Home » ಸುಳ್ಯ : ಬೈಕ್ ಗೆ ಬಸ್ ಡಿಕ್ಕಿ, ಬೈಕ್ ಸವಾರ ಸ್ಥಳದಲ್ಲೇ ಸಾವು

ಸುಳ್ಯ : ಬೈಕ್ ಗೆ ಬಸ್ ಡಿಕ್ಕಿ, ಬೈಕ್ ಸವಾರ ಸ್ಥಳದಲ್ಲೇ ಸಾವು

by Praveen Chennavara
0 comments

ಸುಳ್ಯ : ಸುಳ್ಯದ ಮೊಗರ್ಪಣೆ ವೆಂಕಟರಮಣ ಸೊಸೈಟಿ ಬಳಿ ಆದಿತ್ಯವಾರ ರಾತ್ರಿ ನಡೆದ ಭೀಕರ ರಸ್ತೆ ಅಪಘಾತದಲ್ಲಿ ರಾಜು ಎಂಬವರು ಮೃತಪಟ್ಟ ಘಟನೆ ನಡೆದಿದೆ.

ಸುಳ್ಯದಿಂದ ಮಂಗಳೂರು ಕಡೆ ಹೊಗುತ್ತಿದ್ದ ಬಸ್ ಹಾಗೂ ಹಳೆಗೇಟು ಕಡೆಯಿಂದ ಸುಳ್ಯ ಕಡೆಗೆ ರಾಜು ಎಂಬವರು ಚಲಾಯಿಸಿಕೊಂಡು ಬರುತ್ತಿದ್ದ ಬೈಕ್‌ಗೆ ಡಿಕ್ಕಿಯಾಗಿದೆ.

ಡಿಕ್ಕಿಯ ತೀವ್ರತೆಯಿಂದ ಬೈಕ್ ಸವಾರ ಸುಳ್ಯ ಸರಕಾರಿ ಆಸ್ಪತ್ರೆ ಹಿಂಬದಿ ನಿವಾಸಿ ಸುಳ್ಯದಲ್ಲಿ ಸಿಸಿ ಕ್ಯಾಮರಾ ಅಳವಡಿಕೆ ಮತ್ತು ಸರ್ವಿಸ್ ವೃತ್ತಿ ಮಾಡುತ್ತಿದ್ದ ರಾಜು ಎಂಬವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಸುಳ್ಯ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

You may also like

Leave a Comment