Home » Chennai: ಭಾರೀ ಮಳೆಗೆ ಎಂಟು ಅಡಿ ಆಳದ ಸಿಂಕ್‌ಹೋಲ್‌ಗೆ ಬಿದ್ದ ಕಾರು

Chennai: ಭಾರೀ ಮಳೆಗೆ ಎಂಟು ಅಡಿ ಆಳದ ಸಿಂಕ್‌ಹೋಲ್‌ಗೆ ಬಿದ್ದ ಕಾರು

0 comments

Chennai: ಐದು ಪ್ರಯಾಣಿಕರನ್ನು ಹೊತ್ತೊಯ್ಯುತ್ತಿದ್ದ ಕಾಲ್ ಟ್ಯಾಕ್ಸಿಯೊಂದು ಟೈಡೆಲ್ ಪಾರ್ಕ್ ಬಳಿಯ ರಸ್ತೆ ಮಧ್ಯೆ ಆಳವಾದ ಗುಂಡಿಗೆ ಬಿದ್ದ ಘಟನೆ ನಡೆದಿದೆ.

ಈ ಘಟನೆ ಶನಿವಾರ (ಮೇ 17) ಸಂಜೆ 6.30 ರ ವೇಳೆಗೆ ಸಂಭವಿಸಿದೆ. ಕ್ಯಾಬ್‌ ಚಾಲಕ  ಶನಿವಾರ ಸಂಜೆ ಶೋಲಿಂಗನಲ್ಲೂರಿನ ಸಾಫ್ಟ್‌ವೇರ್ ಕಂಪನಿ ಸಿಬ್ಬಂದಿ ವಿಘ್ನೇಶ್, ಅವರ ಪತ್ನಿ ಮತ್ತು ಇಬ್ಬರು ಮಕ್ಕಳನ್ನು ಪಿಕಪ್‌ ಮಾಡಿ, ಅವರು ಸೆಂಟ್ರಲ್ ರೈಲ್ವೆ ನಿಲ್ದಾಣದ ಕಡೆಗೆ ಹೋಗುತ್ತಿದ್ದರು. ಸಿಗ್ನಲ್ ಬಳಿ ಚಲಿಸುತ್ತಿದ್ದಾಗ, ರಸ್ತೆ ಇದ್ದಕ್ಕಿದ್ದಂತೆ ಕುಸಿದು ಅವರು ಪ್ರಯಾಣಿಸುತ್ತಿದ್ದ ಕಾರು ಹೊಂಡಕ್ಕೆ ಬಿದ್ದಿದೆ.

ಕಾರನ್ನು ಶೋಲಿಂಗನಲ್ಲೂರಿನ ಮಾರಿಯದಾಸ್ (47) ಚಲಾಯಿಸುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಉಳಿದವರನ್ನು ವಿಘ್ನೇಶ್ (42), ಅವರ ಪತ್ನಿ ಧನ್ಯಾ (32) ಮತ್ತು ಇಬ್ಬರು ಮಕ್ಕಳು ಎಂದು ಗುರುತಿಸಲಾಗಿದೆ.

ಕರ್ತವ್ಯದಲ್ಲಿದ್ದ ಸಂಚಾರ ಪೊಲೀಸ್ ಸಿಬ್ಬಂದಿ ಮತ್ತು ಇತರ ವಾಹನ ಚಾಲಕರು ಕೂಡಲೇ ಅವರ ರಕ್ಷಣೆಗೆ ಧಾವಿಸಿದರು. ಚೆನ್ನೈ ಮೆಟ್ರೋ ರೈಲು ಲಿಮಿಟೆಡ್ ಗುತ್ತಿಗೆದಾರರ ಸಹಾಯದಿಂದ ಪ್ರಯಾಣಿಕರನ್ನು ಸುರಕ್ಷಿತವಾಗಿ ಹೊಂಡದಿಂದ ಹೊರತೆಗೆಯಲಾಗಿದೆ. ಯಾವುದೇ ದೊಡ್ಡ ಗಾಯಗಳು ವರದಿಯಾಗಿಲ್ಲ. ತಕ್ಷಣ ಪೊಲೀಸ್ ಸಿಬ್ಬಂದಿ ರಸ್ತೆಯನ್ನು ಸುತ್ತುವರೆದು ಸಂಚಾರವನ್ನು ಬೇರೆಡೆಗೆ ತಿರುಗಿಸಿದರು.

ಏತನ್ಮಧ್ಯೆ, CMRL ಸೈಟ್ ಹೋರ್ಡಿಂಗ್‌ನಿಂದ ಸುಮಾರು 300 ಮೀಟರ್ ದೂರದಲ್ಲಿ ತಿರುವನ್ಮಿಯೂರ್ ಮತ್ತು ತಾರಾಮಣಿ ನಡುವೆ ಸಿಂಕ್‌ಹೋಲ್ ಸಂಭವಿಸಿದೆ ಎಂದು CMRL ತಿಳಿಸಿದೆ. “ಮೇಲಿನ ಸಿಂಕ್ ಹೋಲ್ CMRL ನ ಯಾವುದೇ ಕೆಲಸಕ್ಕೆ ಸಂಬಂಧಿಸಿಲ್ಲ ಎಂದು ನಾವು ತಿಳಿಸಲು ಮತ್ತು ದೃಢೀಕರಿಸಲು ಬಯಸುತ್ತೇವೆ. ಆ ಪ್ರದೇಶದಲ್ಲಿ ಹಾದುಹೋಗುವ 2.2 ಮೀಟರ್ ವ್ಯಾಸದ ಒಳಚರಂಡಿ ಮಾರ್ಗದಲ್ಲಿ ಶಂಕಿತ ಸೋರಿಕೆಯೇ ಸಿಂಕ್‌ಹೋಲ್‌ಗೆ ಕಾರಣ” ಎಂದು CMRL ಹೇಳಿಕೆಯಲ್ಲಿ ತಿಳಿಸಿದೆ.

 

You may also like