Home » Kodi shri: ಕುರಾನ್ ಅನುಯಾಯಿಗಳು ಹೀಗೆ ಮಾಡಲು ಸಾಧ್ಯವೆ?: ಪಹಲ್ಗಮ್ ಉಗ್ರರ ಬಗ್ಗೆ ಕೋಡಿಶ್ರೀ ಕಿಡಿ!

Kodi shri: ಕುರಾನ್ ಅನುಯಾಯಿಗಳು ಹೀಗೆ ಮಾಡಲು ಸಾಧ್ಯವೆ?: ಪಹಲ್ಗಮ್ ಉಗ್ರರ ಬಗ್ಗೆ ಕೋಡಿಶ್ರೀ ಕಿಡಿ!

0 comments
Kodi Mutt Shri

Kodi shri: ಪಹಲ್ಗಮ್ ಉಗ್ರದಾಳಿ ಸಂಬಂಧ ಭಾರತ ಪ್ರತೀಕಾರಕ್ಕೆ ಸಜ್ಜುಗೊಳ್ಳುತ್ತಿದೆ. ಈ ನಡುವೆ ಕೋಡಿ ಮಠ ಶ್ರೀ ಉಗ್ರಗಾಮಿಗಳ ವಿರುದ್ಧ ಕಿಡಿ ಕಾರಿದ್ದಾರೆ.

ಕುರಾನ್ ನಲ್ಲಿ ಸಣ್ಣ ಕ್ರಿಮಿಯನ್ನು ಕೊಲ್ಲಬಾರದು ಅಂತ ಹೇಳ್ತಾರೆ. ಸಣ್ಣ ಕ್ರಿಮಿಯನ್ನು ಕೊಂದರೆ ಸಾವಿರ ಜನರನ್ನು ಕೊಂದಷ್ಟು ಪಾಪ ಬರುತ್ತೆ ಅಂತ. ಅಂತಹ ಮಾನವೀಯ ಮೌಲ್ಯದ ದಯಾಪೂರ್ಣ ಮಾತು ಕುರಾನ್‌ನಲ್ಲಿದೆ. ಅಂತಹ ಅನುಯಾಯಿಗಳು ಹೀಗೆ ಮಾಡುತ್ತಾರೆ ಅಂದರೆ ಅವರ ಬಗ್ಗೆ ಯೋಚನೆ ಮಾಡಬೇಕಾಗುತ್ತದೆ ಎಂದು ಹೇಳಿದ್ದಾರೆ. ದಯೆ ಇಲ್ಲದ ಧರ್ಮ ಯಾವುದು ಇಲ್ಲ. ದಯವೇ ಧರ್ಮದ ಮೂಲ. ದಯೆ ಇಲ್ಲದ ಧರ್ಮ ಧರ್ಮವೇ ಅಲ್ಲ. ಆ ದೃಷ್ಟಿಯಿಂದ ಯಾರೇ ತಪ್ಪು ಮಾಡಿದರೂ ತಪ್ಪೇ ಎಂದು ಕೋಡಿ ಮಠದ ಶೀಗಳು ಹೇಳಿದ್ದಾರೆ.

ಗುರು ಅಂದರೆ ಧರ್ಮ ಅಂತ, ಧರ್ಮ ಬಿಟ್ಟು ಏನೂ ಮಾಡ್ತಿರಲಿಲ್ಲ. ಈಗ ಬರುವಂತವರಿಗೆ ಗುರಿನೂ ಇಲ್ಲ ಗುರುನೂ ಇಲ್ಲ. ಅವರು ಹೇಳಿದ್ದೇ ಧರ್ಮ ಮಾಡಿದ್ದೇ ಆಚಾರವಾಗಿದೆ ಎಂದು ಶ್ರೀಗಳು ತಿಳಿಸಿದರು.

You may also like