Home » Chaitra Kundapura: ಬಿಗ್ ಬಾಸ್ ಮನೆಯಲ್ಲಿದ್ದ ಚೈತ್ರಾ ಕುಂದಾಪುರ ಇದ್ದಕ್ಕಿದ್ದಂತೆ ಜೈಲಿಗೆ ಶಿಫ್ಟ್ !! ಕಾರಣವೇನು?

Chaitra Kundapura: ಬಿಗ್ ಬಾಸ್ ಮನೆಯಲ್ಲಿದ್ದ ಚೈತ್ರಾ ಕುಂದಾಪುರ ಇದ್ದಕ್ಕಿದ್ದಂತೆ ಜೈಲಿಗೆ ಶಿಫ್ಟ್ !! ಕಾರಣವೇನು?

1 comment

Chaitra Kundapura: ಬಿಗ್ ಬಾಸ್ ಕನ್ನಡ-11ರ(Bigg Boss Kannada-11) ಆವೃತ್ತಿ ಹೊರ ರೂಪುಗಳೊಂದಿಗೆ ಆರಂಭವಾದರೂ ಇದೀಗ ಮತ್ತೆ ಹಳೆಯ ವರಸೆಗಳಿಗೆ ಬದಲಾಗಿದೆ. ಹಿಂದಿನ ಸೀಸನ್ ಗಳಲ್ಲಿದ್ದ ಸಂಪ್ರದಾಯಗಳೇ ಮತ್ತೆ ಮರುಕಳಿಸುವಂತಾಗಿದೆ. ಇದೀಗ ಈ ಬೆನ್ನಲ್ಲೇ ಬಿಗ್ ಬಾಸ್ ಮನೆಯ ಪ್ರಬಲ ಸ್ಪರ್ಧಿ ಚೈತ್ರಾ ಕುಂದಾಪುರ(Chaitra Kundapura) ಅವರು ದಿಢೀರ್ ಎಂದು ಜೈಲಿಗೆ ಶಿಫ್ಟ್ ಆಗಿದ್ದಾರೆ.

ಹೌದು, ಉದ್ಯಮಿ ಒಬ್ಬರಿಗೆ ಟಿಕೆಟ್ ಕೊಡಿಸೋ ಆಮಿಷ ಒಡ್ಡಿ 5 ಕೋಟಿ ರೂಪಾಯಿ ಹಣ ಪಡೆದ ಆರೋಪದ ಮೇಲೆ ಜೈಲು ಸೇರಿ ಬಂದಿದ್ದ ಚೈತ್ರಾ ಕುಂದಾಪುರ ಈಗ ಅವರು ಬಿಗ್ ಬಾಸ್​ ಮನೆಯಲ್ಲೂ ಜೈಲು ಸೇರಿದ್ದಾರೆ. ಹಾಗಂತ ಹೊರಗಿನ ಜೈಲಲ್ಲ. ಬಿಗ್ ಬಾಸ್ ಮನೆಯಲ್ಲಿ ಇರೋ ಜೈಲು !!

ಯಸ್, ಪ್ರತಿ ಬಿಗ್ ಬಾಸ್​ ಸೀಸನ್​ನಲ್ಲೂ ಜೈಲು ಇಡಲಾಗುತ್ತದೆ. ಕಳಪೆ ಕಾರಣ ನೀಡಿ ಪ್ರತಿ ವಾರ ಒಬ್ಬರನ್ನು ಜೈಲಿಗೆ ಕಳುಹಿಸಲಾಗುತ್ತದೆ. ಈ ಬಾರಿ ಪ್ರಕ್ರಿಯೆಯಲ್ಲಿ ಕೊಂಚ ಬದಲಾವಣೆ ಮಾಡಲಾಗಿದೆ. ಅಪ್ರಾಮಣಿಕ ಹಾಗೂ ಕುತಂತ್ರಿ ಯಾರು ಎಂದು ಸೂಚಿಸಬೇಕು ಮತ್ತು ಅದಕ್ಕೆ ಸೂಕ್ತ ಕಾರಣ ನೀಡಬೇಕು. ಅಂತಿಮವಾಗಿ ಯಾರ ಬಳಿ ಹೆಚ್ಚು ಹಣೆಪಟ್ಟಿ ಇರುತ್ತದೆಯೋ ಅವರು ಜೈಲು ಸೇರಬೇಕು. ಇದರ ಅನುಸಾರ ಚೈತ್ರಾ ಕುಂದಾಪುರ ಅವರು ಅತಿ ಹೆಚ್ಚು ಹಣೆಪಟ್ಟಿ ಪಡೆದುಕೊಂಡಿದ್ದಾರೆ. ಈ ಕಾರಣಕ್ಕೆ ಅವರು ಜೈಲು ಸೇರಿದ್ದಾರೆ.

You may also like

Leave a Comment