Dharmasthala : ಧರ್ಮಸ್ಥಳ ಶವ ಹೂತಿಟ್ಟ ಪ್ರಕರಣದ ತನಿಖೆಯಲ್ಲಿ ಚುರುಕುಗೊಂಡಿದ್ದು ಇದೀಗ ಅನಾಮಿಕ ಸಾಕ್ಷಿ ದೂರುದಾರನನ್ನು ಬೆಳ್ತಂಗಡಿ ಎಸ್ಐಟಿ ಕಚೇರಿಯಿಂದ ಧರ್ಮಸ್ಥಳದ ನೇತ್ರಾವತಿಗೆ ಕರೆತಂದಿದ್ದು, ತನಿಖೆಯನ್ನು ಶುರು ಮಾಡಲಾಗಿದೆ.
ಇದೀಗ ಧರ್ಮಸ್ಥಳದ ನೇತ್ರಾವತಿ ಸ್ನಾನ ಘಟ್ಟಕ್ಕೆ ಪೊಲೀಸರು ಕರೆ ತಂದ ಈ ದೂರುದಾರ ಶವಗಳನ್ನು ಹೂತಿಟ್ಟ ಜಾಗಗಳನ್ನು ತೋರಿಸುತ್ತಿದ್ದಾನೆ. ಪೊಲೀಸರು ಆತನನ್ನು ಕಾಡಿನೊಳಗೆ ಕರೆದುಕೊಂಡು ಹೋಗಿ ಸ್ಥಳ ಮಹಾಜರು ಮಾಡುತ್ತಿದ್ದಾರೆ. ಅನಾಮಿಕ ತೋರುತ್ತಿರುವ ಜಾಗಗಳನ್ನು ಪೊಲೀಸರು ಪರಿಶೀಲನೆ ಮಾಡುತ್ತಿದ್ದಾರೆ. ಇನ್ನು ಕಂದಾಯ ಇಲಾಖೆ, ಅರಣ್ಯ ಇಲಾಖೆ, ಎಸ್‌ಬಿಸಿಒ ಅಧಿಕಾರಿಗಳು, ಎಫ್‌ಎಎಲ್ ತಜ್ಞರು ಎಸ್‌ಐಟಿ ತನಿಖಾಧಿಕಾರಿಗಳೊಂದಿಗೆ ಕೈಜೋಡಿಸಿದ್ದಾರೆ.
ಇದನ್ನೂ ಓದಿ:Suicide:ಮಲ್ಪೆ: ಬೆಲ್ಟ್ ನಿಂದ ನೇಣು ಬಿಗಿದು ಕಾಲೇಜು ವಿದ್ಯಾರ್ಥಿ ಆತ್ಮಹತ್ಯೆ!
