ಕರ್ನಾಟಕ ರಾಜ್ಯದಲ್ಲಿ ಭಾರೀ ವಿಧ್ವಂಸಕ ಕೃತ್ಯಕ್ಕೆ ಸಂಚು ಇದೀಗ ಬಯಲಾಗಿದೆ. ದೇಶ ವಿರೋಧಿ ಕೃತ್ಯಕ್ಕೆ ಸಂಚು ರೂಪಿಸುತ್ತಿದ್ದ ಐವರು ಶಂಕಿತ ಭಯೋತ್ಪಾದಕರನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಸಂಗೀತ ಉಗ್ರರೆಲ್ಲರೂ ಬೆಂಗಳೂರಿನವರು ಎಂದು ತಿಳಿದುಬಂದಿದೆ.
ಬಂಧಿತರನ್ನು ಸಯ್ಯದ್ ಸುಹೇಲ್, ಉಮರ್, ಜುನೇದ್ ಮುದಾಶೀರ್, ಜಾಹಿದ್ ಬಂಧಿತ ಎಂದು ಗುರುತಿಸಲಾಗಿದೆ. ಕ್ರಿಮಿನಲ್ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದ ಈ ವ್ಯಕ್ತಿಗಳು ಇದೀಗ ಉಗ್ರಗಾಮಿ ಚಟುವಟಿಕೆಗಳಲ್ಲಿ ಭಾಗಿಯಾಗಿರುವ ಮಾಹಿತಿ ಲಭ್ಯವಾಗಿದೆ. ಇವರು ಬೆಂಗಳೂರು ಸೇರಿದಂತೆ ರಾಜ್ಯಾದ್ಯಂತ ಭಾರಿ ವಿಧ್ವಂಸಕ ಕೃತ್ಯಕ್ಕೆ ಸಂಚು ರೂಪಿಸಿದ್ದರು ಎಂದು ತಿಳಿದುಬಂದಿದೆ. ಆದರೆ ಇವರೆಲ್ಲರ ಲೀಡರ್ ಜುಲೈ ಎಂಬವ ತಲೆ ತಪ್ಪಿಸಿಕೊಂಡಿದ್ದಾನೆ.
2017ರ ಅಕ್ಟೋಬರ್ ನಲ್ಲಿ, ಬೆಂಗಳೂರಿನ ಆರ್.ಟಿ.ನಗರದಲ್ಲಿ ನಡೆದಿದ್ದ ಮೂವರ ಕಿಡ್ನ್ಯಾಪ್, ಓರ್ವನ ಹತ್ಯೆ ಪ್ರಕರಣದಲ್ಲಿ ಹಲವು ಆರೋಪಿಗಳು ಅರೆಸ್ಟ್ ಆಗಿ ಜೈಲು ಪಾಲಾಗಿದ್ದರು. ಆದರೆ ಪರಪ್ಪನ ಅಗ್ರಹಾರ ಜೈಲಿನಲ್ಲಿರುವಾಗ ಅವರಿಗೆ ದೇಶದ್ರೋಹಿ ಯುವಕರ ಪರಿಚಯವಾಗಿತ್ತು. ಪರಪ್ಪನ ಅಗ್ರಹಾರ ಜೈಲಿನಿಂದ ಉಗ್ರರ ಜೊತೆಗೆ ಸಂಪರ್ಕ ಸಾಧಿಸಿದ ಅವರು ಜೈಲಿನಿಂದ ಬಂದ ನಂತರ ಉಗ್ರಗಾಮಿ ಚಟುವಟಿಕೆಗೆ ಅಗತ್ಯ ತರಬೇತಿ ಪಡೆದಿದ್ದರು. ಈ ಬಗ್ಗೆ ಐವರು ಶಂಕಿತ ಉಗ್ರರನ್ನು ಸಿಸಿಬಿ ಪೊಲೀಸರು ಬಂಧಿಸಿ ವಿಚಾರಣೆಗೊಳಪಡಿಸಿದ್ದಾರೆ.
ಶಂಕಿತ ಉಗ್ರರಿಂದ ಹಲವು ಸ್ಪೋಟಕಗಳನ್ನು ಪತ್ತೆ ಮಾಡಲಾಗಿದೆ.ಈ ಎಲ್ಲರಿಗೂ ಜನ ನಿಭಿಡ ಪ್ರದೇಶವೇ ಟಾರ್ಗೆಟ್ ಆಗಿತ್ತು, ಬೆಂಗಳೂರಿನಲ್ಲಿ ರಕ್ತಪಾತಕ್ಕೆ ಸ್ಕೆಚ್ ರೆಡಿಯಾಗಿತ್ತು. ಅತಿ ದೊಡ್ಡ ಸಂಚು. ಸಿಸಿಬಿ ಮತ್ತು ಕೇಂದ್ರ ಗುಪ್ತಚರ ಇಲಾಖೆಯ ಜಂಟಿ ಕಾರ್ಯಾಚರಣೆಯಿಂದ ಇದೀಗ ಉಗ್ರರು ಬಲಿ. ಈ ಉಗ್ರ ಬಳಿ 4 ವಾಕಿ ತಾಕಿ, 7 ಕಂಟ್ರಿ ಮೇಡ್ ಪಿಸ್ತೂಲು, 40 ಸಜೀವ ಗುಂಡುಗಳು, ಮದ್ದು ಗುಂಡುಗಳು, 2 ಡ್ರ್ಯಾಗರ್ 2 ಸೆಟಲ್ ಲೈಟ್ ಫೋನ್ ಗಳು ನಾಲ್ಕು ಗ್ರೆನೇಡ್ ಮುಂತಾದವುಗಳು ಶಂಕಿತ ಉಗ್ರರ ಮನೆಯಲ್ಲಿ ಪತ್ತೆಯಾಗಿದೆ. ಇದೀಗ ಆಡು ಗೋಡಿಯ ಸೆಲ್ ಒಂದರಲ್ಲಿ ಇವರ ವಿಚಾರಣೆ ನಡೆದಿದೆ.
ಇದನ್ನು ಓದಿ: Vidhana parishath: ರಾಜ್ಯ ಕಾಂಗ್ರೆಸ್ ಸರ್ಕಾರಕ್ಕೆ ಬಿಗ್ ಶಾಕ್ ! ಈ ವಿಚಾರದಲ್ಲಿ ಕೊನೆಗೂ ಗೆದ್ದು ಬೀಗದ ಬಿಜೆಪಿ !!
