Chattisgarh: ಇಂದು ಇಡೀ ಜಗತ್ತೇ ಮೊಬೈಲ್ ಫೋನ್(Mobile phone)ಒಳಗೆ ಮುಳುಗಿದೆ. ಮೊಬೈಲ್ ಇದ್ದರೆ ಎಲ್ಲದೂ, ಕೈನಲ್ಲಿ ಮೊಬೈಲ್ ಫೋನ್ ಇದ್ದರೆ ಜಗತ್ತೂ ಕಾಣುವುದಿಲ್ಲ ಎಂಬುದಕ್ಕೆ ಸಾಕ್ಷಿ ಎಂಬಂತೆ ಛತ್ತೀಸ್‌ಗಢ(Chattisgarh) ದಲ್ಲಿ ವಿಚಿತ್ರ ಘಟನೆಯೊಂದು ನಡೆದಿದ್ದು, ಒಂದೆರಡಲ್ಲ ಬರೋಬ್ಬರಿ 21 ಲಕ್ಷ ಲೀಟರ್ ಡ್ಯಾಮ್ ನೀರು ಅಧಿಕಾರಿಯ ದರ್ಪ, ಅಹಂಕಾರದಿಂದಾಗಿ ಪೋಲಾಗಿ ಹೋಗಿದೆ.
ಹೌದು, ಸರ್ಕಾರಿ ಅಧಿಕಾರಿ(Government Officer) ಒಬ್ಬ ತನ್ನ ಬೇಜವಾಬ್ದಾರಿತನದಿಂದ ಮೊಬೈಲ್ ಫೋನ್ಅನ್ನು ಅಣೆಕಟ್ಟಿನ(Dam) ಒಳಗಡೆ ಬೀಳಿಸಿ ಆ ನಂತರ ಅಲ್ಲಿರುವ ನೀರನ್ನು ಸಂಪೂಣರ್ವಾಗಿ ಹೊರತೆಗೆದಿರುವ ಘಟನೆ ಛತ್ತೀಸ್ಗಢದ ಕಂಕೇರ್ ಜಿಲ್ಲೆಯ ಕೊಯಿಲಿಬೀಡಾ ಬ್ಲಾಕ್‌ನ(Koilibida) ಖೇರ್ಕಟ್ಟಾ(Kherkatta) ಅಣೆಕಟ್ಟಿನಲ್ಲಿ ನಡೆದಿದೆ.
ಮೇ 21 ರಂದು ಆಹಾರ ಇಲಾಖೆ ಅಧಿಕಾರಿ(Food Officer) ರಾಜೇಶ್ ವಿಶ್ವಾಸ್(Rajesh vishwas) ತಮ್ಮ ಸ್ನೇಹಿತರ ಜೊತೆ ಪಾರಾಲ್ಕೋಟ್‌ಗೆ ಹೋಗಿದ್ದರು. ಪಾರ್ಟಿ ಮಾಡುವ ವೇಳೆ ಅವರ 1.5 ಲಕ್ಷ ರೂಪಾಯಿಯ ಮೊಬೈಲ್ ಡ್ಯಾಮ್‌ನ ನೀರಿನಲ್ಲಿ ಬಿದ್ದಿತ್ತು. ಆ ರಾತ್ರಿಯಿಡೀ ಮೊಬೈಲ್ ಹುಡುಕಿದರೂ ಪ್ರಯೋಜನವಾಗಲಿಲ್ಲ. ಮರುದಿನ ಬೆಳಗ್ಗೆ ಗ್ರಾಮದಲ್ಲಿ ಈಜು ಬರುವ ವ್ಯಕ್ತಿಗಳು ಹಾಗೂ ಡೈವರ್‌ಗಳನ್ನು ಬಳಸಿಕೊಂಡು ಹುಡುಕುವ ಪ್ರಯತ್ನ ಮಾಡಿದರೂ ಯಶಸ್ವಿಯಾಗಲಿಲ್ಲ. ಕೊನೆಯ ಮಾರ್ಗ ಎನ್ನುವಂತೆ ಇಡೀ ಡ್ಯಾಮ್‌ನ ನೀರನ್ನೇ ಅಧಿಕಾರಿ ಖಾಲಿ ಮಾಡಿದ್ದಾರೆ. ಮೋಟಾರ್ ಪಂಪ್ ಬಳಸಿ ಸತತ ನಾಲ್ಕು ದಿನ ಡ್ಯಾಮ್‌ನ ನೀರನ್ನು ಖಾಲಿ ಮಾಡಿದ್ದಾರೆ. ಅಂದಾಜು 1500 ಎಕರೆ ಭೂಮಿಗೆ ಆಧಾರವಾಗಬಲ್ಲ ನೀರು ಅಧಿಕಾರಿಯ ಮೊಂಡುತನಕ್ಕೆ ಸಂಪೂರ್ಣವಾಗಿ ಪೋಲಾಗಿ ಹೋಗಿದೆ. ಇಷ್ಟೆಲ್ಲಾ ಸಾಹಸ ಮಾಡಿದ ಬಳಿಕ ರಾಜೇಶ್ ಅವರಿಗೆ ಮೊಬೈಲ್ ಕೂಡ ಸಿಕ್ಕಿದೆ.
