1
Accident: ವಿರಾಜಪೇಟೆಯ(Viraj Pet) ಮುಖ್ಯ ರಸ್ತೆಯಲ್ಲಿ ಖಾಸಗಿ ಬಸ್ಸು(Bus) ಮತ್ತು ವ್ಯಾನ್(Van) ಮಧ್ಯೆ ಅಪಘಾತ ಸಂಭವಿಸಿದೆ. ವ್ಯಾನ್ನಲ್ಲಿ ಒಂದೇ ಕುಟುಂಬ 7 ಮಂದಿ ಸದಸ್ಯರು ಇದ್ದರು. ವ್ಯಾನ್ ನಾಪೋಕ್ಲು ಕಡೆಯಿಂದ ವಿರಾಜಪೇಟೆಗೆ ತೆರಳುತ್ತಿತ್ತು. ಖಾಸಗಿ ಬಸ್ಸು ವಿರಾಜಪೇಟೆ ಇಂದ ನಾಪೋಕ್ಲುಗೆ ಸಾಗುತ್ತಿತ್ತು. ಅಪಘಾತದಲ್ಲಿ ವ್ಯಾನ್ ನಲ್ಲಿ ಇದ್ದ ಇಬ್ಬರಿಗೆ ಗಂಭೀರ ಗಾಯವಾಗಿದ್ದು, ಮಡಿಕೇರಿ ಆಸ್ಪತ್ರಗೆ(Hospital) ರವಾನೆ ಮಾಡಲಾಗಿದೆ.
ನಾಪೋಕ್ಲು ಠಾಣಾಧಿಕಾರಿ ಮಂಜುನಾಥ್ ಹಾಗೂ ಸಿಬ್ಬಂದಿ ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ, ಕಾನೂನು ಕ್ರಮ ಕೈಗೊಂಡಿದ್ದಾರೆ.
