Home » Chemicals: ಬೆಲ್ಲ, ಟೊಮೇಟೋ ಸಾಸ್‌ನಲ್ಲೂ ರಾಸಾಯನಿಕ; ಪರೀಕ್ಷೆಯಲ್ಲಿ ದೃಢ

Chemicals: ಬೆಲ್ಲ, ಟೊಮೇಟೋ ಸಾಸ್‌ನಲ್ಲೂ ರಾಸಾಯನಿಕ; ಪರೀಕ್ಷೆಯಲ್ಲಿ ದೃಢ

0 comments

Banglore: ಇಡ್ಲಿ ಬೇಯಿಸಲು ಪ್ಲಾಸ್ಟಿಕ್‌ ಹಾಳೆ ಬಳಕೆ ಹಾನಿಕಾರಕ ಎಂದು ಖಚಿತವಾದ ಬೆನ್ನಲ್ಲೇ ಟೊಮೆಟೋ ಸಾಸ್‌ ಹಾಗೂ ಬೆಲ್ಲದ ಕೆಲವು ವಿಧಗಳಲ್ಲಿ ರಾಸಾಯನಿಕ ಕಲಬೆರಕೆ ಆಗಿರುವ ಅಂಶ ಮೇಲ್ನೋಟಕ್ಕೆ ಕಂಡು ಬಂದಿರುವ ಕುರಿತು ವರದಿಯಾಗಿದೆ.

ಬೆಲ್ಲದ ಎಂಟು ಮಾದರಿಗಳನ್ನು ಸಂಗ್ರಹಿಸಿದ ಆಹಾರ ಇಲಾಖೆಯು ಪರೀಕ್ಷೆಗೆ ಒಳಪಡಿಸಿದಾಗ, ಬೆಲ್ಲದ ಕೆಲವು ವಿಧಗಳು ಅಸುರಕ್ಷಿತ ಎಂದು ವರದಿ ಬಂದಿತ್ತು. ಕೆಲವು ಟೊಮೇಟೋ ಸಾಸ್‌ ಮಾದರಿಗಳನ್ನು ಕೂಡಾ ಸಂಗ್ರಹ ಮಾಡಿದ್ದು, ಪರಿಶೀಲಿಸಿದಾಗ ಇವುಗಳಲ್ಲಿ ಕೆಲವು ಅಸುರಕ್ಷಿತ ಎಂಬ ವರದಿ ಬಂದಿದೆ.

You may also like