ಅಂದಹಾಗೆ ಡ್ಯಾಮ್‌ನಲ್ಲಿ ಬಿದ್ದ ತನ್ನ 1.5 ಲಕ್ಷ ರೂಪಾಯಿಯ ಮೊಬೈಲ್‌ಅನ್ನು ಪತ್ತೆ ಮಾಡುವ ಸಲುವಾಗಿ ಇಡೀ ಡ್ಯಾಮ್‌ನ(Dam) ನೀರನ್ನು ಪಂಪ್(Pump) ಹಾಕಿಸಿ ಖಾಲಿ ಮಾಡಿಸಿದ್ದ ಫುಡ್ ಇನ್ಸ್‌ಪೆಕ್ಟರ್(Inspector) ಅನ್ನು ಛತ್ತೀಸ್‌ಗಢ ರಾಜ್ಯದ ಕಂಕೆರ್ ಜಿಲ್ಲೆಯ ಜಿಲ್ಲಾಧಿಕಾರಿ ಪ್ರಿಯಾಂಕಾ ಶುಕ್ಲಾ, ಶುಕ್ರವಾರ(Friday) ಅಮಾನತು ಮಾಡಿದ್ದಾರೆ. ಒಟ್ಟಾರೆ. 1500 ಎಕರೆ ಭೂಮಿಗೆ ಹೋಗಬೇಕಿದ್ದ ನೀರು ಅಧಿಕಾರಿಯ ಅಹಂಕಾರದಿಂದಾಗಿ ಸುಮ್ಮನೆ ಪೋಲಾಗಿ ಹೋಗಿರುವುದು ನಿಜವಾಗಿಯೂ ದುರಂತವೇ ಸರಿ.
ಈ ಕುರಿತಾಗಿ ನೀರಾವರಿ ಇಲಾಖೆಗೆ ದೂರು ದಾಖಲಾದ ಬೆನ್ನಲ್ಲಿಯೇ ಸ್ಥಳಕ್ಕೆ ಧಾವಿಸಿದ ನೀರಾವರಿ ಇಲಾಖೆಯ ಅಧಿಕಾರಿ, ಡ್ಯಾಮ್‌ನಿಂದ ನೀರು ಹೊರತೆಗೆಯುವ ಪ್ರಕ್ರಿಯೆಯನ್ನು ನಿಲ್ಲಿಸಿದ್ದಾರೆ. ಆದರೆ, ಅವರು ಬಂದು ತಡೆಯುವ ವೇಳೆಗೆ ಡ್ಯಾಮ್‌ನಲ್ಲಿ ಕೇವಲ 6 ಅಡಿಗಳಷ್ಟು ನೀರು ಮಾತ್ರವೇ ಉಳಿದುಕೊಂಡಿತ್ತು. ಅಂದಾಜು 21 ಲಕ್ಷ ಲೀಟರ್ ನೀರನ್ನು ಡ್ಯಾಮ್‌ನಿಂದ ಹೊರಹಾಕಲಾಗಿತ್ತು. ನನಗೆ ಯಾವುದೇ ಮಾಹಿತಿ ನೀಡದೇ ನೀರನ್ನು ಖಾಲಿ ಮಾಡಲಾಗಿದೆ ಎಂದು ನೀರಾವರಿ ಇಲಾಖೆಯ ಎಸ್‌ಡಿಓ ಆರ್‌ಸಿ ಧೀವರ್ ತಿಳಿಸಿದ್ದಾರೆ.
