New Delhi: ಇಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಸರ್ಕಾರದ ಅರ್ಥಿಳ ವ್ಯವಹಾರಗಳ ಸಚಿವ ಸಂಪುಟ ಸಮಿತಿ ಈ ಬಾರಿಯ ಮಾರುಕಟ್ಟೆ ಸಮಯದಲ್ಲಿ ಹಲವು ಖಾರಿಫ್ ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆ (MSP) ಹೆಚ್ಚಿಸಲು ಅನುಮೋದನೆ ನೀಡಿದ್ದು, ಸಾಮಾನ್ಯ ಭತ್ತ, ಹೆಸರು ಕಾಳು, ಉದ್ದಿನಬೇಳೆ, ತೊಗರಿ ಸೇರಿದಂತೆ ಹಲವು ಬೆಳೆಗಳಿಗೆ ಬೆಲೆ ಹೆಚ್ಚಾಗಿದೆ.
ಸಾಮಾನ್ಯ ಭತ್ತವು ಕ್ವಿಂಟಾಲ್ ಗೆ 2369 ರೂ, ಇನ್ನೂ A ಗ್ರೇಡ್ ಗೆ 2389 ರೂ ಇದು ಹಿಂದಿನ ವರ್ಷಕ್ಕಿಂತ 69ರೂ ಹೆಚ್ಚಳವನ್ನು ಪಡೆದುಕೊಂಡಿದೆ. ತೊಗರಿಯನ್ನು 400 ರಿಂದ 8,000 , ಉದ್ದು 400 ಇಂದ 7,800 ಕ್ಕೆ ಇರಿಸಲಾಗಿದೆ.
ಈ ಕುರಿತಾಗಿ ಮಾತನಾಡಿದಂತಹ ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವರಾದಂತಹ ಅಶ್ವಿನಿ ವೈಷ್ಣವ್ ಅವರು ರೈತರಿಗೆ ಅವರು ಬೆಳೆದಂತಹ ಬೆಳೆಗೆ ನ್ಯಾಯಯುತವಾದ ಬೆಳೆ ನೀಡುವುದು ಸರ್ಕಾರದ ಉದ್ದೇಶವಾಗಿದೆ ಎಂದು ತಿಳಿಸಿದ್ದಾರೆ. ತದನಂತರ ನೈಜರ್ ಬೀಜಗಳು ಹೆಚ್ಚಿನ ಹೆಚ್ಚಳವನ್ನು ಪಡೆದಿದ್ದು, ನಂತರದ ಸ್ಥಾನವನ್ನು ರಾಗಿ, ಹತ್ತಿ ಮತ್ತು ಎಳ್ಳು ಪಡೆದುಕೊಂಡಿದೆ.
