Bengaluru Stampede: ನಿನ್ನೆ ಬೆಂಗಳೂರಿನಲ್ಲಿ ಚಿನ್ನಸ್ವಾಮಿ ಸ್ಟೇಡಿಯಂ ಬಳಿ ಘಟನೆ ನಮಗೆ ದುಃಖ ತಂದಿದೆ. ಪೂರ್ವ ತಯಾರಿ ಇಲ್ಲದೆಯೇ ಸರ್ಕಾರ ಕಾರ್ಯಕ್ರಮ ಆಯೋಜನೆ ಮಾಡಿದೆ.ಸರ್ಕಾರನ ದೊಡ್ಡಸ್ತಿಕೆ ಮಾಡಬೇಕು ಅಂತಾ ಸೆಲೆಬ್ರೇಷನ್ ಮಾಡಿದ್ದಾರೆ. ಈ ಸೆಲೆಬ್ರೇಷನ್ ಯಾಕೆ ಮಾಡಿದ್ರಿ..? ಇದು ಖಾಸಗಿ ಟೀಂಗಳು, ಹಣಕ್ಕಾಗಿ ಅವರ ಆಟ ಅವರು ಆಡ್ತಾರೆ, ಆರ್ ಸಿಬಿ ಗೆಲ್ತು. ಜನ ಕೂಡ ಮೊದಲೇ ಸೆಲೆಬ್ರೇಷನ್ ಮಾಡಿದ್ರು. ಆದ್ರೆ ಸರ್ಕಾರ ಮತ್ತೆ ಯಾಕೆ ಸೆಲೆಬ್ರೇಷನ್ ಮಾಡಿದ್ದು ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಪ್ರಶ್ನಿಸಿದ್ದಾರೆ.
ಪ್ರೊಟೋಕಾಲ್ಗೆ ಇನ್ಫಾರ್ಮೇಶನ್ ಕೊಟ್ಟಿರಲಿಲ್ಲ, ತಮ್ಮ ಮಕ್ಕಳನ್ನ ಹೈಲೈಟ್ ಮಾಡೋಕೆ ಅಥವಾ ಮಕ್ಕಳ ಒತ್ತಡಕ್ಕೆ ಈ ರೀತಿ ಮಾಡಿದ್ರಾ..? ಡಿಸಿಎಂ ಕಪ್ಪು ಹಿಡ್ಕೊಂಡು ಓಡಾಡ್ತಿದ್ರು, ಕರ್ನಾಟಕಕ್ಕೆ ಲಾಭ ಆಗುತ್ತೆ ಅನ್ನೋ ವಿಚಾರವೂ ಅಲ್ಲ, ಪೊಲೀಸ್ರ ಅನುಮತಿ ಪಡೆಯದೆ ಸೆಲೆಬ್ರೇಷನ್ ಯಾಕ್ ಮಾಡಿದ್ರಿ. ಜನರ ಪ್ರಾಣಕ್ಕೆ ಯಾರು ರಕ್ಷಕರು ಇದ್ರು..? ಮೊದಲು ಫ್ರೀ ಅಂದ್ರಿ, ರಾತ್ರಿ ಪಾಸ್ ಇದೆ ಅಂದ್ರಿ, ಮತ್ತೆ ಆನ್ಲೈನ್ ಪಾಸ್ ಅಂದ್ರಿ, ಗೇಟ್ ಮುಚ್ಚಿದ್ರಿ..? ಗೇಟ್ ಓಪನ್ ಮಾಡಿದಾಗ ಈ ಘಟನೆ ಆಗಿದೆ ಎಂದು ಕರಂದ್ಲಾಜೆ ಆಕ್ರೋಶ ವ್ಯಕ್ತಪಡಿಸಿದರು.
ಮೊದಲೇ ಗೇಟ್ ಓಪನ್ ಮಾಡಿದ್ರೆ ಈ ಥರ ಆಗ್ತಿರಲಿಲ್ಲ. ಜನ ಸರ್ಕಾರ ಪೊಲೀಸ್ರನ್ನ ನಂಬಿ ಬಂದಿದ್ರು. ಮೊನ್ನೆ ನಡೆದ ಪಂದ್ಯದ ವೇಳೆ ಗುಜರಾತ್ ನಲ್ಲಿ ಐದು ಲಕ್ಷ ಜನ ಸೇರಿದ್ರು ಏನೂ ಆಗಿರಲಿಲ್ಲ. ಈ ಮುಂಚೆ ಸಾಕಷ್ಟು ಕಾರ್ಯಕ್ರಮಗಳು ಆಗಿತ್ತು ಏನೂ ಇಲ್ಲ. ಪೊಲೀಸ್ರು ಕಂಟ್ರೋಲ್ ಮಾಡಿದ್ರು. ಇದರಲ್ಲಿ ಡಿಸಿ ಕೂಡ ಆರೋಪಿತ, ಆದರೆ ಆತನ ನೇತೃತ್ವದಲ್ಲಿ ತನಿಖೆ ಮಾಡೋಕೆ ಸರ್ಕಾರ ಹೇಳಿದೆ. ಡಿಸಿ ಇದರ ಜವಾಬ್ದಾರಿ ಹೊರಬೇಕು. ಆಧರೆ ಅವರಿಗೇ ಎನ್ಕ್ವೈರಿ ಮಾಡಲು ಹೇಳಿದ್ದೀರಿ. ಇದರಿಂದ ನ್ಯಾಯ ಸಿಗೋದಿಲ್ಲ. ಹೈ ಕೋರ್ಟ್ ಜಡ್ಜ್ ನೇತೃತ್ವದಲ್ಲಿ ಕಮೀಟಿ ಮಾಡಿ ತನಿಖೆ ಆಗಬೇಕು ಎಂದರು.
ಪುಷ್ಪ ಸಿನಿಮಾ ಸಂದರ್ಭದಲ್ಲಿ ಈ ರೀತಯ ಘಟನೆ ಆಗಿತ್ತು. ಆ ಸರ್ಕಾರಕ್ಕೆ ಘಟ್ಸ್ ಇತ್ತು, ಅಲ್ಲು ಅರ್ಜುನ್ ನ ಅರೆಸ್ಟ್ ಮಾಡಿದ್ರು. ಇಲ್ಲಿ ಯಾರು ಅರೆಸ್ಟ್ ಆಗ್ತಾರೆ? ಡಿಸಿಎಂ ಇಲ್ಲಾ ಸಿಎಂ? ನ್ಯಾಯಾಂಗ ತನಿಖೆ ಆಗಬೇಕು. ಇಲ್ಲಿ ಡಿಸಿನ ಯಾಕೆ ಬಲಿಪಷು ಮಾಡ್ಯಿದ್ದೀರಿ..? ಎಂದು ಪ್ರಶ್ನಿಸಿದ್ದಾರೆ ಶೋಭಾ ಕರಂದ್ಲಾಜೆ.
