Home » Election: 265 ಗ್ರಾ.ಪಂ ಸದಸ್ಯ ಸ್ಥಾನಕ್ಕೆ ಮೇ 25ರಂದು ಉಪಚುನಾವಣೆ

Election: 265 ಗ್ರಾ.ಪಂ ಸದಸ್ಯ ಸ್ಥಾನಕ್ಕೆ ಮೇ 25ರಂದು ಉಪಚುನಾವಣೆ

0 comments

Election: ರಾಜ್ಯದ 223 ಗ್ರಾಮ ಪಂಚಾಯಿತಿಗಳಲ್ಲಿ ತೆರವಾಗಿರುವ 265 ಸದಸ್ಯ ಸ್ಥಾನಕ್ಕೆ ಉಪಚುನಾವಣೆ ಘೋಷಣೆಯಾಗಿದ್ದು, ಮೇ 25ಕ್ಕೆ ಮತದಾನ ನಡೆಯಲಿದೆ. ಮೇ 8ರಂದು ಜಿಲ್ಲಾಧಿಕಾರಿಗಳು ಚುನಾವಣಾ ಅಧಿಸೂಚನೆ ಹೊರಡಿಸಲಿದ್ದು, ನಾಮಪತ್ರ ಸಲ್ಲಿಕೆಗೆ ಮೇ 14 ಕಡೆಯ ದಿನವಾಗಿದೆ.

ಮೇ 15ಕ್ಕೆ ನಾಮಪತ್ರಗಳ ಪರಿಶೀಲನೆ ನಡೆಯಲಿದ್ದು, ಮೇ 17ರಂದು ನಾಮಪತ್ರ ಹಿಂಪಡೆಯಲು ಕಡೆಯ ದಿನವಾಗಿದೆ. ಮೇ 25ರಂದು ಬೆಳಗ್ಗೆ 7ರಿಂದ ಸಂಜೆ 5ರವರೆಗೆ ಮತದಾನ ನಡೆಯಲಿದ್ದು, ಮೇ 28ರಂದು ಮತ ಎಣಿಕೆ ನಡೆಯಲಿದೆ.

You may also like