Home » ಊರಿನ ಜಾತ್ರೆಯ ಮಹಾರಥೋತ್ಸವದಂದು ನಡೆಯಿತೊಂದು ಅವಘಡ !! | ಪಟಾಕಿ ಸಿಡಿದು ರಥಕ್ಕೆ ತಗುಲಿದ ಬೆಂಕಿ, ತಪ್ಪಿದ ಅನಾಹುತ

ಊರಿನ ಜಾತ್ರೆಯ ಮಹಾರಥೋತ್ಸವದಂದು ನಡೆಯಿತೊಂದು ಅವಘಡ !! | ಪಟಾಕಿ ಸಿಡಿದು ರಥಕ್ಕೆ ತಗುಲಿದ ಬೆಂಕಿ, ತಪ್ಪಿದ ಅನಾಹುತ

by ಹೊಸಕನ್ನಡ
0 comments

ಊರಿನ ಜಾತ್ರೆಯೆಂದರೆ ಸಂಭ್ರಮವೋ ಸಂಭ್ರಮ. ಆದರೆ ಇಲ್ಲೊಂದು ಕಡೆ ನಡೆದ ಜಾತ್ರೆಯೊಂದರಲ್ಲಿ ಅಚಾತುರ್ಯವೊಂದು ನಡೆದಿದೆ. ಜಾತ್ರೆಯ ಮೆರವಣಿಗೆಯಲ್ಲಿ ಪಟಾಕಿ ಸಿಡಿದು ರಥಕ್ಕೆ ಬೆಂಕಿ ತಗುಲಿದ ಘಟನೆ ಬೆಳಗಾವಿ ಜಿಲ್ಲೆ ರಾಮದುರ್ಗ ತಾಲೂಕಿನ ಶಿವಪೇಟೆ ಗ್ರಾಮದಲ್ಲಿ ಮಂಗಳವಾರ ನಡೆದಿದೆ.

ನಿನ್ನೆ ಶಿವಪೇಟೆ ಗ್ರಾಮದ ಜಡಿಶಂಕರಲಿಂಗ ದೇವರ ಜಾತ್ರೆ ಹಮ್ಮಿಕೊಳ್ಳಲಾಗಿತ್ತು. ಜಾತ್ರೆಯ ಪ್ರಯುಕ್ತ ಜಡಿ ಶಂಕರಲಿಂಗ ದೇವರ 38ನೇ ಮಹಾರಥೋತ್ಸವವಿತ್ತು.
ಈ ವೇಳೆ ಕೆಲ ಭಕ್ತರು ಪಟಾಕಿ ಸಿಡಿಸಿದ್ದು, ಪಟಾಕಿ ಕಿಡಿ ರಥಕ್ಕೆ ತಗುಲಿದೆ. ರಥಕ್ಕೆ ಬೆಂಕಿ ತಗುಲುತ್ತಿದ್ದಂತೆಯೇ ಎಚ್ಚೆತ್ತ ಗ್ರಾಮಸ್ಥರು ಕೂಡಲೇ ಬೆಂಕಿ ನಂದಿಸಿದ್ದಾರೆ.

ಬೆಂಕಿ ನಂದಿಸಿದ್ದರಿಂದಾಗಿ ಸ್ಥಳದಲ್ಲಿ ಯಾವುದೇ ಸಾವು-ನೋವುಗಳು ಸಂಭವಿಸಿಲ್ಲ. ಆದರೆ, ರಥಕ್ಕೆ ಬೆಂಕಿ ಹೊತ್ತಿಕೊಂಡಿದ್ದರ ಕುರಿತು ಭಕ್ತರಿಂದ ಬೇರೆ ಬೇರೆ ರೀತಿಯ ಮಾತುಗಳು ಕೇಳಿ ಬರುತ್ತಿವೆ. ರಥಕ್ಕೆ ಬೆಂಕಿ ಹೊತ್ತಿಕೊಂಡಿದ್ದು ಅಪಶಕುನ ಎಂದು ಕೆಲವರು ಆತಂಕ ವ್ಯಕ್ತಪಡಿಸುತ್ತಿದ್ದಾರೆ.

You may also like

Leave a Comment