Home » Priyank Kharge: ಕುಂಭಮೇಳ ಕಾಲ್ತುಳಿತ ಹಾಗೂ ಪೆಹಲ್ಗಾಮ್ ದಾಳಿಯ ಹೊರೆ ಹೊತ್ತು ಕೇಂದ್ರ ನಾಯಕರು ರಾಜೀನಾಮೆ ನೀಡಲಿ- ಪ್ರಿಯಾಂಕ್ ಖರ್ಗೆ

Priyank Kharge: ಕುಂಭಮೇಳ ಕಾಲ್ತುಳಿತ ಹಾಗೂ ಪೆಹಲ್ಗಾಮ್ ದಾಳಿಯ ಹೊರೆ ಹೊತ್ತು ಕೇಂದ್ರ ನಾಯಕರು ರಾಜೀನಾಮೆ ನೀಡಲಿ- ಪ್ರಿಯಾಂಕ್ ಖರ್ಗೆ

0 comments
Priyank Kharge iamge

Priyank Kharge: ಚಿನ್ನಸ್ವಾಮಿ ಕ್ರೀಡಾಂಗಣದ ದುರಂತ ಈಗಾಗಲೇ ರಾಜಕೀಯ ಚದುರಂಗವಾಗಿದ್ದು, ಒಬ್ಬರಾದ ಮೇಲೊಬ್ಬರಂತೆ ದಾಳಗಳನ್ನು ಉರುಳಿಸುತ್ತಿದ್ದಾರೆ. ಇದೀಗ ವಿರೋಧ ಪಕ್ಷದ ಹೇಳಿಕೆಗಳಿಗೆ ಪ್ರಿಯಾಂಕ್ ಖರ್ಗೆ ಪ್ರತಿಕ್ರಿಯೆ ನೀಡಿದ್ದು, ನಾವು ಅಧಿಕಾರಿಗಳನ್ನು ಅಮಾನತು ಮಾಡಿದ್ದೇವೆ, ಯಾರನ್ನು ಬಲಿಪಶು ಮಾಡಿಲ್ಲ ಹಾಗೂ ರಾಜೀನಾಮೆ ನೀಡುವುದಿಲ್ಲ ಎಂದಿದ್ದಾರೆ.

ಈಗಾಗಲೇ ಈ ಕುರಿತಾಗಿ ತನಿಖೆಗಳು ನಡೆಯುತ್ತಿದ್ದು, ಅದರಂತೆ ಮುಂದಿನ ನಡೆ ಇರುತ್ತದೆ. ಯಾವುದೇ ಕಾರಣಕ್ಕೂ ರಾಜೀನಾಮೆ ನೀಡುವುದಿಲ್ಲ ಎಂದಿದ್ದಾರೆ. ರಾಜೀನಾಮೆ ವಿಷಯಕ್ಕೆ ಬಂದರೆ ಪೆಹಲ್ಗಾಮ್ ದಾಳಿಗಾಗಿ ಹಾಗೂ ಕುಂಭಮೇಳ ಕಾಲ್ತುಳಿತದ ಹೊರೆ ಹೊತ್ತು ಅಮಿತ್ ಶಾ ನೀಡಲಿ, ವೈಫಲ್ಯಕ್ಕೆ ಜೈ ಶಂಕರ್ ನೀಡಲಿ, ಮೋದಿ ರಾಜೀನಾಮೆ ನೀಡಲಿ ಎಂದು ಖರ್ಗೆ ಹೇಳಿದ್ದಾರೆ. ನಮ್ಮಿಂದ ತಪ್ಪಾಗಿದೆ, ನಾವು ಅದರ ಜವಾಬ್ದಾರಿ ಹೊತ್ತು ಪರಿಶೀಲನೆ ನಡೆಸುತ್ತಿದ್ದೇವೆ ಎಂದು ತಿಳಿಸಿದ್ದಾರೆ.

You may also like