Home » Canara Bank: ಮತ್ತೊಂದು ಬ್ಯಾಂಕ್‌ ದರೋಡೆ: ಕೆನರಾಬ್ಯಾಂಕ್‌ ದರೋಡೆ ಮಾಡಿದ ಖದೀಮರು

Canara Bank: ಮತ್ತೊಂದು ಬ್ಯಾಂಕ್‌ ದರೋಡೆ: ಕೆನರಾಬ್ಯಾಂಕ್‌ ದರೋಡೆ ಮಾಡಿದ ಖದೀಮರು

0 comments
Canara Bank

Canara Bank: ಬಸವನಬಾಗೇವಾಡಿ ತಾಲೂಕಿನ ಮನಗಳಿ ಪಟ್ಟಣದಲ್ಲಿನ ಕೆನರಾ ಬ್ಯಾಂಕ್‌ ದರೋಡೆ ಮಾಡಲಾಗಿದೆ. ಬ್ಯಾಂಕ್‌ ಬಾಗಿಲಿನ ಕೀ ಮುರಿದು, ಕಿಟಕಿ ಸರಳು ಮುರಿದು ಒಳ ನುಗ್ಗಿದ ಕಳ್ಳರು ಲಕ್ಷಾಂತರ ಮೌಲ್ಯದ ಚಿನ್ನಾಭರಣ ಕದ್ದು ಎಸ್ಕೇಪ್‌ ಆಗಿದ್ದಾರೆ ಎಂದು ವರದಿಯಾಗಿದೆ.

ಶನಿವಾರ (ಮೇ 24) ತಡರಾತ್ರಿ ಈ ಘಟನೆ ನಡೆದಿದೆ. ಶನಿವಾರ, ಭಾನುವಾರ ಎರಡು ದಿನ ರಜೆ ಇದ್ದ ಕಾರಣ ಸಿಬ್ಬಂದಿ ಬ್ಯಾಂಕ್‌ಗೆ ಬಂದಿರದ ಕಾರಣ ಗೊತ್ತಾಗಿರಲಿಲ್ಲ.

ಮನಗೂಳಿ ಠಾಣೆ ಪೊಲೀಸರು ಮತ್ತು ಶ್ವಾನದಳ ಸ್ಥಳಕ್ಕೆ ಬಂದಿದ್ದು, ಸ್ಥಳ ಪರಿಶೀಲನೆ ಮಾಡಿದ್ದಾರೆ. ಸ್ಥಳಕ್ಕೆ ಎಸ್ಪಿ ಲಕ್ಷ್ಮಣ ನಿಂಬರಗಿ ಎಎಸ್ಪಿ ರಾಮನಗೌಡ ಹಟ್ಟಿ ಹಾಗೂ ಇತರೆ ಅಧಿಕಾರಿಗಳು ಘಟನಾ ಸ್ಥಳಕ್ಕೆ ಭೇಟಿ ನೀಡಿದ್ದು ಮಾಹಿತಿ ಸಂಗ್ರಹಿಸುತ್ತಿದ್ದಾರೆ.

You may also like