3
ಹಾಸನ/ ಮಂಗಳೂರು : ಹಾಸನದ ಬೇಲೂರು ಬಳಿ ಆಲ್ಟೋ ಕಾರೊಂದು ಮರಕ್ಕೆ ಡಿಕ್ಕಿ ಹೊಡೆದ ಪರಿಣಾಮ ವ್ಯಕ್ತಿಯೊಬ್ಬ ದಾರುಣವಾಗಿ ಸಾವನ್ನಪ್ಪಿದ ಘಟನೆ ನಡೆದಿದೆ.
ಅಪಘಾತದಲ್ಲಿ ಬೆಳ್ತಂಗಡಿ ತಾಲೂಕಿನ ಪೆರಾಲ್ಡರಕಟ್ಟೆ ನಿವಾಸಿ ಶರೀಫ್ ಎಂದು ಗುರುತಿಸಲಾಗಿದೆ.
ಅಪಘಾತದಲ್ಲಿ ಮೂವರಿಗೆ ಗಾಯವಾಗಿದ್ದು,ಗಾಯಾಳುಗಳನ್ನು ಲಾಯಿಲ ಗ್ರಾಮದ ಕುಂಟಿನಿ ನಿವಾಸಿ ನೂರ್ ಮುಹಮ್ಮದ್, ಬಳಂಜದ ಅಝೀಝ್ ಹಾಗೂ ಕಕ್ಕಿಂಜೆಯ ಗಾಂಧಿ ನಗರ ನಿವಾಸಿ ಸಲೀಂ ಎಂದು ಗುರುತಿಸಲಾಗಿದೆ.
ಗಾಯಾಳುಗಳನ್ನು ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಆಸ್ಪತ್ರೆಗೆ ಕೊರೆದೊಯ್ಯಲಾಗಿದೆ.
