Home » Chaithra kundapura: ಅಪ್ಪನ `ಸುಫಾರಿ’ ಆರೋಪಕ್ಕೆ ಟಾಂಗ್ ನೀಡಿದ ಚೈತ್ರಾ ಕುಂದಾಪುರ: ಅಡಿಕೆ ಹಿಡಿದು ಪೋಸ್ಟ್!

Chaithra kundapura: ಅಪ್ಪನ `ಸುಫಾರಿ’ ಆರೋಪಕ್ಕೆ ಟಾಂಗ್ ನೀಡಿದ ಚೈತ್ರಾ ಕುಂದಾಪುರ: ಅಡಿಕೆ ಹಿಡಿದು ಪೋಸ್ಟ್!

0 comments

Chaithra kundapura: ಬಿಗ್ ಬಾಸ್ ಖ್ಯಾತಿಯ ಚೈತ್ರಾ ಕುಂದಾಪುರ (Chaithra kundapura) ಮದುವೆ ಆದ ಮೇಲೆ, ತಂದೆ ಮಗಳಿಗೆ ಕೌಟುಂಬಿಕ ಜಗಳ ಬರೀ ಬಾಯಿ ಮಾತಿನಲ್ಲೇ ಇತ್ತು. ಆದರೆ ಇದೀಗ ಚೈತ್ರಾ ಕುಂದಾಪುರ ನನಗೆ ಜೀವ ಬೆದರಿಕೆ ಹಾಕಿದ್ದಾಳೆ ಎಂದು ತಂದೆ ಬಾಲಕೃಷ್ಣ ನಾಯ್ಕ್ ಅವರು ಕುಂದಾಪುರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ಚೈತ್ರಾ ಕುಂದಾಪುರ ನೇರವಾಗಿ ನನ್ನ ಜೀವ ತೆಗೆಯಲು ಸುಪಾರಿ ನೀಡಿದ್ದಾರೆ. ನನ್ನ ಆಸ್ತಿ ಹಾಗೂ ಭೂಮಿಗಾಗಿ ನನ್ನನ್ನ ಬಲಿ ಪಡೆಯಬಹುದು. ಭೂಗತ ದೊರೆಗಳ ಮೂಲಕ ಜೀವ ತೆಗೆಸುವುದಾಗಿ ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಿದ್ದಾರೆ.

ತಂದೆಯ ಈ ಆರೋಪಕ್ಕೆ ಈಗ ಚೈತ್ರಾ ಕುಂದಾಪುರ ಅವರು ಸಾಮಾಜಿಕ ಮಾಧ್ಯಮದಲ್ಲಿ ಸಖತ್ ಟಾಂಗ್ ಕೊಟ್ಟಿದ್ದಾರೆ. ಸುಪಾರಿ ಆರೋಪಕ್ಕೆ ಅಡಿಕೆ ಹಿಡಿದು ಚೈತ್ರಾ ಕುಂದಾಪುರ ಅವರು ಫೋಟೋಗೆ ಫೋಸ್ ಕೊಟ್ಟಿದ್ದಾರೆ.

ಸೋಷಿಯಲ್‌ ಮೀಡಿಯಾದಲ್ಲಿ ಫೋಟೋ ಪೋಸ್ಟ್ ಮಾಡಿರುವ ಅವರು ಹೀಗೆ ತೋಟದಲ್ಲಿ ಓಡಾಡುವಾಗ ಒಂದು ಅಡಿಕೆ ಸಿಕ್ಕಿತು. ಇದಕ್ಕೆ ಹಿಂದಿಯಲ್ಲಿ ‘ಸುಪಾರಿ’ ಅಂತಾರೆ. ತುಳುವಿನಲ್ಲಿ ಏನಂತಾರೆ?? ಎಂದು ಪ್ರಶ್ನಿಸಿದ್ದಾರೆ. ಪೋಸ್ಟ್ ನೋಡಿದ ನೆಟ್ಟಿಗರು ಅನೇಕ ರೀತಿಯಲ್ಲಿ ಕಾಮೆಂಟ್ಸ್ ಹಾಕಿದ್ದಾರೆ.

You may also like