Home » C M Siddaramaiah: ಹಳೆ ಜಿಎಸ್‌ಟಿ ಬಾಕಿ ಮನ್ನಾ ಮಾಡಿದ ಸರಕಾರ: ಮುಷ್ಕರ ವಾಪಸ್

C M Siddaramaiah: ಹಳೆ ಜಿಎಸ್‌ಟಿ ಬಾಕಿ ಮನ್ನಾ ಮಾಡಿದ ಸರಕಾರ: ಮುಷ್ಕರ ವಾಪಸ್

by ಹೊಸಕನ್ನಡ
0 comments

CM Siddaramaiah: ಸಣ್ಣ ವ್ಯಾಪಾರಿಗಳಿಗೆ ಜಿಎಸ್ಟಿ ನೋಟಿಸ್‌ ವಿರೋಧಿಸಿ ಜುಲೈ 25 ರಂದು ಕರೆ ನೀಡಿದ್ದ ಕರ್ನಾಟಕ ರಾಜ್ಯ ಕಾರ್ಮಿಕರ ಪರಿಷತ್‌ ತನ್ನ ಮುಷ್ಕರವನ್ನು ವಾಪಾಸು ಪಡೆದಿದೆ. ಜಿಎಸ್‌ಟಿ ನೋಟಿಸ್‌ ಪಡೆದ ವರ್ತಕರಿಂದ 3 ವರ್ಷದ ತೆರಿಗೆ ಬಾಕಿ ವಸೂಲಾತಿ ಮಾಡುವುದಿಲ್ಲ ಎಂದು ಸಿಎಂ ಸಿದ್ದರಾಮಯ್ಯ ಘೋಷಿಸಿದ್ದಾರೆ.

ಸಿದ್ದರಾಮಯ್ಯ ಇಂದು ತೆರಿಗೆ ಇಲಾಖೆಯ ಅಧಿಕಾರಿಗಳು, ವರ್ತಕ ಸಂಘದ ಪ್ರತಿನಿಧಿಗಳ ಜೊತೆ ಸಭೆ ನಡೆಸಿ ವರ್ತಕರ ತೆರಿಗೆ ಹಣವನ್ನು ಮನ್ನಾ ಮಾಡಲು ತೀರ್ಮಾನ ಮಾಡಿದೆ. ಸರಕಾರ ಭರವಸೆ ನೀಡಿದ ಬೆನ್ನಲ್ಲೇ ಪ್ರತಿಭಟನೆ ಕೈ ಬಿಡುವುದಾಗಿ ಕಾರ್ಮಿಕ ಪರಿಷತ್‌ ಅಧ್ಯಕ್ಷ ರವಿ ಶೆಟ್ಟಿ ಬೈಂದೂರು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದಾರೆ.

ಇದನ್ನೂ ಓದಿ: Caste Census: ರಾಜ್ಯದಲ್ಲಿ ಜಾತಿಗಣತಿಗೆ ದಿನಾಂಕ ಫಿಕ್ಸ್‌!

You may also like