Home » ಧರ್ಮಸ್ಥಳ: ಕ್ಯಾಂಟರ್ ಹಾಗೂ ಕಾರು ನಡುವೆ ಭೀಕರ ಅಪಘಾತ; ತಂದೆ, ಮಗ ದಾರುಣ ಸಾವು

ಧರ್ಮಸ್ಥಳ: ಕ್ಯಾಂಟರ್ ಹಾಗೂ ಕಾರು ನಡುವೆ ಭೀಕರ ಅಪಘಾತ; ತಂದೆ, ಮಗ ದಾರುಣ ಸಾವು

0 comments

ಕ್ಯಾಂಟರ್ ಹಾಗೂ ಕಾರುಗಳ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿ ತಂದೆ ಹಾಗೂ ಮಗ ಮೃತಪಟ್ಟಿರುವ ಘಟನೆ ಹಾಸನ ಜಿಲ್ಲೆಯ ಆಲೂರು ತಾಲೂಕಿನಲ್ಲಿ ನಡೆದಿದೆ.

ತಮಿಳುನಾಡು ಮೂಲದ ಅಂಜನಪ್ಪ (40), ಕಾರ್ತಿಕ್ (17) ಮೃತ ದುರ್ದೈವಿಗಳು.

ರಾಷ್ಟ್ರೀಯ ಹೆದ್ದಾರಿ 75ರಲ್ಲಿ ಭೀಕರ ರಸ್ತೆ ಅಪಘಾತವಾಗಿದ್ದು, ಆಲೂರು ತಾಲೂಕಿನ ಆಲೂರು-ಈಶ್ವರಹಳ್ಳಿ ಕೂಡಿಗೆ ಸಮೀಪ ಈ ಘಟನೆ ನಡೆದಿದೆ. ಧರ್ಮಸ್ಥಳಕ್ಕೆಂದು 2 ಕಾರಿನಲ್ಲಿ 10 ಜನ ತೆರಳುತ್ತಿದ್ದರು. ಅದರಲ್ಲಿ ಒಂದು ಕಾರಿಗೆ ಕ್ಯಾಂಟರ್ ಡಿಕ್ಕಿಯಾಗಿ, ಕಾರಿನಲ್ಲಿದ್ದ ಇಬ್ಬರು ಪ್ರಯಾಣಿಕರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಇನ್ನುಳಿದಂತೆ ಮೂವರ ಸ್ಥಿತಿ ಚಿಂತಾಜನಕವಾಗಿದೆ.

ಅಪಘಾತಕ್ಕೆ ಅವೈಜ್ಞಾನಿಕ ಸಂಚಾರಕ್ಕೆ ವ್ಯವಸ್ಥೆ ಮಾಡಿರುವುದು ಕಾರಣ ಎನ್ನಲಾಗುತ್ತಿದ್ದು, ಹೆದ್ದಾರಿಯ ಹಲವೆಡೆ ಹಲವು ವರ್ಷಗಳಿಂದ ಕಾಮಗಾರಿ ನಡೆಯುತ್ತಿದ್ದರೂ ಮುಗಿಯುವ ಲಕ್ಷಣ ಕಾಣುತ್ತಿಲ್ಲ. ಹೀಗಾಗಿ ಅಪಘಾತಕ್ಕೆ ಕಾರಣವಾಗಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಸ್ಥಳಕ್ಕೆ ಆಲೂರು ವೃತ್ತ ನಿರೀಕ್ಷಕ ಹೇಮಂತ್ ಕುಮಾರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

You may also like

Leave a Comment