Actor Jaggesh: ಜನಸಾಮಾನ್ಯರ ವಸ್ತುಗಳು ಕಳುವಾಗಿ ತಿಂಗಳಾದರೂ ಹುಡುಕಿ ಕೊಡಲ್ಲ. ವಿಐಪಿಗಳಿಗಂದ್ರೆ ಸಂಜೆಯೊಳಗೆ ಹುಡುಕಿ ಕೊಡ್ತಾರೆ. ಬೆಳಗ್ಗೆ ಮಿಸ್ಸಿಂಗ್., ಸಂಜೆವೊತ್ತಿಗೆ ಪತ್ತೆ ಎಂದು ನಟ ಜಗ್ಗೇಶ್ ಸಹೋದರನ ಐಫೋನ್ ಮೊಬೈಲ್ ಮಿಸ್ಸಿಂಗ್ ಆಗಿದ್ದನ್ನು ಹುಡುಕಿಕೊಟ್ಟ ಪೊಲೀಸರ ಬಗ್ಗೆ ಸಾವರ್ಜನಿಕರು ಸಾಮಾನ್ಯರಿಗೊಂದು ಕಾನೂನು, ವಿಐಪಿಗಳಿಗೊಂದು ಕಾನೂನು ಮಾಡ್ಬೇಡಿ ಎಂದು ಜಾಡಿಸಿದ್ದಾರೆ.
ಬೆಳಗ್ಗೆ ಬೈಕಿನಲ್ಲಿ ಹೋಗುವಾಗ ಜೇಬಿಂದ ಜಗ್ಗೇಶ್ ಸಹೋದರನ ಐಫೋನ್ ಬಿದ್ದಿದೆ. ತದನಂತರ ಮಲ್ಲೇಶ್ವರಂ ಪೊಲೀಸ್ ಇನ್ಸ್ ಪೆಕ್ಟರ್ ಗೆ ಜಗ್ಗೇಶ್ ಮಾಹಿತಿ ನೀಡಿದ್ದಾರೆ. ತಕ್ಷಣ ಕಾರ್ಯಪ್ರವೃತ್ತರಾದ ಪೊಲೀಸರು ರಸ್ತೆಯಲ್ಲಿ ಬಿದ್ದಿದ್ದ ಐಫೋನ್ ಕೊಂಡೊಯ್ದಿದ್ದ ವ್ಯಕ್ತಿಯನ್ನು 150 CCTV ಹುಡುಕಿ ಐಫೋನ್ ಕೊಂಡೊಯ್ದ ವ್ಯಕ್ತಿಯನ್ನು ಪೊಲೀಸರು ಪತ್ತೆ ಹಚ್ಚಿದ್ದಾರೆ. ಬೆಳಗ್ಗೆ ಫೋನ್ ಮಿಸ್ಸಿಂಗ್ ಆಗಿದ್ದದ್ದನ್ನು ಸಂಜೆ ವೇಳೆಗೆ ಪತ್ತೆ ಮಾಡಿ ಕರ್ತವ್ಯ ಮೆರೆದಿದ್ದಾರೆ.
ಐಫೋನ್ ಹುಡುಕಿಕೊಟ್ಟ ಪೊಲೀಸರಿಗೆ ಜಗ್ಗೇಶ್ ಚಪ್ಪಾಳೆ ತಟ್ಟಿದ್ದಾರೆ. ಆದರೆ, ಜನಸಾಮಾನ್ಯರಿಂದ ಪೊಲೀಸರು ಮಾಡಿದ ಕೆಲಸಕ್ಕೆ ಸಮಾನತೆಯ ಪಾಠವನ್ನು ಕೇಳುವಂತಾಗಿದೆ. ಸಾಮಾನ್ಯ ಜನರದ್ದು ಮೊಬೈಲ್ ಕಳೆದು ಹೋದ್ರೆ ಹಿಂಗೆ ಹುಡುಕಿ ಕೊಡ್ತೀರಾ.? ಸೆಲೆಬ್ರಿಟಿಗಳಿಗೆ ಸಾವಿರ ಸಿಸಿಟಿವಿ ಬೇಕಾದರೂ ಹುಡುಕಿ ಕೊಡ್ತೀರಾ.? ಜನಸಾಮಾನ್ಯರಿಗೆ ಹುಡುಕಿ ಕೊಡೋದು ಇರಲಿ? ಕಂಪ್ಲೆಂಟ್ ಆದ್ರು ತಗೊಳ್ಳಿ ಅಂತ ಸಾಮಾಜಿಕ ಜಾಲತಾಣದಲ್ಲಿ ಪೊಲೀಸರ ವಿರುದ್ದ ಸಾರ್ವಜನಿಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ:ಸ್ವರ್ಗದ ಹಾದಿಯಲ್ಲಿ ತೀರಿಕೊಂಡ ಪಾಂಡವರು, ಎಡೆಬಿಡದೆ ಹಿಂಬಾಲಿಸಿದ ಅವರ ನಾಯಿ ಸ್ವರ್ಗ ಸೇರಿತ್ತಾ?
