Home » Income Tax: ಇನ್‌ಕಮ್‌ ಟ್ಯಾಕ್ಸ್‌ ಪಾವತಿದಾರರಿಗೆ ಭರ್ಜರಿ ಸಿಹಿ ಸುದ್ದಿ! ತಕ್ಷಣ ಕಾರ್ಯಪ್ರವೃತ್ತರಾಗಿ 5000 ರೂ. ಉಳಿಸಿ!

Income Tax: ಇನ್‌ಕಮ್‌ ಟ್ಯಾಕ್ಸ್‌ ಪಾವತಿದಾರರಿಗೆ ಭರ್ಜರಿ ಸಿಹಿ ಸುದ್ದಿ! ತಕ್ಷಣ ಕಾರ್ಯಪ್ರವೃತ್ತರಾಗಿ 5000 ರೂ. ಉಳಿಸಿ!

by Mallika
0 comments
Income Tax

Income Tax: ಆದಾಯ ತೆರಿಗೆ ರಿಟರ್ನ್‌ ಮಾಡುವವರಿಗೆ ಸರಕಾರದಿಂದ ಮಹತ್ವದ ಮಾಹಿತಿಯೊಂದು ಬಂದಿದೆ. ಸರಕಾರದಿಂದ ಐಟಿಆರ್‌ ಸಲ್ಲಿಸಲು ಕೊನೆಯ ದಿನಾಂಕ ಜುಲೈ 31, 2023 ಎಂದು ಹೇಳಲಾಗಿತ್ತು. ಆದರೆ ಈಗ ಗುಡ್‌ನ್ಯೂಸ್‌ ಒಂದು ಹೊರಬಿದ್ದಿದೆ. ಅದೇನೆಂದರೆ ಜುಲೈ 31ರ ನಂತರವೂ ನೀವು ಐಟಿಆರ್‌ ಸಲ್ಲಿಸಬಹುದು. ಇನ್ನೂ ಖುಷಿಯ ವಿಷಯವೆಂದರೆ ಇದಕ್ಕೆ ನೀವು ಯಾವುದೇ ದಂಡ ಪಾವತಿ ಮಾಡಬೇಕಾಗಿಲ್ಲ ಎಂದು ತೆರಿಗೆ ಇಲಾಖೆ ನಿರ್ಧರಿಸಿದೆ. ಹಾಗಾಗಿ ಆದಾಯ ತೆರಿಗೆ ರಿಟರ್ನ್‌ ಮಾಡುವವರಿಗೆ ರೂ.5000 ದಂಡ ಪಾವತಿ ಉಳಿತಾಯವಾಗಿದೆ ಎಂದು ಹೇಳಬಹುದು.

ಇದನ್ನೂ ಓದಿ: ವಾಟ್ಸಪ್ ಮೂಲಕ ಈಗ ಗೃಹಲಕ್ಷ್ಮೀ ದುಡ್ಡು ಪಡೆಯೋ ಅವಕಾಶ ! ಹೇಗೆ ಗೊತ್ತಾ? ಈ ಲೇಖನ ಓದಿ !

ರಿಟರ್ನ್ಸ್‌ ಬಗ್ಗೆ ಅನೇಕ ಮನವಿ ಸಲ್ಲಿಸದರೂ ಸರಕಾರ ಯಾವುದೇ ದಿನಾಂಕ ವಿಸ್ತರಿಸುವ ನಿರ್ಧಾರ ಕೈಗೊಂಡಿರಲಿಲ್ಲ. ಆದರೆ ಈಗ ಆದಾಯ ಇಲಾಖೆ( Income Tax) ಐಟಿಆರ್‌ ಸಲ್ಲಿಸಲೂ ಮುಂದೆ ಕೂಡಾ ಯಾವುದೇ ದಂಡ ತೆರಬೇಕಾಗಿಲ್ಲ ಎಂದು ಹೇಳಿದೆ. ಮೂಲ ವಿನಾಯಿತಿಯ ಮಿತಿಯನ್ನು ಓರ್ವ ವ್ಯಕ್ತಿಯ ಒಟ್ಟು ಆದಾಯ ಮೀರದಿದ್ದರೆ, ಐಟಿಆರ್‌ ತಡವಾಗಿ ಸಲ್ಲಿಸಿದರೆ, ದಂಡ ತೆರುವ ಅವಶ್ಯಕತೆ ಇಲ್ಲ. ಇದರ ಬಗ್ಗೆ ಸೆಕ್ಷನ್‌ 234Fನಲ್ಲಿ ಆದಾಯ ತೆರಿಗೆ ಕಾಯಿದೆ ಉಲ್ಲೇಖಿಸಿದೆ. ಆದಾಯ ತೆರಿಗೆ ಕಾಯಿದೆಯ ನಿಬಂಧನೆಗಳ ಪ್ರಕಾರ, ಗಡುವು ಮುಗಿದ ನಂತರ ಐಟಿಆರ್ ಅನ್ನು ಸಲ್ಲಿಸಲು ಪ್ರತಿಯೊಬ್ಬರೂ ವಿಳಂಬ ಶುಲ್ಕವನ್ನು ಪಾವತಿಸುವ ಅಗತ್ಯವಿಲ್ಲ.

ಇದನ್ನೂ ಓದಿ: Udupi Toilet Video: ಟಾಯ್ಲೆಟ್ ನಲ್ಲಿ ವಿಡಿಯೋ ಮಾಡಿದ್ದನ್ನು ಒಪ್ಪಿಕೊಂಡ ಹುಡುಗಿಯರು, ತನಿಖೆ ವೇಳೆ ಸ್ಪೋಟಕ ಸತ್ಯ ಬಯಲು !

You may also like