Home » Cannibalism: ಸ್ಮಶಾನದಲ್ಲಿ ಸತ್ತ ಮನುಷ್ಯನ ಅರೆ ಬೆಂದ ಮಾಂಸ ತಿಂದ ನರಭಕ್ಷಕರು, ಇಬ್ಬರು ಅರೆಸ್ಟ್ !

Cannibalism: ಸ್ಮಶಾನದಲ್ಲಿ ಸತ್ತ ಮನುಷ್ಯನ ಅರೆ ಬೆಂದ ಮಾಂಸ ತಿಂದ ನರಭಕ್ಷಕರು, ಇಬ್ಬರು ಅರೆಸ್ಟ್ !

by ಹೊಸಕನ್ನಡ
0 comments
Cannibalism

Cannibalism: ಅತ್ಯಂತ ಭೀಭತ್ಸ ಘಟನೆಯೊಂದು ನಡೆದಿದ್ದು ವ್ಯಕ್ತಿಗಳಿಬ್ಬರು ಸ್ಮಶಾನದಲ್ಲಿ ನರಭಕ್ಷಣೆ ಮಾಡಿದ್ದಾರೆ. ಅಲ್ಲಿ ಸ್ಮಶಾನದಲ್ಲಿ ರೋಗಿಷ್ಟ ಮನುಷ್ಯನ ಸತ್ತ ಅರೆ ಬೆಂದ ದೇಹವನ್ನು ಅವರು ತಿಂದು ಬಿಟ್ಟಿದ್ದಾರೆ.

ಒಡಿಶಾದ ಮಯೂರ್‌ಭಂಜ್ ಜಿಲ್ಲೆಯಲ್ಲಿ ಶವಸಂಸ್ಕಾರ ನಡೆಸುತ್ತಿದ್ದ ಸ್ಥಳೀಯರು ಅರ್ಧ ಸುಟ್ಟು ಉಳಿದಿದ್ದ ಮನುಷ್ಯ ಮಾಂಸ ತಿನ್ನುತ್ತಿದ್ದುದನ್ನು ಕಂಡು ಪೊಲೀಸರಿಗೆ ಕರೆ ಮಾಡಿದ್ದರು. ನರಭಕ್ಷಕ ಆರೋಪದ ಮೇಲೆ ಆರೋಪಿಗಳಿಬ್ಬರನ್ನು ಮಂಗಳವಾರ ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಪೊಲೀಸರು ಪ್ರಕಾರ, ದಂಟುನಿ ಗ್ರಾಮದ ಸುಂದರ್ ಮೋಹನ್ ಸಿಂಗ್ (58) ಮತ್ತು ನರೇಂದ್ರ ಸಿಂಗ್ (25) ಅವರ ವಿರುದ್ಧ ಸ್ಥಳೀಯರು ದೂರು ದಾಖಲಿಸಿದ್ದಾರೆ. ಅವರು ಶವಸಂಸ್ಕಾರದ ಸ್ಥಳದಲ್ಲಿ ಅರ್ಧ ಸುಟ್ಟ ಶವವನ್ನು ಸೇವಿಸುತ್ತಿರುವುದನ್ನು ಕಂಡುಹಿಡಿದಿದ್ದಾರೆ ಎಂದು ರಾಷ್ಟ್ರೀಯ ಸುದ್ದಿ ಮಾಧ್ಯಮಗಳು ವರದಿ ಮಾಡಿವೆ.

ಅನಾರೋಗ್ಯದಿಂದ ಸಾವನ್ನಪ್ಪಿದ ಮೃತರ ಶವವನ್ನು ಗ್ರಾಮಸ್ಥರು ಅಂತ್ಯಕ್ರಿಯೆಗಾಗಿ ಸ್ಮಶಾನಕ್ಕೆ ಕೊಂಡೊಯ್ದಿದ್ದರು. ಶವಸಂಸ್ಕಾರ ನಡೆಯುತ್ತಿರುವಾಗ, ಈ ಇಬ್ಬರೂ ಅರ್ಧ ಸುಟ್ಟ ದೇಹದ ಕೆಲವು ಭಾಗವನ್ನು ತೆಗೆದುಕೊಂಡು ಅದನ್ನು ತಿನ್ನಲು ಪ್ರಾರಂಭಿಸಿದರು ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಈ ಸಂದರ್ಭದಲ್ಲಿ ಅವರು ಅಮಲೇರಿದ ಸ್ಥಿತಿಯಲ್ಲಿ ಇದ್ದರು, ಕುಡಿದು ಈ ಕೃತ್ಯ ಎಸಗಿದ್ದಾರೆ ಎನ್ನಲಾಗಿದೆ. ಆರೋಪಿಗಳಲ್ಲಿ ಒಬ್ಬರಾದ ಸುಂದರ್ ಮೋಹನ್ ಸಿಂಗ್ ಮಾಂತ್ರಿಕರಾಗಿದ್ದಾನೆ. ಅವರು ಮದ್ಯದ ಅಮಲಿನಲ್ಲಿ ಈ ಕೃತ್ಯ ಎಸಗಿದ್ದಾರೆ ಮತ್ತು ಅವರಿಬ್ಬರೂ ಈ ಕೃತ್ಯಗಳನ್ನು ಒಪ್ಪಿಕೊಂಡಿದ್ದಾರೆ ಎಂದು ಬಡಸಾಹಿ ಪೊಲೀಸ್ ಪ್ರಭಾರಿ ಇನ್ಸ್‌ಪೆಕ್ಟರ್ ಸಬ್ಜಯ್ ಪರಿದಾ ಹೇಳಿದ್ದಾರೆ.

 

ಇದನ್ನು ಓದಿ: Tesla Electric Car: ಇದು ಕಾರ್ ಅಲ್ಲ, ಮಿನಿ ರಾಕೆಟ್ ! ಬರ್ತಾ ಇದೆ ಟೆಸ್ಲಾ ಎಲೆಕ್ಟ್ರಿಕ್ ಕಾರು, ಬೆಲೆ ಜುಜುಬಿ 20 ಲಕ್ಷ !

You may also like

Leave a Comment