Mangaluru: ದಿನಾಂಕ 09-06-2025 ರಂದು ರಾತ್ರಿ ಸುಮಾರು 8 ಗಂಟೆಗೆ ಮಾಜಿ ಶಾಸಕರಾದ ಮೊಯಿದ್ದೀನ್ ಬಾವಾ ಅವರು ಮತ್ತು ಅವರ ಇಬ್ಬರು ಸಹಚರರ ಜೊತೆ ಕಾಮಗಾರಿಯ ಬಿಲ್ಲನ್ನು ಮಂಜೂರು ಮಾಡುವ ವಿಷಯಕ್ಕೆ ಸಂಬಂಧಪಟ್ಟಂತೆ ಎನ್.ಎಂ.ಪಿ.ಎ ಕಚೇರಿಯ ಡೆಪ್ಯೂಟಿ ಚೇರ್ಪರ್ಸನ್‌ರವರ ಕಚೇರಿಗೆ ನುಗ್ಗಿ 15 ನಿಮಿಷಗಳ ಕಾಲ ಅವರ ಕರ್ತವ್ಯಕ್ಕೆ ಅಡ್ಡಿ ಪಡಿಸಿದ್ದು, ಕಚೇರಿಯಿಂದ ಹೊರಗೆ ಹೋಗಲು ಅವಕಾಶ ನೀಡದೇ ಅವರನ್ನು ತಡೆದು ನಿಲ್ಲಿಸಿದ ಘಟನೆ ನಡೆದಿರುವ ಕುರಿತು ವರದಿಯಾಗಿದೆ.
ನಂತರ ಅವರು ಹೊರಗೆ ಬಂದು ಹಿಂಬಾಲಿಸುತ್ತಾ, ಬೆದರಿಕೆ ಹಾಕಿ ಕಿರುಚುತ್ತಾ, ಕಾರಿನಲ್ಲಿ ಬೇರೆ ಕರ್ತವ್ಯಕ್ಕೆ ಹೋಗುತ್ತಿರುವಾಗ ಕಾರನ್ನು ತಡೆದಿದ್ದು, ವಾದ ವಿವಾದ ಮಾಡಿರುವ ಕುರಿತು ದಿ.10.06.2025 ರಂದು ಸಂಜೆ ಸೆಕ್ರೆಟರಿ, ಎನ್‌ಎಂಪಿಎ, ಪಣಂಬೂರು, ಮಂಗಳೂರು ಇವರು ದೂರನ್ನು ನೀಡಿದ್ದಾರೆ.
ಈ ಕುರಿತು ಪಣಂಬೂರು ಪೊಲೀಸ್ ಠಾಣೆಯಲ್ಲಿ ಬಿಎನ್‌ಎಸ್ ಅಡಿಯಲ್ಲಿ ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಾಗಿರುತ್ತದೆ. ತನಿಖೆ ನಡೆಯುತ್ತಿದೆ.
