Home » Viral Video : ಮೊಬೈಲ್ ನಲ್ಲಿ ಕ್ರಿಕೆಟ್ ಆಟಗಾರರ ಸೆರೆ ಹಿಡಿಯಲು ಬಸ್ ಡ್ರೈವರ್ ಹೊಸ ಪ್ಲಾನ್ – ವಿಡಿಯೋ ವೈರಲ್

Viral Video : ಮೊಬೈಲ್ ನಲ್ಲಿ ಕ್ರಿಕೆಟ್ ಆಟಗಾರರ ಸೆರೆ ಹಿಡಿಯಲು ಬಸ್ ಡ್ರೈವರ್ ಹೊಸ ಪ್ಲಾನ್ – ವಿಡಿಯೋ ವೈರಲ್

0 comments

Viral Video : ಕ್ರಿಕೆಟ್ ಎಂದರೆ ಹಲವರಿಗೆ ಪಂಚಪ್ರಾಣ. ಅದರಲ್ಲೂ ಕ್ರಿಕೆಟ್ ಆಟಗಾರರನ್ನು ಕಂಡರಂತೂ ಅಭಿಮಾನಿಗಳು ಹುಚ್ಚೆದ್ದು ಕುಡಿಯುತ್ತಾರೆ. ಅವರೊಂದಿಗೆ ಫೋಟೋ ತೆಗೆಸಿಕೊಳ್ಳಲು, ವಿಡಿಯೋ ಮಾಡಲು ಕಾದು ಕುಳಿತಿರುತ್ತಾರೆ. ಇದೀಗ ಬಸ್ ಡ್ರೈವರ್ ಒಬ್ಬ ತನ್ನ ಮೊಬೈಲ್ ನಲ್ಲಿ ಕ್ರಿಕೆಟ್ ಆಟಗಾರರನ್ನು ಸೆರೆಹಿಡಿಯಲು ಮಾಡಿರುವ ಪ್ಲಾನ್ ಒಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಹೌದು, ದೆಹಲಿ ತಂಡದ ಬಸ್ ಚಾಲಕ ಬಹಳ ಚಾಲಕಿತನಿಂದ ಟೀಂ ಇಂಡಿಯಾದ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿಯನ್ನು ತನ್ನ ಮೊಬೈಲ್ ಫೋನ್ ನಲ್ಲಿ ಸೆರೆ ಹಿಡಿದಿದ್ದಾರೆ. ವೈರಲ್ ಆಗಿರುವ ವಿಡಿಯೋದಲ್ಲಿ ಡ್ರೈವರ್ ತನ್ನ ಮೊಬೈಲ್ ನ್ನು ಪಕ್ಕದಲ್ಲಿಟ್ಟು ತನ್ನನ್ನು ಮತ್ತು ಕೊಹ್ಲಿ ಮತ್ತಿತರ ದೆಹಲಿ ಆಟಗಾರರನ್ನು ರೆಕಾರ್ಡ್ ಮಾಡುವುದನ್ನು ನೋಡಬಹುದು. ಆದಾಗ್ಯೂ ತಮಾಷೆಯ ಸಂಗತಿಯೆಂದರೆ ಯಾರಿಗೂ ಅನುಮಾನ ಬಾರದಂತೆ ಓರೆ ಗಣ್ಣಿನಲ್ಲಿ ಆಟಗಾರರು ಮತ್ತು ಮೊಬೈಲ್ ನ್ನು ನೋಡುತ್ತಾ, ಸ್ಟಾರ್ ಬ್ಯಾಟರ್‌ನ್ನು ಮಾತನಾಡಿಸದೆ ಯಾವುದೇ ಅನುಮಾನಬಾರದಂತೆ ರೆಕಾರ್ಡ್ ಮಾಡಿದ್ದಾರೆ.

ಕೊಹ್ಲಿ, ಇಶಾಂತ್ ಶರ್ಮಾ ಮತ್ತಿತರರ ಆಟಗಾರರೊಂದಿಗೆ ಬಸ್ ನಿಂದ ಇಳಿಯುವಾಗ ಈ ವಿಡಿಯೋ ಮಾಡಲಾಗಿದೆ. ವೈರಲ್ ಆದ ಈ ವಿಡಿಯೋ ಗೆ ಅಭಿಮಾನಿಗಳು ಬಗೆಬಗೆಯಾಗಿ ಕಮೆಂಟ್ ಮಾಡುತ್ತಿದ್ದಾರೆ.

https://twitter.com/i/status/2004526302716625065

You may also like