Chamarajanagar Farmer: ದುಡ್ಡು ಇದ್ರೆ ದುನಿಯಾ ಅನ್ನೋ ಈ ಕಾಲಕ್ಕೆ ಸರಿಯಾಗಿ ಮನುಷ್ಯರು ಕೂಡ ಬದಲಾಗಿದ್ದಾರೆ. ಕೇವಲ ಆಸ್ತಿಯನ್ನು ನೋಡಿ ಹೆತ್ತವರು ಹೆಣ್ಣು ಕೊಡುವುದು ಸಾಮಾನ್ಯ ವಿಷಯವಾಗಿದೆ. ಇನ್ನು ರೈತರಿಗೆ ಹೆಣ್ಣು ಕೊಡಲ್ಲ ಅನ್ನೋ ಗಾದೆ ಕೂಡ ಸೃಷ್ಟಿ ಆಗಿದೆ ಎಂದರೆ ತಪ್ಪಾಗಲಾರದು. ಇದೀಗ ರೈತನೊಬ್ಬ ತನ್ನ ತಾಕತ್ತು ಹೇಗೆ ತೋರಿಸಿಕೊಂಡಿದ್ದಾನೆ ಎಂದರೆ ನೀವೇ ಆಶ್ಚರ್ಯ ಪಡುತ್ತೀರಿ.
ರೈತನಿಗೆ (Farmer) ನಮ್ಮ ಮಗಳನ್ನು ಮದುವೆ ಮಾಡಿಕೊಡುವುದಿಲ್ಲವೆಂದು ಪೋಷಕರು ಹೇಳುತ್ತಿದ್ದರೇ, ನಾವು ಕೃಷಿಕನನ್ನು ಮದುವೆಯಾಗುವುದಿಲ್ಲ (Marriage) ಸರ್ಕಾರಿ ಕೆಲಸ ಅಥವಾ ಐಟಿ-ಬಿಟಿ ಉದ್ಯೋಗಸ್ಥನೇ ಬೇಕು ಎಂದು ಹುಡುಗಿಯರು ಹೇಳುತ್ತಿದ್ದಾರೆ. ಹೆಣ್ಣು ನೋಡಿದ ಕಡೆ ಎಲ್ಲಾ ಈ ಮಾತನ್ನು ಕೇಳಿದ ಚಾಮರಾಜನಗರ ತಾಲೂಕಿನ ಲಕ್ಷ್ಮೀಪುರದ ಯುವ ರೈತ (Chamarajanagar Farmer) ರಾಜೇಂದ್ರ ಅವಮಾನಗೊಂಡಿದ್ದು ಅಲ್ಲದೇ ಈ ಮಾತನ್ನು ಸವಾಲನ್ನಾಗಿ ಸ್ವೀಕರಿಸಿದ್ದಾನೆ.
ರೈತ ರಾಜೇಂದ್ರ ನಾನು ಸರ್ಕಾರಿ ಉದ್ಯೋಗಿ ಮತ್ತು ಐಟಿ-ಬಿಟಿ ಉದ್ಯೋಗಸ್ಥರಿಗಿಂತ ಕೃಷಿಯಲ್ಲೇ ಹೆಚ್ಚು ಆದಾಯ ಗಳಿಸುತ್ತೇನೆಂದು ಹಠದಲ್ಲಿ, ಅದರಂತೆ ಲಕ್ಷ್ಮೀಪುರದಲ್ಲಿ ತನ್ನ 12 ಎಕರೆ ಜಮೀನಿನಲ್ಲಿ ಟೊಮೆಟೋ ಬೆಳೆ ಬೆಳೆದಿದ್ದಾರೆ. ಆರು ತಿಂಗಳಲ್ಲಿ ಫಸಲು ಬಂದಿದ್ದು, ಈಗ ಟೊಮೆಟೋ ದರ ಏರಿಕೆಯಾಗಿದ್ದು, ಒಳ್ಳೆ ಬೆಲೆಗೆ ಮಾರಾಟ ಮಾಡಿ ಕೋಟ್ಯಾಧಿಪತಿಯಾಗಿದ್ದಾರೆ.
ಈಗ ಟೊಮೆಟೋ ಬೆಳೆ ಕೈ ಹಿಡಿದ ಪರಿಣಾಮ ಹೊಸ ಮಹೇಂದ್ರ XUV 700 ಕಾರು ಖರೀದಿಸಿ ಅದರಲ್ಲೇ ಹುಡುಗಿ ನೋಡಲು ಹೋಗುತ್ತೇನೆಂದು ಯುವ ರೈತ ರಾಜೇಂದ್ರ ಹೆಮ್ಮೆಯಿಂದ ಹೇಳುತ್ತಿದ್ದಾರೆ. ಕೃಷಿ ನಮ್ಮನ್ನು ಎಂದಿಗೂ ಕೈ ಬಿಡುವುದಿಲ್ಲ ಎಂದು ಧೈರ್ಯದಿಂದ ಹೇಳಿಕೊಂಡಿದ್ದಾರೆ.
ಇದನ್ನೂ ಓದಿ: Rain Alert: ಕಟ್ಟೆಚ್ಚರ….!!!! ಮಹಾ ಮಳೆಗೆ ಮುಹೂರ್ತ, 3 ದಿನ ಭಾರೀ ಮಳೆಯಾಗುವ ಮುನ್ಸೂಚನೆ !
