Home » Biggboss kannada: ಚೈತ್ರ ಕುಂದಾಪುರ್ ಬಿಗ್ ಬಾಸ್ ಮನೆಯಿಂದ ಔಟ್?!: ಕಾನೂನು ಸಂಕಷ್ಟದಲ್ಲಿ ಲಾಕ್ ಆದ ಚೈತ್ರ!

Biggboss kannada: ಚೈತ್ರ ಕುಂದಾಪುರ್ ಬಿಗ್ ಬಾಸ್ ಮನೆಯಿಂದ ಔಟ್?!: ಕಾನೂನು ಸಂಕಷ್ಟದಲ್ಲಿ ಲಾಕ್ ಆದ ಚೈತ್ರ!

0 comments

Biggboss kannada: ಕನ್ನಡದ ಜನಪ್ರಿಯ ರಿಯಾಲಿಟಿ ಶೋ ಆಗಿರುವ ಬಿಗ್ ಬಾಸ್ ಕನ್ನಡ ಸೀಸನ್ 11 ಆರಂಭವಾಗಿ ಈಗಾಗಲೇ ಮೂರು ದಿನಗಳಾಗಿವೆ. ಈ ಬಾರಿ 17 ಸ್ಪರ್ಧಿಗಳು ಬಿಗ್ ಬಾಸ್ ಮನೆಗೆ ಎಂಟ್ರಿ ನೀಡಿದ್ದು, ಈ ಸ್ಪರ್ಧಿಗಳ ಪೈಕಿ ಚೈತ್ರ ಕುಂದಾಪುರ್ ಕೂಡಾ ಒಬ್ಬರು.

ಆದ್ರೆ ಟಾಸ್ಕ್ ಹೊರತಾಗಿ ಚೈತ್ರ ಕುಂದಾಪುರ್ ಶೀಘ್ರದಲ್ಲಿ ಬಿಗ್ ಬಾಸ್ ಮನೆಯಿಂದ ಔಟ್ ಆಗುವ ಎಲ್ಲಾ ಲಕ್ಷಣಗಳು ಕಾಣುತ್ತಿದೆ. ಹೌದು, ಯಾಕಂದ್ರೆ ಚೈತ್ರಾ ಕುಂದಾಪುರ ಅವರು ಕಾನೂನು ಬಲೆಯಲ್ಲಿ ಸಿಕ್ಕಿಕೊಂಡಿದ್ದಾರೆ.

ಚೈತ್ರಾ ಕುಂದಾಪುರ ಅವರ ಮೇಲಿರುವ ಹಳೆಯ ದೂರುಗಳೇ ಇವರು ಬಿಗ್ ಬಾಸ್ ರಿಯಾಲಿಟಿ ಶೋ ನಲ್ಲಿ ಮುಂದುವರೆಯುವುದಕ್ಕೆ ಬಹುಷಃ ಅಸಾಧ್ಯ ಅನಿಸುತ್ತಿದೆ. 

ಯಾಕೆಂದರೆ ಇದೀಗ ಚೈತ್ರ ಕುಂದಾಪುರ್ ಅವರನ್ನು ಬಿಗ್ ಬಾಸ್ ಆಟದಿಂದ ಕೈ ಬಿಡಬೇಕು ಎಂದು ಈಗಾಗಲೇ ಆಗ್ರಹಿಸಿ ವಕೀಲ ಭೋಜರಾಜ್ ಮುಖಾಂತರ ಕಲರ್ಸ್ ವಾಹಿನಿಗೆ ನೋಟೀಸ್ ಕಳುಹಿಸಲಾಗಿದೆ.

 ವಕೀಲ ಭೋಜರಾಜ್ ಅವರ ಮುಖಾಂತರ ನೀಡಿದ ನೋಟಿಸ್ ಪ್ರಕಾರ, ಚೈತ್ರ ಕುಂದಾಪುರ್ ಅವರನ್ನು ಕೂಡಲೇ ಬಿಗ್ ಬಾಸ್ ಮನೆಯಿಂದ ಹೊಇರ ಕಳುಹಿಸಬೇಕು. ಇಲ್ಲವಾದರೆ ವಾಹಿನಿ ವಿರುದ್ದ ಕಾನೂನು ಕ್ರಮ ಜರಗಿಸುವುದಾಗಿ ಎಚ್ಚರಿಸಿದ್ದಾರೆ. 

ಇನ್ನು ಚೈತ್ರ ಕುಂದಾಪುರ್ ವಿರುದ್ದ ಗಲಾಟೆ, ದೊಂಬಿ, ಜೀವ ಬೆದರಿಕೆ ವಂಚನೆ ಮುಂತಾದ ಪ್ರಕರಣಗಳು ದಾಖಲಾಗಿರುವ ಹಿನ್ನಲೆ ಅವರನ್ನು ಸ್ಪರ್ಧಿಯಾಗಿ ಮುಂದುವರೆಸಿದರೆ ಸಮಾಜಕ್ಕೆ ತಪ್ಪು ಸಂದೇಶ ರವಾನೆಯಾಗುತ್ತದೆ. ಇಷ್ಟೆಲ್ಲಾ ಅಪರಾಧ ಹಿನ್ನೆಲೆಯುಳ್ಳ ವ್ಯಕ್ತಿಗೆ ಇಂತಹ ಜನಪ್ರಿಯ ಕಾರ್ಯಕ್ರಮದಲ್ಲಿ ಭಾಗವಹಿಸಲು ಅವಕಾಶ ಕೊಟ್ಟಿರುವುದು ಎಷ್ಟು ಸರಿ? ಹೀಗಾಗಿ ಈ ಕೂಡಲೇ ಅವರನ್ನು ಬಿಗ್ ಬಾಸ್ ಮನೆಯಿಂದ ಹೊರಕಳಿಸುವಂತೆ ನೋಟಿಸ್ ಕಳುಹಿಸಲಾಗಿದೆ

You may also like

Leave a Comment