Home » Carcinogenic Factor: ಕರಿದ ಹಸಿರು ಬಟಾಣಿಯಲ್ಲಿ ಕ್ಯಾನ್ಸರ್‌ಕಾರಕ ಅಂಶ- ಆಹಾರ ಇಲಾಖೆ ವರದಿ

Carcinogenic Factor: ಕರಿದ ಹಸಿರು ಬಟಾಣಿಯಲ್ಲಿ ಕ್ಯಾನ್ಸರ್‌ಕಾರಕ ಅಂಶ- ಆಹಾರ ಇಲಾಖೆ ವರದಿ

0 comments

Carcinogenic Factor:ಕರಿದ ಹಸಿರು ಬಟಾಣಿಯಲ್ಲಿ ಕ್ಯಾನ್ಸರ್‌ ಕಾರಕ ಅಂಶ ಪತ್ತೆಯಾಗಿದೆ ಎಂದು ಆಹಾರ ಸುರಕ್ಷತಾ ಇಲಾಖೆ ವರದಿ ನೀಡಿದೆ. ಕರಿದ ಹಸಿರು ಬಟಾಣಿಗೆ ನಿಷೇಧಿತ ಬಣ್ಣ ಬಳಕೆ ಮಾಡುತ್ತಿರುವ ಕುರಿತು ಈ ಹಿಂದೆ ವರದಿಯಾಗಿತ್ತು. ಹೀಗಾಗಿ ಆಹಾರ ಇಲಾಖೆ ಸ್ಯಾಂಪಲ್ಸ್‌ ಸಂಗ್ರಹ ಮಾಡಿ ಈ ಕುರಿತು ಗುಣಮಟ್ಟದ ಪರೀಕ್ಷೆಯನ್ನು ಮಾಡಿ ವರದಿ ನೀಡುವುದಾಗಿ ಹೇಳಿತ್ತು. ಇದೀಗ ವರದಿ ಬಂದಿದ್ದು 8 ರಿಂದ 10 ಕಡೆ ಕ್ಯಾನ್ಸರ್‌ ಕಾರಕ ಬಣ್ಣ ಬಳಕೆ ಮಾಡುತ್ತಿರುವುದು ಪತ್ತೆಯಾಗಿರುವ ಕುರಿತು ವರದಿಯಾಗಿದೆ.

ಇನ್ನೊಂದು ಕಡೆ ಇಡ್ಲಿ ಬೇಯಿಸಲು ಪ್ಲಾಸ್ಟಿಕ್‌ ಬಳಕೆ ಮಾಡಲಾಗುತ್ತಿದ್ದು, ಇದನ್ನು ನಿಷೇಧ ಮಾಡಲಾಗಿದೆ. ಈ ಕುರಿತು ಇನ್ನೆರಡು ದಿನಗಳಲ್ಲಿ ಅಧಿಕೃತ ಸುತ್ತೋಲೆ ನೀಡಲಾಗುವುದು ಎಂದು ಆರೋಗ್ಯ ಸಚಿವ ದಿನೇಶ್‌ ಗುಂಡೂರಾವ್‌ ಹೇಳಿದ್ದಾರೆ.

ಹೋಟೆಲ್‌ ಮತ್ತು ಉಪಹಾರ ಕೇಂದ್ರಗಳಲ್ಲಿ ಇಡ್ಲಿ ಬೇಯಿಸಲು ಪ್ಲಾಸ್ಟಿಕ್‌ ಬಳಕೆ ಮಾಡಲಾಗುತ್ತಿರುವುದು ಪತ್ತೆಯಾಗಿದ್ದು, ಇದನ್ನು ನಿಷೇಧ ಮಾಡಲಾಗಿದೆ. ಮೊದಲು ಇಡ್ಲಿ ತಯಾರಿಕೆಗೆ ಹತ್ತಿ ಬಟ್ಟೆ ಬಳಕೆ ಮಾಡಲಾಗುತ್ತಿತ್ತು. ಆದರೆ ಇತ್ತೀಚೆಗೆ ಹೋಟೆಲ್‌ನಲ್ಲಿ ಪ್ಲಾಸ್ಟಿಕ್‌ ಬಳಕೆ ಮಾಡುತ್ತಿದ್ದಾರೆ. ಇದರಲ್ಲಿ ಕಾರ್ಸಿನೋಜೆನಿಕ್‌ ಅಂಶ ಮಿಶ್ರಣವಾಗುತ್ತಿದೆ. ಇದು ಆರೋಗ್ಯಕ್ಕೆ ಹಾನಿಕಾರ ಎಂದು ಆರೋಗ್ಯ ಸಚಿವ ದಿನೇಶ್‌ ಗುಂಡೂರಾವ್‌ ಹೇಳಿದ್ದಾರೆ.

You may also like