Home » Charmadi Ghat : 100 ಅಡಿ ಪ್ರಪಾತಕ್ಕೆ ಬಿದ್ದ ಕಾರು – ಪ್ರಯಾಣಿಕರು ಪಾರು !!

Charmadi Ghat : 100 ಅಡಿ ಪ್ರಪಾತಕ್ಕೆ ಬಿದ್ದ ಕಾರು – ಪ್ರಯಾಣಿಕರು ಪಾರು !!

0 comments

Chamadi Ghat: ಚಾರ್ಮಾಡಿ ಘಾಟಿಯಲ್ಲಿ ಅಪಘಾತ ಸಂಭವಿಸಿದ್ದು ಮಲೆಮಾರುತದ ಬಳಿ 100 ಅಡಿ ಕಂದಕಕ್ಕೆ ಕಾರು ಒಂದು ಉರುಳು ಬಿದ್ದಿದೆ. ಅದೃಷ್ಟವಶಾತ್ ಪ್ರಯಾಣಿಕರು ಸಣ್ಣಪುಟ್ಟ ಗಾಯಗಳಿಂದ ಪಾರಾಗಿದ್ದಾರೆ.

ಶಿವಮೊಗ್ಗದಿಂದ ಧರ್ಮಸ್ಥಳಕ್ಕೆ ಕಾರು ಚಲಿಸುವ ಸಂದರ್ಭದಲ್ಲಿ ಈ ಘಟನೆ ಸಂಭವಿಸಿದೆ. ಕಾರು 100 ಅಡಿ ಪ್ರಪಾತಕ್ಕೆ ಉರುಳಿದರು ಕೂಡ ಪ್ರಯಾಣಿಕರಿಗೆ ಯಾವುದೇ ಅಪಾಯ ಎದುರಾಗಿಲ್ಲ. ಅವರೆಲ್ಲರೂ ಪವಾಡ ಸದೃಶರೆಂಬಂತೆ ಸಣ್ಣಪುಟ್ಟ ಗಾಯಗಳಿಂದ ಆರಾಗಿದ್ದಾರೆ.

ಘಟನೆಯ ವಿವರ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿದ ಸಮಾಜಸೇವಕ ಆರಿಫ್ ಅವರು ಗಾಯಾಳುಗಳನ್ನು ಮೂಡಿಗೆರೆಯ ಸರ್ಕಾರಿ ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ನೀಡಿದ್ದಾರೆ.

ಇನ್ನು ಚಾರ್ಮಾಡಿ ಘಾಟ್ ನಲ್ಲಿ ದಿನೇ ದಿನೇ ಅಪಘಾತಗಳು ಸಂಭವಿಸುತ್ತಿದ್ದು ವಾಹನ ಚಾಲಕರು ಎಚ್ಚರಿಕೆಯಿಂದ, ತಡವಾದರೂ ಪರವಾಗಿಲ್ಲ ನಿಧಾನವಾಗಿ ಚಲಿಸಿ ಎಂದು ಪೊಲೀಸರು ಮನವಿ ಮಾಡಿದ್ದಾರೆ

You may also like