Home » Karkala: ಕಾರ್ಕಳ: ಆನೆಕೆರೆಯಲ್ಲಿ ಚರಂಡಿಗೆ ಬಿದ್ದ ಕಾರು!

Karkala: ಕಾರ್ಕಳ: ಆನೆಕೆರೆಯಲ್ಲಿ ಚರಂಡಿಗೆ ಬಿದ್ದ ಕಾರು!

0 comments

Karkala: ಚಾಲಕನ ನಿಯಂತ್ರಣ ತಪ್ಪಿ ಕಾರೊಂದು ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದು ಚರಂಡಿಗೆ ವಾಲಿದ ಘಟನೆ ಮೇ 29ರಂದು ಆನೆಕೆರೆ ದಾನಶಾಲೆ ರಸ್ತೆಯಲ್ಲಿ ಸಂಭವಿಸಿದೆ.

ಕೊಲ್ಲಾಪುರ ಮೂಲದವರು ಹುಂಬುಚ್ಚದಲ್ಲಿ ಜೈನ ಪವಿತ್ರ ತೀರ್ಥಕ್ಷೇತ್ರಗಳ ದರ್ಶನ ಪಡೆದು ಕಾರ್ಕಳದ ಜೈನ ಧಾರ್ಮಿಕ ಕ್ಷೇತ್ರಗಳಿಗೆ ಭೇಟಿ ನೀಡಲೆಂದು ಆಗಮಿಸಿದ್ದು, ಆನೆಕೆರೆಯಿಂದ ದಾನಶಾಲೆಯತ್ತ ಸಾಗುವಾಗ ಕಾರು ಚಾಲಕನ ನಿಯಂತ್ರಣ ತಪ್ಪಿ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದು ಚರಂಡಿಗೆ ವಾಲಿದೆ. ಅದೃಷ್ಟವಶಾತ್ ಅಪಘಾತದಲ್ಲಿ ಯಾವುದೇ ಹಾನಿ ಸಂಭವಿಸಿಲ್ಲ. ಸ್ಥಳಕ್ಕೆ ಮೆಸ್ಕಾಂ ಸಿಬ್ಬಂದಿ ಆಗಮಿಸಿ ವಿದ್ಯುತ್ ಕಂಬ ತೆರವು ಕಾರ್ಯಾಚರಣೆ ಕೈಗೊಂಡಿದ್ದಾರೆ. ಕಾರ್ಕಳ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

You may also like