Karnataka Cabinet : ಕರ್ನಾಟಕ ಸರ್ಕಾರದ ಸಚಿವ ಸಂಪುಟ ಪುನರ್ ರಚನೆ ವಿಚಾರ ಮತ್ತೆ ಮುನ್ನಲೆಗೆ ಬಂದಿದೆ. ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿಕೆ ಶಿವಕುಮಾರ್ ದೆಹಲಿಗೆ ತೆರಳಿದ ಬಳಿಕ ಈ ವಿಚಾರದ ಚರ್ಚೆ ರಾಜ್ಯದಲ್ಲಿ ಜೋರಾಗಿದೆ. ಹಾಗಿದ್ರೆ ಯಾರಿಗೆಲ್ಲಾ ಸಂಪುಟದಿಂದ ಕೋಕ್ ನೀಡಲಾಗುತ್ತೆ, ಯಾರನ್ನೆಲ್ಲ ಸಂಪುಟಕ್ಕೆ ಹೊಸದಾಗಿ ಸೇರಿಸಿಕೊಳ್ಳಲಾಗುತ್ತೆ? ಎಂಬುದನ್ನು ತಿಳಿಯೋಣ.
ಸಚಿವ ಸ್ಥಾನ ಕಳೆದುಕೊಳ್ಳುವವರು ಯಾರು?
ಅಬಕಾರಿ ಸಚಿವ ಆರ್ ಬಿ ತಿಮ್ಮಾಪುರ, ಪೌರಾಡಳಿತ ಸಚಿವ ರಹೀಂ ಖಾನ್, ಶಿಕ್ಷಣ ಸಚಿವ ಮಧು ಬಂಗಾರಪ್ಪ, ಸಕ್ಕರೆ ಖಾತೆ ಸಚಿವ ಶಿವಾನಂದ ಪಾಟೀಲ್, ಪಶುಸಂಗೋಪನೆ ಸಚಿವ ಕೆ ವೆಂಕಟೇಶ್, ವೈದ್ಯಕೀಯ ಶಿಕ್ಷಣ ಸಚಿವ ಡಾ ಶರಣ ಪ್ರಕಾಶ್ ಪಾಟೀಲ್, ಸಾಂಖ್ಯಿಕ ಮತ್ತು ಯೋಜನೆ ಸಚಿವ ಡಿ ಸುಧಾಕರ್, ನಗರಾಭಿವೃದ್ಧಿ ಸಚಿವ ಭೈರತಿ ಸುರೇಶ್ ಸಚಿವ ಸ್ಥಾನ ಕಳೆದುಕೊಳ್ಳುವ ಸಾಧ್ಯತೆಯಿದೆ.
ಯಾರೆಲ್ಲ ಸಂಪುಟಕ್ಕೆ ಸೇರಬಹುದು?
ಹಿರಿಯ ನಾಯಕರಾದ ಬಿಕೆ ಹರಿಪ್ರಸಾದ್, ಲಕ್ಷ್ಮಣ್ ಸವದಿ, ಬಿ ನಾಗೇಂದ್ರ, ನರೇಂದ್ರ ಸ್ವಾಮಿ, ಬಿಆರ್ ಪಾಟೀಲ್, ಕೆಎಂ ಶಿವಲಿಂಗೇಗೌಡ, ಎಂ ಕೃಷ್ಣಪ್ಪ, ಅಜಯ್ ಸಿಂಗ್, ತನ್ವೀರ್ ಸೇಠ್ ಮುಂತಾದವರಿಗೆ ಸಚಿವ ಸ್ಥಾನ ಸಿಗುವ ಸಾಧ್ಯತೆಯಿದೆ.
