ನಲ್ಲೆ ಬಿಜೆಪಿ ಅಲರ್ಟ್‌ ಆಗಿದ್ದು, ಮಲ್ಲೇಶ್ವರಂ ಬಿಜೆಪಿ ಕಚೇರಿಯಲ್ಲಿ ಮಾಜಿ ಸಿಎಂ ಬಿ.ಎಸ್‌ ಯಡಿಯೂರಪ್ಪ ಸುದ್ದಿಗೋಷ್ಟಿ ನಡೆಸಿದ್ದಾರೆ.

ಸುದ್ದಿಗೋಷ್ಟಿ ನಡೆಸಿದ ಮಾಜಿ ಸಿಎಂ ಬಿ.ಎಸ್‌ ಯಡಿಯೂರಪ್ಪ ಮಾತನಾಡಿ, ಜಗದೀಶ್‌ ಶೆಟ್ಟರ್‌ ರಾಜೀನಾಮೆ ವಿಚಾರವೂ ಬಹಳ ಚರ್ಚೆಯಾಗಿದೆ. ಭಾರತೀಯ ಜನತಾ ಪಕ್ಷ ಒಂದು ರಾಷ್ಟ್ರೀಯ ಪಕ್ಷ. ಹಳೆ ಬೇರು ಹೊಸ ಚಿಗುರು ಸೇರಿ ಪಕ್ಷವನ್ನು ಬಲಪಡಿಸಬೇಕಾಗಿದೆ. ʼನನಗೆ,  ಶೆಟ್ಟರ್‌ , ಸವಧಿಗೆ ಪಕ್ಷದಲ್ಲಿ ಹಲವು ಅವಕಾಶಗಳನ್ನು ನೀಡಿದೆ.  ಜಗದೀಶ್‌ ಶೆಟ್ಟರ್‌ ರಾಜೀನಾಮೆ ಕೊಟ್ಟಿದ್ದು ಸರಿಯಲ್ಲ. ಶೆಟ್ಟರ್‌ ಗೆ ಏನ್‌ ಅನ್ಯಾಯವಾಗಿತ್ತು? ಜಗದೀಶ್‌ ಶೆಟ್ಟರ್‌ ಪಕ್ಷಕ್ಕೆ ಮಾಡಿದ ದೋಹ್ರ. ಪಕ್ಷದ ಸಹಕಾರವಿಲ್ಲದೇ ಯಾರೂ ಬೆಳೆಯಲು ಸಾಧ್ಯವಿಲ್ಲ. ಜಗದೀಶ್‌ ಶೆಟ್ಟರ್‌ ಮಾಡಿದ ತಪ್ಪಿಗೆ ಕ್ಷಮೇನೆ ಇಲ್ಲ. ಬಿಜೆಪಿಯ ಎಲ್ಲ ಅನುಭವ ಪಡೆದು ದೂರವಾಗಿದ್ದೀರಿʼ  ಎಂದು ಬಿಎಸ್‌ವೈ ಕಿಡಿಕಾರಿದ್ದಾರೆ.

ಈ ಬೆನ್ನಲ್ಲೇ ಬಿಎಸ್‌ವೈ ಸ್ಥಾನ ಮಾನ  ಕುರಿತು ಹೇಳಿಕೆ ನೀಡದಕ್ಕೆ ಸಿಟ್ಟಿಗೆದ್ದು, ಜಗದೀಶ್‌ ಶೆಟ್ಟರ್‌ ಮಾತನಾಡಿ, ʼಬಿಎಸ್‌ವೈ ಬಿಜೆಪಿ ಪಕ್ಷ ಬಿಟ್ಟು ಕೆಜೆಪಿ ಪಕ್ಷ ಯಾಕೆ ಕಟ್ಟಿದ್ರು ಎಂದು ಕಿಡಿಕಾರಿದ್ದಲ್ಲದೇ, ಸ್ಥಾನಮಾನ ಕೊಟ್ಟಿದ್ರೂ ಯಾಕೆ ಪಕ್ಷ ಬಿಟ್ಟು ಹೋಗಿದ್ರು. ಈ ಹಿಂದೆ ನನ್ನ ಪರವಾಗಿ ಹೇಳಿಕೆಗಳನ್ನು ನೀಡಿದ್ದರು. ಬಿಎಸ್‌ವೈ ಈಗ ಹೀಗೆ ಹೇಳ್ತಿದ್ದಾರೆ ಅಂದ್ರೆ ಏನ್‌ ಅರ್ಥ. ಹೈಕಮಾಂಡ್‌ ಸೂಚನೆಯಂತೆ ಹೇಳಿಕೆಯನ್ನು ಬಿಎಸ್‌ವೈ ನೀಡುತ್ತಿದ್ದಾರೆʼ ಎಂದು ಬಿಎಸ್‌ವೈ ಮಾತಿಗೆ ಶೆಟ್ಟರ್‌ ಖಡಕ್‌ ತಿರುಗೇಟು ನೀಡಿದ್ದಾರೆ.

You may also like

Leave a Comment