ಇಷ್ಟೆಲ್ಲಾ ಆದರೂ ಅಣಕಟ್ಟಿನಲ್ಲಿರುವ ನೀರನ್ನು ಖಾಲಿ ಮಾಡಿಸಿ ಮೊಬೈಲ್ ಫೋನ್ ಹುಡುಕಿಸಿರುವ ಕುರಿತು ಅಧಿಕಾರಿ ರಾಜೇಶ್ ವಿಶ್ವಾಸ್ ಪ್ರತಿಕ್ರಿಯಿಸಿದ್ದು ಪಂಪ್ ಮಾಡಿದ ನೀರು ಉಪಯೋಗಕ್ಕೆ ಯೋಗ್ಯವಲ್ಲವಾದ್ದರಿಂದ ಕಳೆದು ಹೋದ ಮೊಬೈಲ್ ಫೋನ್ ತನ್ನ ವೈಯಕ್ತಿ ಆದ್ದುದರಿಂದ ಅನೇಕ ಪ್ರಮುಖ ಸಂಪರ್ಕಗಳಿದ್ದರಿಂದ ಹುಡುಕಿಸ ಬೇಕಾಯಿತ್ತು. ನೀರನ್ನು ಹೊರತೆಗೆಯಲು ಸುಮಾರು 7,000-8,000 ಸಾವಿರ ರೂಪಾಯಿ ಮೌಲ್ಯದ ಡೀಸೆಲ್ ಬಳಸಲಾಗಿದ್ದು ಈ ಬಗ್ಗೆ ಜಲಸಂಪನ್ಮೂಲ ಇಲಾಖೆ ಅಧಿಕಾರಿಗಳಿಮದ ಮೌಖಿಕವಾಗಿ ಆದೇಶ ಹೊರಡಿಸಲಾಗಿತ್ತು. ನನ್ನ ಕ್ರಮದಿಂದ ಯಾರಿಗೂ ಹಾನಿಯಾಗಿಲ್ಲ ಎಂದು ತಮ್ಮ ನಡೆಯನ್ನು ಸಮರ್ಥಿಸಿಕೊಂಡಿದ್ದಾರೆ.
ಇನ್ನು ಅಧಿಕಾರಿಯ ನಡೆ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಡಿದ ನಂತರ ಅಣೆಕಟ್ಟಿನ ಸುತ್ತಮುತ್ತಲಿನ ಗ್ರಾಮದ ರೈತರು ಹಾಗು ನಿವಾಸಿಗಳು ಆಕ್ರೋಶ ಹೊರಹಾಕಿದ್ದು ಜಲ ಮಂಡಳಿ ವಿರುದ್ಧ ಪ್ರತಿಭಟನೆಯನ್ನು ನಡೆಸಿದ್ದಾರೆ. ಪ್ರತಿಭಟೆಯ ಕಾವು ಹೆಚ್ಚಾಗುತ್ತಿದ್ದಂತೆ ಕಳಂಕಿತ ಅಧಿಕಾರಿಯನ್ನು ಸೇವೆಯಿಂದ ವಜಾ ಮಾಡಿ ಕಂಕೇರ್ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ.
पखांजुर में फूड इंस्पेक्टर ने अपना मोबाइल निकालने के लिए जलाशय को खाली कर दिया! यह सामान्य बात नहीं है! भूपेश सरकार आने के बाद हर जिले में, हर स्तर पर प्रशासनिक आतंकवाद चरम पर है!
अधिकारी बेलगाम हैं, गली-गली में कांग्रेस सरकार बदनाम है!@bhupeshbaghel pic.twitter.com/0oraGIoRjd
— Rajesh munat (@RajeshMunat) May 26, 2023
ಇದನ್ನು ಓದಿ: Australia: ಮೋದಿ ಭೇಟಿ ಬೆನ್ನಲ್ಲೇ ಭಾರತದ ಈ 6 ರಾಜ್ಯಗಳ ವಿದ್ಯಾರ್ಥಿಗಳಿಗೆ ನಿಷೇಧ ಹೇರಿದ ಆಸ್ಟ್ರೇಲಿಯಾ! ಕಾರಣವೇನು ಗೊತ್ತಾ?
