Savings account: ಸಾಮಾನ್ಯವಾಗಿ ಸೇವಿಂಗ್ಸ್ ಅಕೌಂಟ್(savings account) ನಲ್ಲಿ ಕ್ಯಾಷ್ ಡೆಪಾಸಿಟ್,ವಿತ್ ಡ್ರಾ ಆಸ್ತಿ ವಹಿವಾಟು ಇತ್ಯಾದಿ ನಾನಾ ರೀತಿಯ ಟ್ರಾನ್ಸಾಕ್ಷನ್ಗಳನ್ನು ಮಾಡಲಾಗುತ್ತದೆ. ಆದ್ರೆ ಸಾಮಾನ್ಯ ಆದಾಯ ಇರುವ ವ್ಯಕ್ತಿಗಳಿಗೂ ಐಟಿ ನೋಟೀಸ್ ಕಳುಹಿಸುತ್ತಾರೆ ಎನ್ನುವುದು ತಿಳ್ಕೊಳಿ.
ಹೌದು, ಹಣದ ವಹಿವಾಟಿಗೆ ಪ್ರಧಾನ ಮೂಲವೇ ಸೇವಿಂಗ್ಸ್ ಅಕೌಂಟ್. ಇಲ್ಲಿ ಎಲೆಕ್ಟ್ರಾನಿಕ್ ರೂಪದಲ್ಲಿ ಕ್ಯಾಷ್ ವಹಿವಾಟು ನಡೆದರೆ ಅದು ಎಲ್ಲಿಂದ ಬಂತು, ಎಲ್ಲಿಂದ ಹೋಯಿತು ಎನ್ನುವ ಮಾಹಿತಿ ಸಿಕ್ಕಿಹೋಗುತ್ತದೆ. ಹಾಗಾಗಿ ಐಟಿ ಗಮನಿಸಬಹುದಾದ ಕೆಲ ಪ್ರಮುಖ ಸೇವಿಂಗ್ಸ್ ಅಕೌಂಟ್ ಟ್ರಾನ್ಸಾಕ್ಷನ್ಗಳ ವಿವರ ಕೆಳಕಂಡಂತಿದೆ.
ವರ್ಷದಲ್ಲಿ ದೊಡ್ಡ ಮೊತ್ತದ ಕ್ಯಾಷ್ ಡೆಪಾಸಿಟ್ಗಳು:
ನಿಮ್ಮ ಎಲ್ಲಾ ಸೇವಿಂಗ್ಸ್ ಅಕೌಂಟ್ಗಳಲ್ಲಿ ಒಂದು ವರ್ಷದಲ್ಲಿ 10 ಲಕ್ಷ ರೂಗಿಂತ ಹೆಚ್ಚಿನ ಕ್ಯಾಷ್ ಡೆಪಾಸಿಟ್ ಆಗಿದ್ದರೆ, ಬ್ಯಾಂಕುಗಳು ಅದನ್ನು ಆದಾಯ ತೆರಿಗೆ ಇಲಾಖೆಯ ಗಮನಕ್ಕೆ ತರುತ್ತದೆ. ಅಷ್ಟು ಕ್ಯಾಷ್ ಹಣ ಎಲ್ಲಿಂದ ಹೇಗೆ ಬಂತು ಎಂದು ಐಟಿ ನೋಟೀಸ್ ಬರಬಹುದು. ಆ ಆದಾಯ ಮೂಲಕ್ಕೆ ಸಾಕ್ಷ್ಯ ತೋರಿಸಬೇಕಾಗುತ್ತದೆ.
ಕ್ರೆಡಿಟ್ ಕಾರ್ಡ್ ಬಿಲ್ ಪೇಮೆಂಟ್ಗಳು:
ನಿಮ್ಮ ಕ್ರೆಡಿಟ್ ಕಾರ್ಡ್ ಬಳಕೆ ಒಟ್ಟು 10 ಲಕ್ಷ ರೂ ದಾಟಿದರೆ ಬ್ಯಾಂಕುಗಳು ಮತ್ತು ಕ್ರೆಡಿಟ್ ಕಾರ್ಡ್ ಕಂಪನಿಗಳು ಐಟಿ ಗಮನಕ್ಕೆ ತರುತ್ತವೆ. ಹಾಗೆಯೇ, ಒಂದು ಲಕ್ಷ ರೂಗಿಂತ ಹೆಚ್ಚಿನ ಮೊತ್ತದ ಪೇಮೆಂಟ್ ಅನ್ನು ಕ್ಯಾಷ್ ಮೂಲಕ ಮಾಡಿದಾಗಲೂ ಅದು ಐಟಿ ಗಮನಕ್ಕೆ ಹೋಗುತ್ತದೆ.
ದೊಡ್ಡ ಮೊತ್ತದ ಕ್ಯಾಷ್ ಟ್ರಾನ್ಸಾಕ್ಷನ್:
ಬಹಳ ದೊಡ್ಡ ಮೊತ್ತದ ಕ್ಯಾಷ್ ಟ್ರಾನ್ಸಾಕ್ಷನ್ ನಡೆಸಿದರೆ, ಹೆಚ್ಚು ಕ್ಯಾಷ್ ವಿತ್ಡ್ರಾ ಮಾಡುವುದು ಅದು ಐಟಿ ಇಲಾಖೆಗೆ ಅನುಮಾನ ಬರಿಸುತ್ತೆ..
ಆಸ್ತಿ ವಹಿವಾಟು:
30 ಲಕ್ಷ ರೂ.ಗೂ ಅಧಿಕ ಮೌಲ್ಯದ ಯಾವುದೇ ಚಿರಾಸ್ತಿಯನ್ನು ಖರೀದಿಸಿದಾಗ ಅಥವಾ ಮಾರಿದಾಗ ಐಟಿ ಇದನ್ನು ಪರಿಶೀಲಿಸಬಹುದು.
ನಿಷ್ಕ್ರಿಯ ಅಕೌಂಟ್ ದಿಢೀರನೇ ಸಕ್ರಿಯಗೊಂಡರೆ:
ಬಹಳ ದಿನಗಳಿಂದ ನಿಷ್ಕ್ರಿಯಗೊಂಡಿದ್ದ ಬ್ಯಾಂಕ್ ಅಕೌಂಟ್ ಸಕ್ರಿಯಗೊಂಡು, ಬಹಳ ಶೀಘ್ರದಲ್ಲೇ ಹೆಚ್ಚಿನ ವಹಿವಾಟು ನಡೆಸುವುದು ಇತ್ಯಾದಿ.
ಹಾಗೆಯೇ, ಅಧಿಕ ಮೊತ್ತದ ಫಾರೀನ್ ಕರೆನ್ಸಿ ಟ್ರಾನ್ಸಾಕ್ಷನ್ಗಳು ಆಗಿರುವುದನ್ನು ಐಟಿ ಇಲಾಖೆ ಗಮನಿಸುತ್ತೆ.
