Home » Car Lorry Accident: ನಿಂತಿದ್ದ ಲಾರಿಗೆ ಕಾರು ಡಿಕ್ಕಿ-ಸ್ಥಳದಲ್ಲೇ 6 ಜನರು ಸಾವು!

Car Lorry Accident: ನಿಂತಿದ್ದ ಲಾರಿಗೆ ಕಾರು ಡಿಕ್ಕಿ-ಸ್ಥಳದಲ್ಲೇ 6 ಜನರು ಸಾವು!

0 comments

Accident: ಚಲಿಸುತ್ತಿದ್ದ ಲಾರಿಗೆ ಹಿಂಬದಿಯಿಂದ ಕಾರು ಡಿಕ್ಕಿ ಹೊಡೆದ ಪರಿಣಾಮ ಕಾರಿನಲ್ಲಿದ್ದ 6 ಜನರು ಸ್ಥಳದಲ್ಲೇ ಮೃತಪಟ್ಟು, ಇಬ್ಬರು ಗಾಯಗೊಂಡಿರುವ ಘಟನೆ ಜಿಲ್ಲೆ ಬ್ಯಾಡಗಿ ತಾಲೂಕಿನ ಮೋಟೆಬೆನ್ನೂರು ಬಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಗುರುವಾರ ಸಂಭವಿಸಿದೆ.

ಹರಿಹರದ ಸೈಯದ್ ಇಮಾಮವುಲ್ಲಾ (20), ಉಮ್ಮೇರಾ (11), ಗೋವಾದ ಆಲೀಷಾ ನಾರಂಗಿ (22), ಗೋವಾದ ಪುರಾಖಾನ್ ಅಕ್ಟರ್‌ನಾರಂಗಿ (14), ರಾಣಿಬೆನ್ನೂರಿನ ಉಮ್ಮಿಶೀಫಾ ಅಫ್ರಾಜ್ ಉದಗಟ್ಟಿ (13), ಧಾರವಾಡದ ಆಶೀಯಾ ಖಲಂದರ (12) ಮೃತಪಟ್ಟವರು. ಗೋವಾದ ಮೇಹಕ್ ರಶೀದ್ ನಾರಂಗಿ (18), ರಾಣಿಬೆನ್ನೂರಿನ ಉಮ್ಮಿತಸ್ತೀನ್ ಉದಗಟ್ಟಿ(11) ಗಂಭೀರವಾಗಿ ಗಾಯಗೊಂಡಿದ್ದು, ಹಾವೇರಿ ಜಿಲ್ಲಾಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ.

ಗುರುವಾರ ಇವರೆಲ್ಲರೂ ಸೇರಿ ಆಡಿ ಕಾರಿನಲ್ಲಿ ಅಗಡಿ ತೋಟ, ಹುಬ್ಬಳ್ಳಿಗೆ ತೆರಳಿ ಅಲ್ಲಿಂದ ಗೋವಾಕ್ಕೆ ಪ್ರಯಾಣ ಬೆಳೆಸುವ ಉದ್ದೇಶ ಹೊಂದಿದ್ದರು. ಆದರೆ, ಪ್ರಯಾಣ ಆರಂಭಿಸಿ ಕೆಲವೇ ನಿಮಿಷಗಳಲ್ಲಿ ಮುಂದೆ ಸಾಗುತ್ತಿದ್ದ ಲಾರಿಗೆ ಹಿಂಭಾಗದಿಂದ ಕಾರು ಡಿಕ್ಕಿ ಹೊಡೆದು ಪಲ್ಟಿ ಆಗಿದೆ.

You may also like