Home » ಪ್ರಯಾಣಿಕರಿದ್ದ ಕಾರನ್ನೇ ಟೊಯಿಂಗ್ ಮಾಡಿದ ನಗರ ಪಾಲಿಕೆ !! | ಪ್ರಯಾಣಿಕರ ಸಮೇತ ಕಾರನ್ನು ಎಳೆದೊಯ್ಯುವ ವೀಡಿಯೋ ವೈರಲ್

ಪ್ರಯಾಣಿಕರಿದ್ದ ಕಾರನ್ನೇ ಟೊಯಿಂಗ್ ಮಾಡಿದ ನಗರ ಪಾಲಿಕೆ !! | ಪ್ರಯಾಣಿಕರ ಸಮೇತ ಕಾರನ್ನು ಎಳೆದೊಯ್ಯುವ ವೀಡಿಯೋ ವೈರಲ್

0 comments

ನೋ ಪಾರ್ಕಿಂಗ್ ಬೋರ್ಡ್ ಇದ್ದ ಸ್ಥಳದಲ್ಲಿ ಪಾರ್ಕಿಂಗ್ ಮಾಡಲಾದ ಗಾಡಿಯನ್ನು ಟೊಯಿಂಗ್ ಮಾಡುವುದು ಸಹಜ. ಆದರೆ ಪ್ರಯಾಣಿಕರಿದ್ದ ಕಾರೊಂದನ್ನೇ ಟೊಯಿಂಗ್ ಮಾಡಲಾದ ವಿಚಿತ್ರ ಘಟನೆ ಉತ್ತರ ಪ್ರದೇಶದ ಲಕ್ನೋದಲ್ಲಿ ನಡೆದಿದೆ.

ಕಾರು ಚಾಲಕ ಸುನಿಲ್ ಹಾಗೂ ಆತನ ಸ್ನೇಹಿತ ಹಜರತ್‍ಗಂಜ್ ನಗರಕ್ಕೆ ತೆರಳಿದ್ದರು. ಕಾರನ್ನು ರಸ್ತೆ ಬದಿ ಪಾರ್ಕ್ ಮಾಡಿ, ಖರೀದಿ ಮಾಡಬೇಕಿದ್ದ ವಸ್ತುಗಳ ಬಗ್ಗೆ ಚರ್ಚೆಯಲ್ಲಿದ್ದರು. ಈ ವೇಳೆ ಟಾ-ಟ್ರಕ್ ಬಂದು ಕಾರನ್ನು ಎಳೆದುಕೊಂಡು ಹೋಗಿದೆ.

ನೋ ಪಾರ್ಕಿಂಗ್ ವಲಯದಲ್ಲಿ ವಾಹನಗಳನ್ನು ನಿಲ್ಲಿಸಿದ್ದರೂ ಅದರಲ್ಲಿ ಪ್ರಯಾಣಿಕರಿದ್ದರೆ ಅದನ್ನು ಎಳೆದೊಯ್ಯಬಾರದೆಂಬ ನಿಯಮವಿದೆ. ಈ ಘಟನೆ ನಡೆದಾಗ ಸ್ಥಳದಲ್ಲಿ ನೆರೆದಿದ್ದವರು ವೀಡಿಯೋವನ್ನು ಮಾಡಿ ಸಾಮಾಜಿಕ ಮಾಧ್ಯಮಗಳಲ್ಲಿ ಹರಿ ಬಿಟ್ಟಿದ್ದಾರೆ.

ವೀಡಿಯೋ ವೈರಲ್ ಆಗುತ್ತಿದ್ದಂತೆ ನಗರ ಪಾಲಿಕೆ ಆಯುಕ್ತರ ಗಮನಕ್ಕೆ ಬಂದಿದೆ. ಬಳಿಕ ಘಟನೆ ಬಗ್ಗೆ ತನಿಖೆಗೆ ಆದೇಶಿಸಿದ್ದಾರೆ. ತನಿಖೆಯ ಬಳಿಕ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದಿದ್ದಾರೆ ಎಂದು ತಿಳಿದುಬಂದಿದೆ.

You may also like

Leave a Comment