Home » 9 ನೇ ತರಗತಿಯ ಅಪ್ರಾಪ್ತ ಹುಡುಗನಿಂದ ಕಾರು ಚಾಲನೆ | ಫುಟ್ ಪಾತ್ ಮೇಲೆ ಕಾರು ಚಲಾಯಿಸಿ 4 ಮಂದಿಯ ದಾರುಣ ಸಾವು |

9 ನೇ ತರಗತಿಯ ಅಪ್ರಾಪ್ತ ಹುಡುಗನಿಂದ ಕಾರು ಚಾಲನೆ | ಫುಟ್ ಪಾತ್ ಮೇಲೆ ಕಾರು ಚಲಾಯಿಸಿ 4 ಮಂದಿಯ ದಾರುಣ ಸಾವು |

0 comments

ಅಪ್ರಾಪ್ತ ಮಕ್ಕಳ ಕೈಯಲ್ಲಿ ಕಾರು ಕೊಟ್ಟರೆ ಏನಾಗುತ್ತದೆ. ಆಗಬಾರದ್ದು ಆಗುತ್ತದೆ ಎಂಬುದಕ್ಕೆ ಇಲ್ಲೊಂದು ಘಟನೆ ನಡೆದಿದೆ.

9 ನೇ ತರಗತಿ ಓದುತ್ತಿರುವ ಬಾಲಕನೊಬ್ಬ ಕಾರು ಚಾಲನೆ ಮಾಡಿ ನಾಲ್ವರ ಸಾವಿಗೆ ಕಾರಣವಾಗಿರುವ ಘಟನೆ ತೆಲಂಗಾಣದ ಕರೀಮ್ ನಗರ ಜಿಲ್ಲೆಯಲ್ಲಿ ನಡೆದಿದೆ. ಕಾರಿನಲ್ಲಿ ಒಟ್ಟು ಮೂವರು ಅಪ್ರಾಪ್ತ ಬಾಲಕರು ಇದ್ದು ಅದರಲ್ಲಿ ಒಬ್ಬಾತ ಕಾರು ಡ್ರೈವ್ ಮಾಡುತ್ತಿದ್ದ. ಅತ್ಯಂತ ವೇಗವಾಗಿ ಕಾರು ಚಾಲನೆ ಮಾಡಿದ ಬಾಲಕ, ವಾಹನವನ್ನು ಫುಟ್ ಫಾತ್ ಮೇಲೆ ಹರಿಸಿದ್ದಾನೆ. ಈ ಘಟನೆಯಲ್ಲಿ ಓರ್ವ 14 ವರ್ಷದ ಬಾಲಕಿ ಹಾಗೂ ಮೂವರು ಮಹಿಳೆಯರು ಸೇರಿದ್ದಾರೆ. ಇಬ್ಬರಿಗೆ ಗಂಭೀರ ಗಾಯವಾಗಿದೆ.

ಈ ಘಟನೆ ಸುಮಾರು 6.50 ರ ಹೊತ್ತಿಗೆ ನಡೆದಿದೆ. ಕಾರನ್ನು ವೇಗವಾಗಿ ಚಲಾಯಿಸುತ್ತಿದ್ದ ಬಾಲಕ ದಟ್ಟವಾದ ಮಂಜಿನಿಂದಾಗಿ ಕಣ್ಣು ಉಜ್ಜಿಕೊಳ್ಳಲು ಸ್ಟೀರಿಂಗ್ ನಿಂದ ಕೈ ತೆಗೆದಿದ್ದಾನೆ. ಈ ಸಮಯದಲ್ಲಿ ಕಾರಿನ ನಿಯಂತ್ರಣ ತಪ್ಪಿ, ಬಾಲಕ ಬ್ರೇಕ್ ಬದಲಿಗೆ ಆಕ್ಸಿಲೇಟರ್ ಪ್ರೆಸ್ ಮಾಡಿದ್ದಾನೆ. ಕಾರು ನೇರವಾಗಿ ಫುಟ್ ಫಾತ್ ಮೇಲೆ ಕುಳಿತಿದ್ದ ಮಹಿಳೆಯರ ಮೇಲೆ ಕಾರು ಹರಿದಿದೆ.

ಇದರಿಂದ ಹೆದರಿದ ಕಾರಿನಲ್ಲಿದ್ದ ಹುಡುಗರು ಅಲ್ಲಿಂದ ಓಡಿ ಹೋಗಿದ್ದಾರೆ. ನಂತರ ಪೊಲೀಸರು ಅವರನ್ನು ಬಂಧಿಸಿದ್ದಾರೆ. ಕಾರು ಡ್ರೈವ್ ಮಾಡುತ್ತಿದ್ದ ಬಾಲಕನ ತಂದೆ ವಿರುದ್ಧ ಕೇಸ್ ದಾಖಲಾಗಿದೆ. ಅಪ್ರಾಪ್ತರಾದ ಕಾರಣ ಅವರ ವಿರುದ್ಧ ಐಪಿಎಸ್ 304 ರ ಅಡಿಯಲ್ಲಿ ಕೇಸ್ ದಾಖಲು ಮಾಡಲಾಗಿದೆ.

You may also like

Leave a Comment