Home » Pahalgam Attack: ಇಂದು ನಡೆಯಲಿದೆ ಕೇಂದ್ರ ಸರ್ವ ಪಕ್ಷ ಸಭೆ; ಉಗ್ರರ ದಾಳಿ ಮೆಟ್ಟಿ ನಿಲ್ಲುವ ಬಗ್ಗೆ ಚರ್ಚೆ!

Pahalgam Attack: ಇಂದು ನಡೆಯಲಿದೆ ಕೇಂದ್ರ ಸರ್ವ ಪಕ್ಷ ಸಭೆ; ಉಗ್ರರ ದಾಳಿ ಮೆಟ್ಟಿ ನಿಲ್ಲುವ ಬಗ್ಗೆ ಚರ್ಚೆ!

0 comments

Pahalgam Attack: ಇವತ್ತು ಕೇಂದ್ರ ಸರ್ವ ಪಕ್ಷ ಸಭೆ ಕರೆದಿದೆ. ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌ ನೇತೃತ್ವದಲ್ಲಿ ಸರ್ವ ಪಕ್ಷ ಸಭೆ ನಡೆಯಲಿದೆ.

ವಿಪಕ್ಷಗಳ ನಾಯಕರ ಅಭಿಪ್ರಾಯವನ್ನು ರಕ್ಷಣಾ ಸಚಿವರು ಕೇಳಲಿದ್ದಾರೆ. ಭಯೋತ್ಪಾದಕರ ದಾಳಿ ಬೆನ್ನಲ್ಲೇ ವಿರೋಧ ಪಕ್ಷದ ನಾಯಕ ರಾಹುಲ್‌ ಗಾಂಧಿ ಅವರು ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರಿಗೆ ಕರೆ ಮಾಡಿ ಮಾತನಾಡಿದ್ದಾರೆ. ಇಂದು ನಡೆಯುವ ಸಭೆಯಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ರಾಹುಲ್‌ ಗಾಂಧಿ ಸೇರಿ ಹಲವು ಪ್ರಮುಖರು ಭಾಗಿಯಾಗಲಿದ್ದಾರೆ.

You may also like