Home » Sullia: ಹೆದ್ದಾರಿಯಲ್ಲಿ ಕಾರಿನಲ್ಲಿ ಹುಚ್ಚಾಟ; ಕಾರು ಸಮೇತ ಯುವಕರ ವಶಕ್ಕೆ ಪಡೆದ ಸುಳ್ಯ ಪೊಲೀಸರು!

Sullia: ಹೆದ್ದಾರಿಯಲ್ಲಿ ಕಾರಿನಲ್ಲಿ ಹುಚ್ಚಾಟ; ಕಾರು ಸಮೇತ ಯುವಕರ ವಶಕ್ಕೆ ಪಡೆದ ಸುಳ್ಯ ಪೊಲೀಸರು!

0 comments

Sullia: ಎ.5 ರಂದು ಸಂಪಾಜೆ ಕಡೆಯಿಂದ ಸುಳ್ಯ ರಸ್ತೆಯಲ್ಲಿ ಸಂಚರಿಸುತ್ತಿದ್ದ ಕಾರಿನಲ್ಲಿ ಏಳು ಮಂದಿ ಯುವಕರು ಕಾರಿನ ಡೋರ್‌ನಿಂದ ಯುವಕರು ಹೊರಗೆ ಬಂದು ಕುಳಿತು ಹುಚ್ಚಾಟ ಮೆರೆದ ಘಟನೆ ಕುರಿತ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲಾಗಿತ್ತು. ಸುಳ್ಯ ಪೊಲೀಸರು ಪ್ರಕರಣವನ್ನು ದಾಖಲು ಮಾಡಿ ಹುಡುಕಾಟ ಪ್ರಾರಂಭಿಸಿದ್ದರು.

ಭಟ್ಕಳ ಮೂಲದ ಸಾಝಿಲ್‌ ಆತಿಫ್‌, ಸಮನ್‌, ಶೈಬಾಜ್‌ ಹಸ್ಸನ್‌ ಎಂಬ ಯುವಕರನ್ನು ಭಟ್ಕಳದಿಂದ ಸುಳ್ಯಕ್ಕೆ ಕರೆತಂದಿದ್ದು, ವಿಚಾರಣೆ ನಡೆಸಿ ಕಾನೂನು ರೀತಿಯ ಕ್ರಮ ಕೈಗೊಂಡಿರುವುದಾಗಿ ವರದಿಯಾಗಿದೆ. ಈ ಏಳು ಮಂದಿಯ ಪೈಕಿ ಓರ್ವ ಆರೋಪಿ ಸಾಜೀಬ್‌ ಎಂಬಾತ ಪೊಲೀಸರ ಕೈಗೆ ಸಿಗದೇ ಬೇರೆ ಊರಿಗೆ ತೆರಳಿರುವ ಬಗ್ಗೆ ಮಾಹಿತಿ ಬಂದಿದೆ.

You may also like