Home » C.P.Yogeshwar: ಬಿಜೆಪಿ-ಜೆಡಿಎಸ್‌ ನಾಯಕರಿಗೆ ಸೆಡ್ಡು ಹೊಡೆದ ಸಿ.ಪಿ.ಯೋಗೇಶ್ವರ್‌; ಕಾಂಗ್ರೆಸ್‌ಗೆ ಅಧಿಕೃತ ಸೇರ್ಪಡೆ

C.P.Yogeshwar: ಬಿಜೆಪಿ-ಜೆಡಿಎಸ್‌ ನಾಯಕರಿಗೆ ಸೆಡ್ಡು ಹೊಡೆದ ಸಿ.ಪಿ.ಯೋಗೇಶ್ವರ್‌; ಕಾಂಗ್ರೆಸ್‌ಗೆ ಅಧಿಕೃತ ಸೇರ್ಪಡೆ

339 comments

C.P.Yogeshwar: ಚನ್ನಪಟ್ಟಣ ಉಪಚುನಾವಣೆ ಕದನ ರಂಗೇರಿದೆ. ಇಂದು ಬೆಳಿಗ್ಗೆ 11.30 ಕ್ಕೆ ಸಿಪಿ ಯೋಗೇಶ್ವರ್‌, ಕೆಪಿಸಿಸಿ ಕಚೇರಿಯಲ್ಲಿ ಅಧಿಕೃತವಾಗಿ ಕಾಂಗ್ರೆಸ್‌ ಪಕ್ಷವನ್ನು ಸೇರ್ಪಡೆಯಾಗಿದ್ದಾರೆ. ಕೈ ನಾಯಕರ ಜೊತೆ ಕೈ ಜೋಡಿಸಿದ ಸಿ.ಪಿ.ಯೋಗೇಶ್ವರ್‌ ಈ ಮೂಲಕ ಬಿಜೆಪಿ-ಜೆಡಿಎಸ್‌ ನಾಯಕರಿಗೆ ಸೆಡ್ಡು ಹೊಡೆದಿದ್ದಾರೆ.

ಈ ಹಿಂದೆ ಸಿ.ಪಿ.ಯೋಗೇಶ್ವರ್‌ ಕಾಂಗ್ರೆಸ್‌ ಪಕ್ಷದಲ್ಲೇ ಇದ್ದಿದ್ದು, ನಂತರ ಬಿಜೆಪಿಗೆ ಸೇರ್ಪಡೆಯಾಗಿದ್ದರು. ಇದೀಗ ಮತ್ತೆ ಕಾಂಗ್ರೆಸ್‌ ಸೇರುವ ಮೂಲಕ ಘರ್‌ವಾಪ್ಸಿಯಾಗಿದ್ದಾರೆ.

ಹಾಗೆನೇ ಇಂದು ಸಂಜೆ ಸಮಯದಲ್ಲಿ ಚನ್ನಪಟ್ಟಣ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿಯಾಗಿ ಸಿ.ಪಿ.ಯೋಗೇಶ್ವರ್‌ ಅವರ ಹೆಸರು ಅಧಿಕೃತ ಘೋಷಣೆಯಾಗುವ ಎಲ್ಲಾ ಸಾಧ್ಯತೆ ಇದೆ.

ಕುಮಾರಸ್ವಾಮಿ ಅವರ ರಾಜೀನಾಮೆಯಿಂದ ತೆರವಾದ ಚನ್ನಪಟ್ಟಣ ಕ್ಷೇತ್ರಕ್ಕೆ ಜೆಡಿಎಸ್‌ ಚಿಹ್ನೆಯಡಿ ಸ್ಪರ್ಧೆ ಮಾಡುವಂತೆ ಕುಮಾರಸ್ವಾಮಿ ಸಿಪಿ ಯೋಗೇಶ್ವರ್‌ ಅವರಿಗೆ ಆಫರ್‌ ನೀಡಿದ್ದು, ಇದನ್ನು ತಿರಸ್ಕರಿಸಿ, ಬಿಜೆಪಿಯಿಂದ ಬಿ ಫಾರಂ ಕೇಳಿದ್ದರು. ಅಂದ ಹಾಗೆ ಮೈತ್ರಿ ಭಾಗವಾಗಿ ಚನ್ನಪಟ್ಟಣ ಕ್ಷೇತ್ರವನ್ನು ಜೆಡಿಎಸ್‌ಗೆ ಬಿಟ್ಟು ಕೊಡಲಾಗಿದೆ.

 

You may also like

Leave a Comment