Channapattana By Election: ಚನ್ನಪಟ್ಟಣ ಉಪಚುನಾವಣೆ (Channapatna By Election) ಸಂಬಂಧ ದೋಸ್ತಿಗಳ ಟಿಕೆಟ್ ಫೈಟ್, ಸಭೆ, ಚರ್ಚೆಗಳ ಜೋರಾಗಿದೆ. ಈ ನಡುವೆ ಸಿ ಪಿ ಯೋಗೇಶ್ವರ್ ಎರಡೂ ಪಕ್ಷದವರಿಗೆ ದೊಡ್ಡ ತಲೆನೋವಾಗಿ ಪರಿಣಮಿಸದ್ದಾರೆ. ಅವರ ಲಾಭಿ ಇಬ್ಬರ ನಿದ್ದೆಗೆಡಿಸಿವೆ.
ಯೋಗೇಶ್ವರ್ (CP Yogeshwar) ಪರ ಲಾಬಿ ಮಾಡಿದ್ದರೂ ಜೆಡಿಎಸ್ (JDS) ನ ಕೋಟೆ ಉಳಿಸಿಕೊಳ್ಳಲು ಕುಮಾರಸ್ವಾಮಿ (HD Kumaraswamy) ಕಸರತ್ತು ನಡೆಸಿದ್ದಾರೆ. ಈ ಹಿನ್ನೆಲೆಯಲ್ಲಿ ಗುರುವಾರ ರಾತ್ರಿ ಪ್ರಹ್ಲಾದ್ ಜೋಷಿ (Pralhad Joshi) ನಿವಾಸದಲ್ಲಿ ನಡೆದ ಸಭೆಯಲ್ಲಿ ಹೆಚ್‌ಡಿ ಕುಮಾರಸ್ವಾಮಿ, ಪ್ರತಿ ಪಕ್ಷದ ನಾಯಕ ಆರ್ ಅಶೋಕ್, ಕೇಂದ್ರ ಸಚಿವ ಸೋಮಣ್ಣ, ಸಂಸದ ಬೊಮ್ಮಾಯಿ, ಅಶ್ವತ್ಥ ನಾರಾಯಣ್, ಅರವಿಂದ್ ಬೆಲ್ಲದ್, ಪರಿಷತ್ ಸದಸ್ಯ ಸಿಟಿ ರವಿ ಭಾಗಿಯಾಗಿ ಟಿಕೆಟ್ ವಿಚಾರವಾಗಿ ಚರ್ಚಿಸಿದ್ದಾರೆ ಎನ್ನಲಾಗಿದೆಗಿದೆ.
ಈ ಸಭೆಯಲ್ಲಿ ಬಿಜೆಪಿ ನಾಯಕರು ಚನ್ನಪಟ್ಟಣ ಟಿಕೆಟ್ ಅನ್ನು ಯೋಗೇಶ್ವರ್ ಗೆ ನೀಡಿ ಎಂದು ಹೇಳಿದರೆ ಕುಮಾರಸ್ವಾಮಿ ಇದಕ್ಕೆ ಒಪ್ಪಿಗೆ ಸೂಚಿಸಿಲ್ಲ ಎಂದು ಮೂಲಗಳು ತಿಳಿಸಿವೆ. ಅಷ್ಟೇ ಅಲ್ಲದೆ ಯಾರಿಗೆ ನೀಡಬೇಕು ಎನ್ನುವುದು ಅಂತಿಮವಾಗಿಲ್ಲ. ಮಾಜಿ ಪ್ರಧಾನಿ ದೇವೇಗೌಡರ ಎಂಟ್ರಿ ಬಳಿಕವೇ ಟಿಕೆಟ್ ಗೊಂದಲ ಪರಿಹಾರವಾಗುವ ಸಾಧ್ಯತೆಯಿದೆ ಎನ್ನಲಾಗಿದೆ. ಇನ್ನು ಮೈತ್ರಿ ನಾಯಕರು ಸೇರಿ ಮೂರು ಒಪ್ಪಿಗೆ ನಿರ್ಣಯಗಳನ್ನು ಕೈಗೊಂಡಿದ್ದಾರೆ ಎಂದು ತಿಳಿದುಬಂದಿದ್ದು ಅವು ಈ ರೀತಿ ಇವೆ.
ದೋಸ್ತಿಗಳ ಮಧ್ಯೆ 3 ಒಪ್ಪಿತ ಸೂತ್ರ:
1. ಹೆಚ್‌ಡಿಕೆ ಮನವೊಲಿಸಿ ಸಿಪಿ ಯೋಗೇಶ್ವರ್‌ಗೆ ಟಿಕೆಟ್ ಕೊಡಿಸುವುದು
2. ಜೆಡಿಎಸ್ ಚಿನ್ಹೆಯಿಂದಲೇ ಸಿಪಿವೈ ಸ್ಪರ್ಧೆಗೆ ಒಪ್ಪಿಕೊಳ್ಳುವುದು
3. ದೋಸ್ತಿಗಳಿಂದ ಒಪ್ಪಿತ 3ನೇ ವ್ಯಕ್ತಿಯನ್ನ ಅಭ್ಯರ್ಥಿ ಮಾಡುವುದು
ಸಿ ಪಿ ಯೋಗೇಶ್ವರ್ ನ ಮುಂದಿನ ಆಯ್ಕೆಗಳು:
* ಚನ್ನಪಟ್ಟಣದಲ್ಲಿ ಜೆಡಿಎಸ್ ಅಭ್ಯರ್ಥಿಯನ್ನೇ ಕಣಕ್ಕಿಳಿಸಬೇಕು ಎಂದಾದರೆ ನಾನು ಆ ಪಕ್ಷದ ಅಭ್ಯರ್ಥಿಯಾಗುತ್ತೇನೆ.
* ಒಂದು ವೇಳೆ ಜೆಡಿಎಸ್ ಪಟ್ಟು ಸಡಿಲಿಸದಿದ್ದರೆ ಬಿಜೆಪಿ ಮೈತ್ರಿ ಮುರಿದುಕೊಳ್ಳಬೇಕು. ತ್ರಿಕೋನ ಸ್ಪರ್ಧೆ ನಡೆಯಲಿದೆ. ಆಗ ಯಾರ ಶಕ್ತಿ ಎಷ್ಟು ಎಂಬುದು ಗೊತ್ತಾಗಲಿದೆ. ನಾನು ಗೆದ್ದು ತೋರಿಸುತ್ತೇನೆ.
* ಒಂದು ವೇಳೆ ಟಿಕೆಟ್ ನೀಡದಿದ್ದರೆ ನಾನು ಬಿಎಸ್‌ಪಿಯಿಂದ ಸ್ಪರ್ಧಿಸುತ್ತೇನೆ. ಈ ಬಗ್ಗೆ ಬಿಎಸ್‌ಪಿ ನಾಯಕರ ಜತೆಗೆ ಚರ್ಚೆ ನಡೆಸಿದ್ದೇನೆ. ಅವರು ಬಿ-ಫಾರಂ ನೀಡಲು ಒಪ್ಪಿದ್ದಾರೆ.
