Home » Puttur: ದೇವರಗದ್ದೆಯಲ್ಲಿದ್ದ ಹೋರಿ ನಾಪತ್ತೆ -ಬಲ್ನಾಡಿನ ಉಳ್ಳಾಲ್ತಿಯ ಮೊರೆ ಹೋದ ಭಕ್ತರು

Puttur: ದೇವರಗದ್ದೆಯಲ್ಲಿದ್ದ ಹೋರಿ ನಾಪತ್ತೆ -ಬಲ್ನಾಡಿನ ಉಳ್ಳಾಲ್ತಿಯ ಮೊರೆ ಹೋದ ಭಕ್ತರು

by Praveen Chennavara
1 comment
Puttur

Puttur: ಇತಿಹಾಸ ಪ್ರಸಿದ್ದ ಪುತ್ತೂರು ಶ್ರೀ ಮಹತೋಭಾರ ಮಹಾಲಿಂಗೇಶ್ವರ ದೇವಸ್ಥಾನದ ದೇವರ ಮಾರು ಗದ್ದೆಯಲ್ಲಿ ತಿರುಗಾಡುತ್ತಿದ್ದ ಹೋರಿ ನಾಪತ್ತೆಯಾಗಿದ್ದು, ನಾಪತ್ತೆಯಾಗಿರುವ ಹೋರಿಯ ಪತ್ತೆಗಾಗಿ ಬಜರಂಗದಳದ ಕಾರ್ಯಕರ್ತರು ಹಾಗೂ ಭಕ್ತರು ಕಾರಣಿಕ ಶಕ್ತಿ ಬಲ್ನಾಡಿನ ಉಳ್ಳಾಲ್ತಿ ದೈವದ ಮೊರೆ ಹೋಗಿದ್ದಾರೆ.

ಇದನ್ನೂ ಓದಿ: Pavitra Jayaram: ”ಪವಿತ್ರಾ ಹುಟ್ಟುಹಬ್ಬಕ್ಕೆ ಹೋಗುತ್ತಿದ್ದೇನೆ” ಎಂದು ಪೋಸ್ಟ್ ಮಾಡಿ ನಟಿ Pavithra Jayaram ಗೆಳೆಯ ಚಂದು ಆತ್ಮಹತ್ಯೆ !

ದೇವಸ್ಥಾನದ ಗದ್ದೆಯಲ್ಲಿ ತಿರುಗಾಡುತ್ತಿದ್ದ ಎರಡು ಹೋರಿಗಳು ಇದ್ದಕ್ಕಿದ್ದ ಹಾಗೆ ನಾಪತ್ತೆಯಾಗಿದ್ದವು. ಈ ಕುರಿತು ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ಬಜರಂಗದಳದವರು ಪ್ರಕರಣ ದಾಖಲಿಸಿದ್ದರು.

ಇದೀಗ ಬಜರಂಗದಳ ಹಾಗೂ ಭಕ್ತರು ಹೋರಿಗಾಗಿ ದೈವದ ಮೊರೆ ಹೋಗಿದೆ.ಅಲ್ಲದೇ ಪ್ರಶ್ನಾಚಿಂತನೆಯಲ್ಲೂ ಹೋರಿಯ ಕುರಿತು ಕೇಳಿದ್ದಾರೆ.ಅದರಲ್ಲಿ ಕಂಡುಬಂದಂತೆ ಹೋರಿ ಅಡ್ಯನಡ್ಕ ಸಮೀಪ ಇದೆ ಎಂದು ತಿಳಿದು ಬಂದಿದೆ.

ಇದನ್ನೂ ಓದಿ: JEE advanced 2024 Hall ticket ಅಪ್‌ಡೇಟ್‌: ಪ್ರವೇಶ ಕಾರ್ಡ್ ಡೌನ್‌ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ 

ಜ್ಯೋತಿಷ್ಯ ಚಿಂತನೆಯಲ್ಲಿ ಹೋರಿ ಜೀವಂತವಾಗಿರುವ ಕುರಿತು ಮಾಹಿತಿ ತಿಳಿದು ಬಂದಿದೆ.ಈ ಹಿನ್ನಲೆಯಲ್ಲಿ ಬಜರಂಗದಳ ಕಾರ್ಯಕರ್ತರು ಹಾಗೂ ಭಕ್ತರು ಬಲ್ನಾಡು ಉಳ್ಳಾಲ್ತಿ ದೈವಸ್ಥಾನದಲ್ಲಿ ಪ್ರಾರ್ಥನೆ ಸಲ್ಲಿಸಿದ್ದಾರೆ. ಹೋರಿ ಕಳ್ಳತನಗೈದವರಿಗೆ ತಕ್ಕ ಶಿಕ್ಷೆ ದೈವದ ಮೂಲಕ ಸಿಗುವಂತೆ ಪ್ರಾರ್ಥಿಸಿದ್ದಾರೆ.

You may also like

Leave a Comment