Home » Bank Employees Salary Hike: ಬ್ಯಾಂಕ್‌ ನೌಕರರಿಗೆ ಬಂಪರ್‌ ಗಿಫ್ಟ್‌!!! ವೇತನದಲ್ಲಿ 15% ಹೆಚ್ಚಳ, ಐದು ದಿನ ಕೆಲಸ – IBA ಪ್ರಸ್ತಾಪ

Bank Employees Salary Hike: ಬ್ಯಾಂಕ್‌ ನೌಕರರಿಗೆ ಬಂಪರ್‌ ಗಿಫ್ಟ್‌!!! ವೇತನದಲ್ಲಿ 15% ಹೆಚ್ಚಳ, ಐದು ದಿನ ಕೆಲಸ – IBA ಪ್ರಸ್ತಾಪ

by Mallika
1 comment
Bank Employees Salary Hike

Bank Employees: ತುಟ್ಟಿಭತ್ಯೆ ಹೆಚ್ಚಳವಾದ ನಂತರ ಇದೀಗ ಬ್ಯಾಂಕ್‌ ಉದ್ಯೋಗಿಗಳಿಗೆ ಕೂಡಾ ಸಂಬಳ ಹೆಚ್ಚಾಗುವ ಸಾಧ್ಯತೆ ಕಂಡು ಬಂದಿದೆ. ಸರಕಾರಿ ಸ್ವಾಮ್ಯದ ಬ್ಯಾಂಕುಗಳು ಮತ್ತು ಹಳೆಯ ಖಾಸಗಿ ಬ್ಯಾಂಕುಗಳು ಉದ್ಯೋಗಿಗಳ ವೇತನವನ್ನು ಸರಾಸರಿ ಶೇ.15 ರಷ್ಟು ಹೆಚ್ಚಿಸಲು ಮುಂದಾಗಿದೆ ಎಂದು ವರದಿಯಾಗಿದೆ. ಅಷ್ಟು ಮಾತ್ರವಲ್ಲದೇ ಶೀಘ್ರದಲ್ಲೇ ಐದು ದಿನಗಳ ಕೆಲಸದ ವಿಷಯವನ್ನು ಕೂಡಾ ಆರಂಭಿಸುವ ಯೋಚನೆ ಮುನ್ನಲೆಗೆ ಬಂದಿದೆ.

ಭಾರತೀಯ ಬ್ಯಾಂಕ್‌ಗಳ ಸಂಘ (ಐಬಿಎ) ಯು ಬ್ಯಾಂಕ್‌ ಉದ್ಯೋಗಿಗಳಿಗೆ ಶೇ.15ರಷ್ಟು ವೇತನ ಹೆಚ್ಚಳಕ್ಕೆ ಆಗ್ರಹ ಮಾಡಿದೆ. ಹಾಗೆನೇ ಇತರೆ ಹೆಚ್ಚಿನ ವೇತನಕಕ್ಕೆ ಒಕ್ಕೂಟಗಳು ಒತ್ತಾಯಿಸುತ್ತಿರುವುದಾಗಿಯೂ, ಇದರಲ್ಲಿ ಪಂಜಾಬ್‌ ನ್ಯಾಷನಲ್‌ ಬ್ಯಾಂಕ್ ನಂತಹ ಬ್ಯಾಂಕ್‌ಗಳು ವೇತನ ಹೆಚ್ಚಳಕ್ಕೆ ಹೆಚ್ಚಿನ ಮೊತ್ತ ಮೀಸಲಿಡಲು ಆರಂಭ ಮಾಡಿದೆ.

ಸೆಪ್ಟೆಂಬರ್‌ ತ್ರೈಮಾಸಿಕದಲ್ಲಿ ಪಂಜಾಬ್‌ ನ್ಯಾಷನಲ್‌ ಬ್ಯಾಂಕ್‌ ಶೇ.10 ರಷ್ಟು ವೇತನ ಹೆಚ್ಚಳಕ್ಕೆ ಬಜೆಟ್‌ ಬದಲು ಶೇ.15ರಷ್ಟು ಮೊತ್ತವನ್ನು ಮೀಸಲಿಟ್ಟಿದೆ. ಹಾಗಾಗಿ ಈ ಎಲ್ಲಾ ಕಾರಣದಿಂದ ಬ್ಯಾಂಕ್‌ ನೌಕರರ ವೇತನ ಶೇ.15 ರಷ್ಟು ಏರಿಕೆ ಆಗುವ ಎಲ್ಲಾ ಸಾಧ್ಯತೆ ಇದೆ ಎನ್ನಲಾಗಿದೆ.

 

ಇದನ್ನು ಓದಿ: NPS ನಿಯಮದಲ್ಲಿ ಮಹತ್ವದ ಬದಲಾವಣೆ- ಬ್ಯಾಂಕ್ ಖಾತೆ ಮಾಹಿತಿ ಪರಿಶೀಲನೆಗೆ ಬಂತು ನೋಡಿ ಹೊಸ ವಿಧಾನ !!

You may also like

Leave a Comment