Home » Tiruvananthapura: ನಿದ್ರೆಗೆ ಭಂಗ ತಂದ ಹುಂಜದ ವಿರುದ್ಧ ಕೇಸು ದಾಖಲು

Tiruvananthapura: ನಿದ್ರೆಗೆ ಭಂಗ ತಂದ ಹುಂಜದ ವಿರುದ್ಧ ಕೇಸು ದಾಖಲು

0 comments

Tiruvananthapura: ಪ್ರತಿನಿತ್ಯ ನಸುಕಿನ 3 ಗಂಟೆಯ ವೇಲೆಗೆ ಹುಂಜವು ಕೂಗುವ ಮೂಲಕ ನಿದ್ರೆಗೆ ಭಂಗ ಉಂಟಾಗುತ್ತಿದ್ದು, ಅದರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿ ಕೇರಳದ ಪತ್ತಿನಂತಿಟ್ಟ ಜಿಲ್ಲೆಯ ಪಳ್ಳಿಕಲ್‌ ಗ್ರಾಮದಲ್ಲಿ ವೃದ್ಧರೊಬ್ಬರು ದೂರನ್ನು ದಾಖಲು ಮಾಡಿದ್ದಾರೆ.

“ಪ್ರತಿದಿನ ನಸುಕಿನ 3 ಗಂಟೆಗೆ ನೆರೆಮನೆಯ ಹುಂಜ ಒಂದೇ ಸಮನೆ ಕೂಗಲು ಆರಂಭಿಸುತ್ತದೆ. ಇದರಿಂದ ನೆಮ್ಮದಿಯ ನಿದ್ರೆಯೇ ದುಸ್ತರವಾಗಿದೆ. ಮನಸ್ಸಿಗೆ ಕಿರಿಕಿರಿಯಾಗುತ್ತಿದೆ” ಎಂದು ಸಂತ್ರಸ್ತ ರಾಧಾಕೃಷ್ಣ ಕುರುಪ್‌ ಅವರು ಅಡೂರು ಕಂದಾಯ ವಿಭಾಗಿಐ ಕಚೇರಿಯಲ್ಲಿ ದೂರನ್ನು ದಾಖಲು ಮಾಡಿದ್ದಾರೆ.

ತಮ್ಮ ನೆರೆಮನೆಯ ನಿವಾಸಿ ಅನಿಲ್‌ಕುಮಾರ್‌ ಅವರಿಗೆ ಸೇರಿದ ಹುಂಜದ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಕುರುಪ್‌ ಒತ್ತಾಯಿಸಿದ್ದಾರೆ. ದೂರಿನ ಮೇರೆಗೆ ಅಧಿಕಾರಿಗಳು ಪೌಲ್ಟ್ರಿ ಫಾರಂಬನ್ನು ಬೇರೆಡೆಗೆ ಸ್ಥಳಾಂತರಿಸಲು ಅನಿಲ್‌ಕುಮಾರ್‌ ಅವರಿಗೆ ಆದೇಶ ನೀಡಿದ್ದು, ಇದಕ್ಕೆ 14 ದಿನಗಳ ಗಡುವು ನೀಡಿದ್ದಾರೆ.

You may also like