Home » Suicide: ಸಿ.ಇ ಟಿ ಇಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿ ತನ್ನ ಮನೆಯಲ್ಲಿ ಆತ್ಮಹತ್ಯೆ – ಕಾಲೇಜಿನಲ್ಲಿ ಸರಣಿ ಆತ್ಮಹತ್ಯೆ!

Suicide: ಸಿ.ಇ ಟಿ ಇಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿ ತನ್ನ ಮನೆಯಲ್ಲಿ ಆತ್ಮಹತ್ಯೆ – ಕಾಲೇಜಿನಲ್ಲಿ ಸರಣಿ ಆತ್ಮಹತ್ಯೆ!

0 comments

Suicide: ಪೊನ್ನಂಪೇಟಿಯ ಹಳ್ಳಿ ಗಟ್ಟುವಿನ ಸೆಟ್ ಇಂಜಿನಿಯರಿಂಗ್ ಕಾಲೇಜಿನಲ್ಲಿ ಪ್ರಥಮ ವರ್ಷದ ಬಿ ಇ ಎ ಐ ಅಂಡ್ ಡಿ ಎಸ್ ವಿಭಾಗದಲ್ಲಿ ವ್ಯಾಸಂಗ ಮಾಡುತ್ತಿದ್ದ ಪಿರಿಯಾಪಟ್ಟಣ ಮೂಲದ ಯಶ್ವಂತ್(20) ಎಂಬಾತನು ನಿನ್ನೆ ರಾತ್ರಿ ಎಂಟುವರೆ ಗಂಟೆ ಸಮಯದಲ್ಲಿ ತನ್ನ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಆತ್ಮಹತ್ಯೆಗೆ ಕಾರಣ ತಿಳಿದು ಬಂದಿಲ್ಲ. ಪಿರಿಯಾಪಟ್ಟಣ ಪೊಲೀಸರು ಮೃತನ ಮನೆಗೆ ಆಗಮಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.

ಪೊನ್ನಂಪೇಟೆಯ ಇಂಜಿನಿಯರಿಂಗ್ ಕಾಲೇಜಿನ ಹಾಸ್ಟೆಲ್ ನಲ್ಲಿ ಮೊನ್ನೆ ರಾಯಚೂರು ಮೂಲದ ತೇಜಸ್ವಿನಿ ಎಂಬ 19 ವರ್ಷದ ವಿದ್ಯಾರ್ಥಿನಿ, ತನಗೆ ಮುಂದೆ ಓದಲು ಇಷ್ಟವಿಲ್ಲ ಎಂದು ಡೆತ್ ನೋಟ್ ಬರೆದು ಆತ್ಮಹತ್ಯೆ ಮಾಡಿಕೊಂಡ ಬೆನ್ನೆಲ್ಲೇ, ಇಂದು ಅದೇ ಕಾಲೇಜಿನ ಮತ್ತೊಬ್ಬ ವಿದ್ಯಾರ್ಥಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

You may also like