Home » Shirtadi: ಕಾರು-ಆಕ್ಟಿವಾ ಆಕ್ಸಿಡೆಂಟ್‌- ಶಿಕ್ಷಕಿ ಸಾವು!

Shirtadi: ಕಾರು-ಆಕ್ಟಿವಾ ಆಕ್ಸಿಡೆಂಟ್‌- ಶಿಕ್ಷಕಿ ಸಾವು!

0 comments

Shirthadi: ಶಿರ್ತಾಡಿ ಬಳಿ ಶುಕ್ರವಾರ ಸಂಜೆ ಕಾರು-ಆಕ್ಟಿವಾ ಅಪಘಾತ ನಡೆದಿದ್ದು, ಆಕ್ಟಿವಾ ಸವಾರೆ ಮೃತಪಟ್ಟಿದ್ದಾರೆ. ಶಿರ್ತಾಡಿ ಹೋಲಿ ಏಂಜಲ್ಸ್‌ ಶಾಲೆಯ ಶಿಕ್ಷಕಿ ಸುಜಯ ಭಂಡಾರಿ (35 ವ) ಮೃತಪಟ್ಟ ಮಹಿಳೆ.

ಶಿರ್ತಾಡಿ ಹೋಲಿ ಏಂಜಲ್ಸ್‌ ಶಾಲೆಯಲ್ಲಿ ಸುಜಯ ಅವರು ಕಳೆದ ಕೆಲವು ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದರು.

ಶಾಲೆಯಿಂದ ಮನೆಗೆ ಹೋಗುವಾಗ ಶಿರ್ತಾಡಿ ಸೇತುವೆ ಬಳಿ ಮೂಡುಬಿದಿರೆ ಕಡೆಯಿಂದ ಶಿರ್ತಾಡಿ ಕಡೆ ಬರುತ್ತಿದ್ದ ಹೋಂಡಾ ಸಿಟಿ ಕಾರೊಂದು ಆಕ್ಟಿವಾಗೆ ಡಿಕ್ಕಿ ಹೊಡೆದಿದೆ. ಕೂಡಲೇ ಮಹಿಳೆ ರಸ್ತೆಗೆಸೆಯಲ್ಪಟ್ಟಿದ್ದಾರೆ. ಸುಜಯಾ ಅವರ ತಲೆಗೆ ತೀವ್ರ ಗಾಯ ಉಂಟಾಗಿದ್ದ ಪರಿಣಾಮ ಅವರನ್ನು ಮಂಗಳೂರಿನ ಆಸ್ಪತ್ರೆಗೆ ದಾಖಲು ಮಾಡಲಾಯಿತು. ಆದರೆ ಅವರು ಮೃತ ಹೊಂದಿದ್ದಾರೆ.

ಸುಜಯಾ ಅವರ ಪತಿ ವಿದೇಶದಲ್ಲಿದ್ದು, ಇವರಿಬ್ಬರಿಗೆ ಅವಳಿ ಮಕ್ಕಳಿದ್ದಾರೆ. ಮೂಡುಬಿದಿರೆಯ ಶಾಲೆಯಲ್ಲಿ ಕಲಿಯುತ್ತಿದ್ದಾರೆ ಎಂದು ವರದಿಯಾಗಿದೆ. ಮೂಡುಬಿದಿರೆ ಪೊಲೀಸರು ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ.

You may also like