Home » ಪ್ರವಾಸ ಮುಗಿಸಿ ಬರುತ್ತಿದ್ದ ಬಸ್‌ ಆಕ್ಸಿಡೆಂಟ್‌ | ಕಂದಕಕ್ಕೆ ಬಿದ್ದ ಬಸ್‌ನಡಿಗೆ ಸಿಲುಕಿ ವಿದ್ಯಾರ್ಥಿ ದಾರುಣ ಸಾವು

ಪ್ರವಾಸ ಮುಗಿಸಿ ಬರುತ್ತಿದ್ದ ಬಸ್‌ ಆಕ್ಸಿಡೆಂಟ್‌ | ಕಂದಕಕ್ಕೆ ಬಿದ್ದ ಬಸ್‌ನಡಿಗೆ ಸಿಲುಕಿ ವಿದ್ಯಾರ್ಥಿ ದಾರುಣ ಸಾವು

0 comments

ವಿದ್ಯಾರ್ಥಿಗಳಿದ್ದ ಬಸ್ಸೊಂದು ಕಂದಕಕ್ಕೆ ಉರುಳಿದ ಪರಿಣಾಮ ವಿದ್ಯಾರ್ಥಿಯೋರ್ವ ಸಾವಿಗೀಡಾದ ಘಟನೆ ನಡೆದಿದೆ. ಈ ದುರ್ಘಟನೆಯಲ್ಲಿ 40 ಜನರು ಗಾಯಗೊಂಡಿದ್ದಾರೆ. ಪ್ರವಾಸದಿಂದ ಹಿಂದಿರುಗುತ್ತಿದ್ದ ವಿದ್ಯಾರ್ಥಿಗಳಿದ್ದ ಬಸ್‌ ಕೇರಳದ ಆದಿಮಲಿ ಸಮೀಪ ಕಂದಕಕ್ಕೆ ಉರುಳಿದೆ.

ಭಾನುವಾರ ನಸುಕಿನಲ್ಲಿ 1:15ರ ಸುಮಾರಿಗೆ ಈ ಅಪಘಾತ ಸಂಭವಿಸಿದೆ. ತಿರೂರ್ ಐಟಿಐ ಕಾಲೇಜು ವಿದ್ಯಾರ್ಥಿಗಳು ಅಧ್ಯಯನ ಪ್ರವಾಸ ಮುಗಿಸಿ ವಾಪಸಾಗುತ್ತಿದ್ದ ಸಂದರ್ಭದಲ್ಲಿ ಈ ಘಟನೆ ನಡೆದಿದೆ. ತಿರುವುಗಳು ಹೆಚ್ಚಿರುವ ಈ ಭಾಗದಲ್ಲಿ ಚಾಲಕನಿಗೆ ಕಡಿದಾದ ರಸ್ತೆಯಲ್ಲಿ ಬಸ್‌ ತಿರುಗಿಸಲು ಸಾಧ್ಯವಾಗದೆ ಕಂದಕ್ಕೆ ಉರುಳಿದೆ. ಮೃತ ವಿದ್ಯಾರ್ಥಿಯು ಬಸ್‌ನ ಅಡಿಯಲ್ಲಿ ಸಿಲುಕಿದ್ದರು ಎಂದು ತಿಳಿದು ಬಂದಿದೆ.

ಅಪಘಾತ ನಡೆದಿರುವ ಜಾಗವು ಅರಣ್ಯ ಪ್ರದೇಶವಾಗಿದ್ದು, ಬಸ್‌ ಮಗುಚಿ ಬಿದ್ದಿರುವುದರಿಂದ ರಕ್ಷಣಾ ಕಾರ್ಯಾಚರಣೆಗೆ ಸವಾಲಾಗಿದೆ. ಪೊಲೀಸರು ಮತ್ತು ಅಧಿಕಾರಿಗಳು ರಕ್ಷಣಾ ಕಾರ್ಯಾಚರಣೆ ನಡೆಸಿದ್ದಾರೆ. ಗಾಯಗೊಂಡವರನ್ನು ತಾಲ್ಲೂಕು ಆಸ್ಪತ್ರೆ ಹಾಗೂ ಖಾಸಗಿ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ.

You may also like

Leave a Comment