Home » ಜಿಲ್ಲೆಯಲ್ಲಿ ಉತ್ಸವಗಳಿಗೆ ನಿರ್ಬಂಧ ಹಿನ್ನೆಲೆ | ರಾಮಕುಂಜ ಕೊಂದಪ್ಪಡೆ ದೇವಸ್ಥಾನದ ಆಟಿ ಅಮಾವಾಸ್ಯೆ ಉತ್ಸವ ರದ್ದು

ಜಿಲ್ಲೆಯಲ್ಲಿ ಉತ್ಸವಗಳಿಗೆ ನಿರ್ಬಂಧ ಹಿನ್ನೆಲೆ | ರಾಮಕುಂಜ ಕೊಂದಪ್ಪಡೆ ದೇವಸ್ಥಾನದ ಆಟಿ ಅಮಾವಾಸ್ಯೆ ಉತ್ಸವ ರದ್ದು

by Praveen Chennavara
0 comments

ಕಡಬ : ದ.ಕ.ಜಿಲ್ಲೆಯಲ್ಲಿ ಕೋವಿಡ್ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ದ.ಕ.ಜಿಲ್ಲಾಧಿಕಾರಿಯವರ ಆದೇಶದಂತೆ ರಾಮಕುಂಜ ಗ್ರಾಮದ ಕೊಂದಪ್ಪಡೆ ಶ್ರೀ ಅನಂತಪದ್ಮನಾಭ ದೇವಸ್ಥಾನದಲ್ಲಿ ಆ.೮ರಂದು ನಡೆಯಲಿದ್ದ ಆಟಿ ಅಮಾವಾಸ್ಯೆ ಉತ್ಸವ ರದ್ದುಪಡಿಸಲಾಗಿದೆ ಎಂದು ದೇವಸ್ಥಾನದ ಆಡಳಿತ ಮಂಡಳಿ ಪ್ರಕಟಣೆಯಲ್ಲಿ ತಿಳಿಸಿದೆ.

ಸಂತಾನ ಭಾಗ್ಯ ಸೇರಿದಂತೆ ತಮ್ಮ ಇಷ್ಠಾರ್ಥ ಸಿದ್ಧಿಗಾಗಿ ಜಿಲ್ಲೆ ಹಾಗೂ ಹೊರ ಜಿಲ್ಲೆಯ ನೂರಾರು ಮಂದಿ ಆಟಿ ಅಮಾವಾಸ್ಯೆಯಂದು ಇಲ್ಲಿನ ಕೆರೆಯಲ್ಲಿ ತೀರ್ಥಸ್ನಾನ ಮಾಡಿ ಶ್ರೀ ಅನಂತಪದ್ಮನಾಭ ದೇವರಿಗೆ ವಿಶೇಷ ಪೂಜೆ ಸಲ್ಲಿಸುವ ಸಂಪ್ರದಾಯವಿದೆ.

ಆದರೆ ದ.ಕ.ಜಿಲ್ಲೆಯಲ್ಲಿ ಕೋವಿಡ್ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲೆಯಾದ್ಯಂತ ಉತ್ಸವಗಳಿಗೆ ನಿರ್ಬಂಧ ವಿಧಿಸಿ ದ.ಕ.ಜಿಲ್ಲಾಧಿಕಾರಿಯವರು ನೀಡಿರುವ ಆದೇಶದಂತೆ ದೇವಸ್ಥಾನದಲ್ಲಿ ನಡೆಯುವ ಆಟಿ ಅಮಾವಾಸ್ಯೆ ಉತ್ಸವ ರದ್ದುಗೊಳಿಸಲಾಗಿದೆ ಎಂದು ದೇವಸ್ಥಾನದ ಪ್ರಕಟಣೆ ತಿಳಿಸಿದೆ.

You may also like

Leave a Comment