Home » CBSE 10 ಮತ್ತು 12ನೇ ತರಗತಿ ಅವಧಿ-2ರ ಬೋರ್ಡ್ ಪರೀಕ್ಷೆಯ ವೇಳಾಪಟ್ಟಿ ಬಿಡುಗಡೆ|ಟರ್ಮ್ 1 ಬೋರ್ಡ್ ಪರೀಕ್ಷೆಗಳ ಫಲಿತಾಂಶ ಘೋಷಿಸುವ ನಿರೀಕ್ಷೆ!

CBSE 10 ಮತ್ತು 12ನೇ ತರಗತಿ ಅವಧಿ-2ರ ಬೋರ್ಡ್ ಪರೀಕ್ಷೆಯ ವೇಳಾಪಟ್ಟಿ ಬಿಡುಗಡೆ|ಟರ್ಮ್ 1 ಬೋರ್ಡ್ ಪರೀಕ್ಷೆಗಳ ಫಲಿತಾಂಶ ಘೋಷಿಸುವ ನಿರೀಕ್ಷೆ!

0 comments

ನವದೆಹಲಿ : ಸೆಂಟ್ರಲ್ ಬೋರ್ಡ್ ಆಫ್ ಸೆಕೆಂಡರಿ ಎಜುಕೇಷನ್ 10 ಮತ್ತು 12ನೇ ತರಗತಿ ಅವಧಿ 2ರ ಬೋರ್ಡ್ ಪರೀಕ್ಷೆಗಳಿಗೆ ವಿವರವಾದ ವೇಳಾಪಟ್ಟಿಯನ್ನ ಬಿಡುಗಡೆ ಮಾಡಿದೆ.

ಏಪ್ರಿಲ್ 26ರಿಂದ ಪರೀಕ್ಷೆಗಳು ಪ್ರಾರಂಭವಾಗಲಿವೆ ಎಂದು ತಿಳಿಸಿದ್ದು,CBSE ಶೀಘ್ರದಲ್ಲೇ ತಮ್ಮ ಅಧಿಕೃತ ವೆಬ್ ಸೈಟ್ ನಲ್ಲಿ ಟರ್ಮ್ 1 ಬೋರ್ಡ್ ಪರೀಕ್ಷೆಗಳ ಫಲಿತಾಂಶಗಳನ್ನು ಘೋಷಿಸುವ ನಿರೀಕ್ಷೆಯಿದೆ.

ಇನ್ನೂ ಯಾವುದೇ ಅಧಿಕೃತ ಪ್ರಕಟಣೆ ಇಲ್ಲದಿದ್ದರೂ, ಮಂಡಳಿಯು ಈ ಹಿಂದೆ 12 ನೇ ತರಗತಿಯ ಅವಧಿ- 1ರ ಫಲಿತಾಂಶಗಳನ್ನು ಶುಕ್ರವಾರದ ವೇಳೆಗೆ ನಿರೀಕ್ಷಿಸಲಾಗಿದೆ ಮತ್ತು ವರದಿಗಳ ಪ್ರಕಾರ 10 ನೇ ತರಗತಿಯ ಫಲಿತಾಂಶಗಳನ್ನು ಪ್ರಕಟಿಸಲಾಗುವುದು ಎಂದು ತಿಳಿಸಿತ್ತು.’ಫಲಿತಾಂಶಗಳ ಸಿದ್ಧತೆ ಪ್ರಕ್ರಿಯೆ ಬಹುತೇಕ ಪೂರ್ಣಗೊಂಡಿದ್ದು, ಯಾವಾಗ ಬೇಕಾದರೂ ಫಲಿತಾಂಶ ಘೋಷಿಸಬಹುದು. ಮಂಡಳಿಯು ಶೀಘ್ರದಲ್ಲೇ ಸೂಚನೆ ನೀಡುತ್ತದೆ’ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ.

You may also like

Leave a Comment