Home » Video viral : ರಸ್ತೆಯಲ್ಲೇ ಗೂಳಿಗಳ ಕಾದಾಟ | ಅಡ್ಡ ಸಿಕ್ಕಿದ್ದೆಲ್ಲ ಉಡೀಸ್!

Video viral : ರಸ್ತೆಯಲ್ಲೇ ಗೂಳಿಗಳ ಕಾದಾಟ | ಅಡ್ಡ ಸಿಕ್ಕಿದ್ದೆಲ್ಲ ಉಡೀಸ್!

0 comments

ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಾಣಿಗಳ ನಡುವಿನ ಕಾದಾಟದ ಅಪಾಯಕಾರಿ ವಿಡಿಯೋಗಳು ಆಗಾಗೆ ವೈರಲ್‌ ಆಗುತ್ತಿರುತ್ತವೆ. ಮನುಷ್ಯರೇ ಕೆಲವೊಮ್ಮೆ ರಾಕ್ಷಸರಂತೆ ಕಿತ್ತಾಡಿ ಜಗಳವಾಡುವಾಗ ಪ್ರಾಣಿಗಳು ಕಿತ್ತಾಡುವುದರಲ್ಲಿ ದೊಡ್ಡ ವಿಶೇಷವಿಲ್ಲವೆಂದು ಅನಿಸಿದರೂ ಕೂಡ ಪ್ರಾಣಿಗಳ ಕಾಳಗ ಕೆಲವೊಮ್ಮೆ ಭಯ ತರಿಸಿದರೆ, ಮತ್ತೆ ಕೆಲವೊಮ್ಮೆ ಹಾವು ಮುಂಗುಸಿ ಮತ್ತು ಸಿಂಹ ಕಾಡೆಮ್ಮೆಗಳ ಕಾಳಗ ನೋಡುಗರ ಗಮನಸೆಳೆಯುತ್ತವೆ.

ಇದೀಗ ನಗರವೊಂದರಲ್ಲಿ ನಡೆದ ಎರಡು ಗೂಳಿಗಳ ನಡುವಿನ ಕಾಳಗದ ವೀಡಿಯೋ ವೈರಲ್‌ ಆಗಿದ್ದು, ನೋಡುಗರನ್ನು ಬೆಚ್ಚಿ ಬೀಳಿಸುವಂತಿದೆ. ವಿಡಿಯೋದಲ್ಲಿ ಎರಡು ಗೂಳಿಗಳು ವಸತಿ ಪ್ರದೇಶದಲ್ಲಿ ಏಕಾಏಕಿ ಎದುರು ಬದುರಾಗಿದ್ದು, ಈ ಸಂದರ್ಭದಲ್ಲಿ ಎರಡೂ ಬದ್ಧ ವೈರಿಗಳಂತೆ ಕೆಲವೇ ಸೆಕೆಂಡುಗಳಲ್ಲಿ ಪರಸ್ಪರ ಕಾದಾಟಕ್ಕೆ ಇಳಿದಿದ್ದು, ಯಾರು ಬಲ್ಲರು ನಮ್ಮ ಪರಾಕ್ರಮ ಎಂಬ ರೀತಿ.. ಸಮಾನ ಶಕ್ತಿ ಹೊಂದಿರುವ ಕಾರಣ ಎರಡು ಗೂಳಿಗಳು ಹಿಮ್ಮೆಟ್ಟದೆ ಕಾಳಗ ಮುಂದುವರೆಸಿವೆ. ಆದರೆ ಇವುಗಳ ಅಪಾಯಕಾರಿ ಕಾಳಗದಿಂದ ಸುತ್ತಮುತ್ತಲಿನ ಜನರು ಸಾಕಷ್ಟು ತೊಂದರೆ ಅನುಭವಿಸಿದ್ದು, ಎರಡೂ ಹೋರಿಗಳು ಜಗಳವಾಡುತ್ತಲೇ ಮನೆಯೊಂದರ ಹತ್ತಿರ ಹೋಗಿ ಎಲ್ಲವನ್ನೂ ನಾಶಪಡಿಸಿದೆ.

https://www.instagram.com/reel/CkyCbzPjHl7/?utm_source=ig_web_copy_link

ಈ ಘಟನೆ ನಡೆದಿರುವುದು ಎಲ್ಲಿ ಎಂಬ ಮಾಹಿತಿ ಲಭ್ಯವಾಗದೆ ಹೋದರೂ , ನಡು ರಸ್ತೆಯಲ್ಲಿ ನಡೆದ ಗೂಳಿಗಳ ಕಾಳಗ ಭಯಾನಕವಾಗಿದ್ದು, ಇದನ್ನು ಇನ್‌ಸ್ಟಾಗ್ರಾಮ್‌ನಲ್ಲಿ animals_powers ಹೆಸರಿನ ಪುಟದಲ್ಲಿ ಅಪ್‌ಲೋಡ್ ಮಾಡಲಾಗಿದೆ. ಸಾಮಾಜಿಕ ಮಾಧ್ಯಮಗಳಲ್ಲಿ ಸಿಕ್ಕಾಪಟ್ಟೆ ವೈರಲ್‌ ಆಗಿದ್ದು ಸಾವಿರಾರು ಮಂದಿ ವೀಕ್ಷಣೆ ಮಾಡಿದ್ದಾರೆ.

You may also like

Leave a Comment