London : ಮೊನ್ನೆ ಪಾಡ್ ಕಾಸ್ಟ್ ಒಂದರ ಇಂಟರ್ ವ್ಯೂ ಸಂದರ್ಭ ಲಂಡನ್ ಬಾಯ್ ವಿಜಯ್ ಮಲ್ಯರನ್ನು ನೋಡಿದ ಜನರು, ಅರೆ ಇವರೇನಾ. ವಿಜಯ್ ಮಲ್ಯ ಅನ್ನುವ ಹಾಗೆ ನೋಡುತ್ತಿದ್ದಾರೆ. ವಿಜಯ್ ಮಲ್ಯ ಶಾರೀರಿಕವಾಗಿ ಬಹಳಷ್ಟು ಬದಲಾಗಿ ಹೋಗಿದ್ದಾರೆ. ತುಂಬಿ ತುಳುಕುತ್ತಿದ್ದ ಮುಖ ಇಳಿದಿದೆ. 69 ವಯಸ್ಸಿನ ಮಲ್ಯ ಇನ್ನಷ್ಟು ವಯಸ್ಸಾದವರ ಥರ ಕಾಣಿಸುತ್ತಿದ್ದಾರೆ. ಅವರ ಈ ಲುಕ್ ನೋಡಿ ಜನರು ಅಚ್ಚರಿಯಿಂದ ನೋಡುತ್ತಿದ್ದಾರೆ. ಇದೆಲ್ಲಾ ಜನರ ಗಮನಕ್ಕೆ ಬಂದದ್ದು ಮೊನ್ನೆ ನಡೆದ ಪಾಡ್ ಕಾಸ್ಟ್ ಸೆಶನ್ ಒಂದರಲ್ಲಿ.
ಸುಮಾರು ಒಂದು 10 ವರ್ಷಗಳ ನಂತರ ಅಪರೂಪಕ್ಕೆ ಎಂಬಂತೆ ಸಂದರ್ಶನವೊಂದರಲ್ಲಿ ಮೌನ ಮುರಿದ ಲಿಕ್ಕರ್ ಬ್ಯಾರೆನ್, ಉದ್ಯಮಿ, ಕಿಂಗ್ ಫಿಶರ್ ಏರ್ ಲೈನ್ಸ್ ಮಾಜಿ ಮುಖ್ಯಸ್ಥ, RCM ಸಂಸ್ಥಾಪಕ ಹೀಗೆ ಹತ್ತು ಹಲವು ಬಿರುದಾಂಕಿತ ವಿಜಯ್ ಮಲ್ಯ, ಬ್ಯಾಂಕುಗಳಿಗೆ ಸಾಲ ಮರು ಪಾವತಿ ಮಾಡುವುದೇ ನನ್ನ ಉದ್ದೇಶ ಎಂದು ಸ್ಪಷ್ಟವಾಗಿ ತಿಳಿಸಿದ್ದಾರೆ. ವಿಜಯ್ ಮಲ್ಯ ರಾಜ್ ಶಾಮಾನಿಯ ಜನಪ್ರಿಯ ಪಾಡ್‌ಕ್ಯಾಸ್ಟ್ ನಲ್ಲಿ ನಾಲ್ಕು ಗಂಟೆಗಳ ವಿಜಯ ಮಲ್ಯ ಅವರ ಸಂದರ್ಶನದ ಎಪಿಸೋಡ್ ಈ ವಾರ ಬಿಡುಗಡೆಯಾಗಿದೆ. ಆ ಸಂದರ್ಭ ಅವರು ತಮ್ಮ ಕಾನೂನು ಹೋರಾಟವನ್ನು ಸಮರ್ಥಿಸಿಕೊಂಡಿದ್ದಾರೆ.
ಈ ಸಂದರ್ಭ ಅವರು ಮಾಧ್ಯಮಗಳ ವಿರುದ್ಧ ಕಿಡಿಕಾರಿದ್ದಾರೆ. ವಿಚಾರಣೆ ಬಳಿಕ ಭಾರತಕ್ಕೆ ಮರಳುವ ಇಚ್ಚೆಯನ್ನು ವ್ಯಕ್ತಪಡಿಸಿದ್ದಾರೆ. ನನ್ನನ್ನು ವಿವಿಧ ಹೆಸರುಗಳಿಂದ ಕರೆದು ನಿಂದಿಸಿ, ನನ್ನ ಮೇಲೆ ಜನರ ಕೋಪ ಹೆಚ್ಚಾಗುವಂತೆ ಅಸ್ತ್ರವಾಗಿ ಬಳಸಲಾಗುತ್ತಿದೆ. ನನ್ನ ಮೇಲೆ ಮಾಧ್ಯಮಗಳು ನಿರಂತರವಾಗಿ ಟೀಕೆ ಮಾಡುತ್ತಿವೆ. ಆದರೆ, ಏರ್‌ಲೈನ್ಸ್‌ಗಾಗಿ ಮಾಡಿದ ಸಾಲ ಮರುಪಾವತಿ ಮಾಡುವುದೇ ನನ್ನ ಉದ್ದೇಶ ಎಂದು ಅವರು ಹೇಳಿದ್ದಾರೆ.
ಹಣಕಾಸು ಸಚಿವಾಲಯವು ಇತ್ತೀಚೆಗೆ ನೀಡಿದ ಹೇಳಿಕೆ ಕುರಿತು ಪ್ರತಿಕ್ರಿಯಿಸಿದ ಅವರು, 6,203 ಕೋಟಿ ರೂಪಾಯಿ ಸಾಲ ವಸೂಲಾತಿ ನ್ಯಾಯಮಂಡಳಿ ತೀರ್ಪಿನ ಎರಡು ಪಟ್ಟು ಹೆಚ್ಚು ಅಂದರೆ 14,100 ಕೋ. ರೂ. ಸಾಲ ಮರುಪಾವತಿ ಮಾಡಿಸಿಕೊಂಡಿರುವುದಾಗಿ ಹೇಳಿದೆ. ನಾನು ನಿಜವಾಗಿಯೂ ಬ್ಯಾಂಕ್‌ಗಳಿಗೆ ವಂಚನೆ ಮಾಡಿದ್ದರೆ, ಸರ್ಕಾರವು ಅಷ್ಟು ಪ್ರಮಾಣದ ಹಣವನ್ನು ಹೇಗೆ ವಸೂಲಿ ಮಾಡಿತು?” ಎಂದು ಮಲ್ಯ ಕೇಳಿದ್ದಾರೆ. ನ್ಯಾಯಯುತ ವಿಚಾರಣೆಯ ಭರವಸೆ ನೀಡಿದರೆ ಭಾರತಕ್ಕೆ ಮರಳುವ ಇಚ್ಚೆ ವ್ಯಕ್ತಪಡಿಸಿದರು.
